ರೈತರಿಗೆ ನೀರು ಹಂಚುವುದೇ ಸಂಸದರ ಕೆಲಸವಲ್ಲ: ಶಾಸಕ ಕೆ.ಎಂ.ಶಿವಲಿಂಗೇಗೌಡ

ಜಿಲ್ಲೆಯಲ್ಲಿ ಇನ್ನೂ 1,42,000 ಕ್ವಿಂಟಲ್‌ ಕೊಬ್ಬರಿ ಬಾಕಿಯಿದ್ದು, ಕ್ಯೂನಲ್ಲಿ ನಿಂತ ರೈತರಿಗೆ ನೀರು ಹಂಚಿ ಸಮಾಧಾನ ಹೇಳುವುದಷ್ಟೇ ಅಲ್ಲ. ಸಂಸದರಾದವರು ಕೇಂದ್ರದಲ್ಲಿ ಜಾಂಡಾ ಹೂಡಿ ಬಾಕಿ ಉಳಿದಿರುವ ಎಲ್ಲಾ ಕೊಬ್ಬರಿಯನ್ನೂ ಖರೀದಿಸುವಂತೆ ಕೇಂದ್ರದ ಮೇಲೆ ಒತ್ತಡ ತರಬೇಕು. 
 

Distribution of water to farmers is not MPs job Says MLA KM Shivalinge Gowda gvd

ಹಾಸನ (ಮಾ.11): ಜಿಲ್ಲೆಯಲ್ಲಿ ಇನ್ನೂ 1,42,000 ಕ್ವಿಂಟಲ್‌ ಕೊಬ್ಬರಿ ಬಾಕಿಯಿದ್ದು, ಕ್ಯೂನಲ್ಲಿ ನಿಂತ ರೈತರಿಗೆ ನೀರು ಹಂಚಿ ಸಮಾಧಾನ ಹೇಳುವುದಷ್ಟೇ ಅಲ್ಲ. ಸಂಸದರಾದವರು ಕೇಂದ್ರದಲ್ಲಿ ಜಾಂಡಾ ಹೂಡಿ ಬಾಕಿ ಉಳಿದಿರುವ ಎಲ್ಲಾ ಕೊಬ್ಬರಿಯನ್ನೂ ಖರೀದಿಸುವಂತೆ ಕೇಂದ್ರದ ಮೇಲೆ ಒತ್ತಡ ತರಬೇಕು. ಆ ಮೂಲಕ ಸಂಸದರ ಜವಾಬ್ದಾರಿ ಏನು ಎನ್ನುವುದನ್ನು ತೋರಿಸಲಿ ಎಂದು ಶಾಸಕ ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಒತ್ತಾಯಿಸಿದರು.

ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಈಗ ಜೆಡಿಎಸ್‌ ನವರೂ ಬಿಜೆಪಿ ಸೇರಿಕೊಂಡಿದ್ದಾರಲ್ಲಾ. ಹೋಗಿ ಹೇಳಲಿ. ರಾಜ್ಯದಲ್ಲಿ ಇನ್ನೂ 1.42 ಲಕ್ಷ ಕ್ವಿಂಟಲ್‌ ಕೊಬ್ಬರಿ ಬಾಕಿ ಉಳಿಸಿದೆ. ಪ್ರತಿ ರೈತರಿಂದ ಕೇವಲ 15 ಕ್ವಿಂಟಲ್‌ ಕೊಬ್ಬರಿ ಖರೀದಿ ಮಾಡಿದರೆ ಸಾಕೇ. ಉಳಿದ ಕೊಬ್ಬರಿ ಏನು ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಸಂಸದರು ಅರ್ಥ ಮಾಡಿಸಬೇಕು. ರಾಜ್ಯದಲ್ಲಿ ೩ ಲಕ್ಷ ಹೆಚ್ಚುವರಿ ಕೊಬ್ಬರಿ ಖರೀದಿಸಿದ್ದರೆ ಇವರ ಮನೆ ಗಂಟೇನು ಹೋಗುವುದಿಲ್ಲ. ಎಂದು ಸಂಸದ ಪ್ರಜ್ವಲ್ ರೇವಣ್ಣ ಬಗ್ಗೆ ವಾಗ್ದಾಳಿ ನಡೆಸಿದರು

ರಾಜ್ಯದ ಜನರು ಪ್ರಧಾನಿ ಮೋದಿ ಪರ ನಿಲ್ಲಬೇಕು: ಎಚ್.ಡಿ.ರೇವಣ್ಣ

ನಫೆಡ್ ಮೂಲಕ ಕೇಂದ್ರ ಸರ್ಕಾರ ಕೊಬ್ಬರಿ ಖರೀದಿ ಮಾಡಿದೆ. ಹಾಸನ ಜಿಲ್ಲೆಯಲ್ಲಿ ಒಟ್ಟು ೧೮,೮೭೯ ಜನ ನೋಂದಾಯಿತ ಕೊಬ್ಬರಿ ಬೆಳೆಗಾರರಿದ್ದು ೩.೬೨,೦೦೦ ಟನ್ ಕೊಬ್ಬರಿ ಬೆಳೆಯಲಾಗಿದೆ. ಆದರೆ ಕೇಂದ್ರ ಪ್ರತಿ ರೈತರಿಂದ ಕೇವಲ ೧೫ ಕ್ವಿಂಟಲ್ ಕೊಬ್ಬರಿ ಖರೀದಿಗೆ ಸೀಮಿತ ಮಾಡಿದ್ದು, ಇದರಿಂದ ತೆಂಗು ಬೆಳಗಾರರಿಗೆ ಅನ್ಯಾಯ ಆಗಿದೆ. ಜಿಲ್ಲೆಯಲ್ಲಿ ಈಗಾಗಲೇ ನಾಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡಿಯೂ ಇನ್ನೂ ೧,೪೨,೦೦೦ ಸಾವಿರ ಕ್ವಿಂಟಲ್ ಕೊಬ್ಬರಿ ಬಾಕಿ ಉಳಿದಿದ್ದು ಖರೀದಿ ಪ್ರಮಾಣ ಹೆಚ್ಚಿಸಿ ಉಳಿದಿರುವ ಕೊಬ್ಬರಿಯನ್ನೂ ಖರೀದಿ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಹಾಸನ ಜಿಲ್ಲೆಯಲ್ಲಿ ಪಡಬಾರದ ಕಷ್ಟಪಟ್ಟು ರೈತರು ಅರ್ಧದಷ್ಟು ಕೊಬ್ಬರಿಯನ್ನು ಮಾರಾಟ ಮಾಡಿದ್ದಾರೆ. ಇಡೀ ರಾತ್ರಿ ಸರತಿ ಸಾಲಿನಲ್ಲಿ ನಿಂತು ರೈತರು ಕಷ್ಟ ಅನುಭವಿಸಿ ಕೊಬ್ಬರಿ ಮಾರಿದ್ದಾರೆ. ಸರಿಯಾಗಿ ಊಟ ತಿಂಡಿ ಕೂಡ ಮಾಡೋದಕ್ಕು ರೈತರಿಗೆ ಆಗಿಲ್ಲ. ಈಗ ಕೇವಲ ೨.೨೦ ಲಕ್ಷ ಕ್ವಿಂಟಲ್ ಕೊಬ್ಬರಿ ಖರೀದಿ ಆಗಿದೆ. ವಾರ್ಷಿಕ ಉತ್ಪಾದನೆಯಾದ ಕೊಬ್ಬರಿಯಲ್ಲಿ ಇನ್ನೂ ೧.೩೦ ಲಕ್ಷ ಕ್ವಿಂಟಲ್ ಉಳಿದಿದೆ. ಕೇಂದ್ರ ಸರ್ಕಾರ ಉತ್ಪಾದನೆ ಆದ ಸಂಪೂರ್ಣ ಕೊಬ್ಬರಿ ಖರೀದಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ನಮ್ಮ ರಾಜ್ಯದಿಂದ ಸುಮಾರು ೩ ಲಕ್ಷ ಕ್ವಿಂಟಾಲ್ ನಷ್ಟು ಮಾತ್ರ ಕೊಬ್ಬರಿ ಹೆಚ್ಚುವರಿಯಾಗಿ ಖರೀದಿಸಬೇಕಾಗುತ್ತದೆ. ಅದೇನು ದೊಡ್ಡ ವಿಷಯವಲ್ಲ. ಕೇಂದ್ರ ಮನಸ್ಸು ಮಾಡಿ ಶೀಘ್ರವೇ ಎಲ್ಲಾ ಕೊಬ್ಬರಿ ಖರೀದಿಸಬೇಕು. ಕಳೆದ ಬಾರಿ ದೇಶಾದ್ಯಂತ ರೈತರು ಪ್ರತಿಭಟಿಸಿದ ವೇಳೆ ಸಾಮಾನ್ಯ ಬೆಂಬಲ ಬೆಲೆ ನೀಡಿ ರೈತರ ಉತ್ಪನ್ನ ಖರೀದಿಸುವುದಾಗಿ ಭರವಸೆ ನೀಡಿದ್ರು. ಈಗ ಆ ಭರವಸೆಯಂತೆ ಕೆಂದ್ರ ನಡೆದುಕೊಳ್ಳುತ್ತಿಲ್ಲ ಎಂದು ಗರಂ ಆದರು.

ಶ್ರೇಯಸ್‌ ಒಕ್ಕೋರಲಿನ ಅಭ್ಯರ್ಥಿ: ಕಳೆದ ಬಾರಿಯ ಚುನಾವಣೆ ವೇಳೆ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಇತ್ತು. ಈ ಬಾರಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಒಕ್ಕೋರಲಿನಿಂದ ಹಾಸನದ ಅಭ್ಯರ್ಥಿಯನ್ನ ಘೋಷಣೆ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಬಲದಿಂದ ಶ್ರೇಯಸ್ ಪಟೇಲ್ ಆಯ್ಕೆಯಾಗಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ₹114 ಕೋಟಿ ವೆಚ್ಚದ ರೋಪ್‌ ವೇ ನಿರ್ಮಾಣ: ನಿತಿನ್‌ ಗಡ್ಕರಿ ಘೋಷಣೆ

ಈ ಬಾರಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯ, ಶಿವಕುಮಾರ್ ಈಗಾಗಲೇ ಎರಡು ಬಾರಿ ಜಿಲ್ಲೆಗೆ ಬಂದಿದ್ದಾರೆ. ಮುಂದೆ ಚುನಾವಣೆ ವೇಳೆ ಮತ್ತೆ ಬರುತ್ತಾರೆ. ಕ್ಷೇತ್ರವಾರು ಪ್ರವಾಸ ಮಾಡಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಡಿಸಿದರಕ್ತಿನ್ನು ಮಾಜಿ ಸಚಿವ ಬಿ. ಶಿವರಾಂ ಅವರಿಗೆ ತಮ್ಮನ್ನು ಲೋಕಸಭೆ ಅಭ್ಯರ್ಥಿಯಾಗಿ ನಿಲ್ಲಿಸಬೇಕೆಂದು ಆಸೆ ಇತ್ತು. ಈಗ ಹೈಕಮಾಂಡ್ ಹೇಳಿರುವುದರಿಂದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಗೋಪಾಲಸ್ವಾಮಿ, ಕಾಂಗ್ರೆಸ್ ಮುಖಂಡ ಹೆಚ್.ಕೆ. ಮಹೇಶ್ ಇತರರು ಇದ್ದರು.

Latest Videos
Follow Us:
Download App:
  • android
  • ios