Asianet Suvarna News Asianet Suvarna News

ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್: ಕಾಂಗ್ರೆಸ್‌ನಿಂದ ತೇಲಿ ಬಂತು ಅಚ್ಚರಿ ಹೆಸರು

ಬೆಳಗಾವಿ ಲೋಕಸಭಾ ಉಪಚುನಾವಣೆಗ ಇನ್ನೂ ದಿನಾಂಕ ಪ್ರಕಟವಾಗಿಲ್ಲ. ಆಗಲೇ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಶುರುವಾಗಿದೆ.

District Leaders Demands To Satish jarkiholi contest To Belagavi Loksabha By poll rbj
Author
Bengaluru, First Published Nov 21, 2020, 3:52 PM IST

ಬೆಳಗಾವಿ, (ನ.21): ಸರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆಗೆ ಉಪಚುನಾವಣೆ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಿದ್ಧತೆಗಳನ್ನ ನಡೆಸಿದೆ.

"

 ಲೋಕಸಭಾ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು  ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ.

ಕರ್ನಾಟಕದಲ್ಲಿ ಮತ್ತೊಂದು ಬೈ ಎಲೆಕ್ಷನ್: ಕೈ ಅಭ್ಯರ್ಥಿ ಆಯ್ಕೆಗೆ ಸಮಿತಿ ರಚಿಸಿದ ಡಿಕೆಶಿ

ಅದರಂತೆ ಎಂಬಿ ಪಾಟೀಲ್ ಮೊದಲ ಸುತ್ತಿನಲ್ಲಿ ಜಿಲ್ಲೆಯ ನಾಯಕರುಗಳ ಜತೆ ಸಭೆ ನಡೆಸಿದ್ದು, ಈ ವೇಳೆ ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ  ಸತೀಶ್ ಜಾರಕಿಹೊಳಿ‌ ಅವರು ಕಣಕ್ಕಿಳಿಯುವಂತೆ ಜಿಲ್ಲೆಯ ನಾಯಕರು ಒತ್ತಾಯಿಸಿದ್ದಾರೆ. 

ಬೆಳಗಾವಿಯ ಕಾಂಗ್ರೆಸ್ ‌ಭವನದಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ಗೆ ಚುನಾಣೆಗೆ ಸ್ಪರ್ಧಿಸುವಂತೆ ಜಿಲ್ಲಾ ಮುಖಂಡರ ಮನವಿ ಮಾಡಿದರು.

ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್: ಕಣಕ್ಕಿಳಿಯುಲು ರೆಡಿ ಎಂದ ಕೈ ಕಲಿ..!

ಬೆಳಗಾವಿ, ಗೋಕಾಕ, ಸವದತ್ತಿಯಲ್ಲಿ ಸತೀಶ್ ಜಾರಕಿಹೊಳಿ‌ ಅವರಿಗೆ ಹಿಡಿತ ಇದೆ. ಈ ಕಾರಣಕ್ಕೆ ತಾವೇ ಕಣಕ್ಕಿಳಿಯುವಂತೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಫಿರೋಜ್ ಸೇಠ್ ಆಗ್ರಹಿಸಿದ್ದಾರೆ. ಅಲ್ಲದೇ  ಸತೀಶ್ ಒಬ್ಬರ ಹೆಸರನ್ನೇ ಬೆಳಗಾವಿಯಿಂದ ಕೆಪಿಸಿಸಿಗೆ ಕಳಿಸುವಂತೆ ಜಿಲ್ಲಾ ನಾಯಕರು ಎಂಬಿ ಪಾಟೀಲ್ ಬಳಿ ವಿನಂತಿಸಿದ್ದಾರೆ.

Follow Us:
Download App:
  • android
  • ios