ಹೇಳಿ ಕೇಳಿ ಚುನಾವಣೆ ಋುತು ಇದು. ರಾಜಕೀಯ ನಾಯಕರ ಪ್ರಚಾರ ಭರಾಟೆ, ಹೇಳಿಕೆ-ಪ್ರತಿ ಹೇಳಿಕೆಗಳು ಹೇರಳವಾಗಿವೆ. ಮತದಾರರಿಗೆ ವಿವಿಧ ಪಕ್ಷಗಳ ಬಹಿರಂಗ ಭರವಸೆಗಳು ಯಥೇಚ್ಛವಾಗಿ ಹರಿದಿವೆ. ಮತದಾರರ ಓಲೈಸಲು ತೆರೆಮರೆಯಲ್ಲೂ ನಾನಾ ಕಸರತ್ತುಗಳು ನಡೆದಿವೆ.

ಬೆಂಗಳೂರು: ಹೇಳಿ ಕೇಳಿ ಚುನಾವಣೆ ಋುತು ಇದು. ರಾಜಕೀಯ ನಾಯಕರ ಪ್ರಚಾರ ಭರಾಟೆ, ಹೇಳಿಕೆ-ಪ್ರತಿ ಹೇಳಿಕೆಗಳು ಹೇರಳವಾಗಿವೆ. ಮತದಾರರಿಗೆ ವಿವಿಧ ಪಕ್ಷಗಳ ಬಹಿರಂಗ ಭರವಸೆಗಳು ಯಥೇಚ್ಛವಾಗಿ ಹರಿದಿವೆ. ಮತದಾರರ ಓಲೈಸಲು ತೆರೆಮರೆಯಲ್ಲೂ ನಾನಾ ಕಸರತ್ತುಗಳು ನಡೆದಿವೆ. ಜನ ಸಂಪನ್ಮೂಲ-ಧನ ಸಂಪನ್ಮೂಲ ಕ್ರೋಢೀಕರಣ, ಪೂಜೆ-ಪುನಸ್ಕಾರ ಹೋಮ-ಹವನಗಳೊಂದಿಗೆ ದೇವ-ದೈವಗಳಿಗೆ ಮೊರೆ, ಹಬ್ಬ-ಉತ್ಸವಗಳಿಗೂ ಚುನಾವಣಾ ಸ್ಪರ್ಶ, ನಾಯಕರಷ್ಟೇ ಅಲ್ಲ ಕಾರ್ಯಕರ್ತರ ಪಕ್ಷಾಂತರ, ಬಾಜಿ-ಪಂಥಾಹ್ವಾನ... ಹೀಗೆ ನಾನಾ ಘಟನೆಗಳು ಜರುಗುತ್ತಿವೆ. ಕೆಲವು ಕಂಡದ್ದು, ಇನ್ನು ಕೆಲವು ಕಾಣದ್ದು. ಇಂತಹ ವಿಶಿಷ್ಟವಿದ್ಯಮಾನಗಳಿವು. 

ಎಲೆಕ್ಷನ್‌(Karnataka assembly election) ಹತ್ತಿರ ಬರ್ತಾ ಇದೆಯಲ್ಲ. ಸೋ, ಮತದಾನದ ಕಡೆಯ ಮೂರು ದಿನ ತಮ್ಮ ಭಾಗ್ಯವಿದಾತರಾದ ಮತದಾರರಿಗೆ(Voters) ದಕ್ಷಿಣೆ ನೀಡಲು ನಾಡಿನ ಎಲ್ಲ ದೊರೆಗಳು ಕ್ಯಾಶ್‌(cash) ಅನ್ನು ಈಗಲೇ ಸೇಫ್‌ ಮಾಡತೊಡಗಿದ್ದಾರಂತೆ. ಅರ್ಥಾತ್‌, ತಮ್ಮ ಕ್ಷೇತ್ರದಲ್ಲಿ ನೂರಾರು ಬ್ಯಾಂಕ್‌ ಅರ್ಥಾತ್‌ ನಂಬಿಕೆಯ ಕಾರ್ಯಕರ್ತರ ಸೇಫ್‌ ಲಾಕರ್‌ (ಫಾರ್ಮ ಹೌಸ್‌, ಹಳೆ ಬಾವಿ, ಪುರಾತನರ ಮನೆ, ಗುಜರಿ ಅಂಗಡಿ ಹೀಗೆ ನಾನಾ ಕಡೆ)ನಲ್ಲಿ ಇಡುತ್ತಿದ್ದಾರಂತೆ.

ಮತದಾರರನ್ನು ಸೆಳೆಯಲು 'ತ್ರಿ' ಪಕ್ಷಗಳು ಪ್ಲಾನ್: ರಾಜ್ಯದಲ್ಲಿ ಶುರುವಾಯ್ತು ಗಿಫ್ಟ್ ಪಾಲಿಟಿಕ್ಸ್

ಹೀಗೆ ಲಾಕರ್‌ಗಳಿಗೆ ಕ್ಯಾಶ್‌ ತುಂಬಲು ತಮ್ಮ ಅತ್ಯಂತ ನಂಬಿಕೆಯ ಚಾಲಕರನ್ನು ವಾಹನದೊಂದಿಗೆ ಕಳುಹಿಸುತ್ತಾರಂತೆ. ಥೇಟ್‌ ಇದೇ ಮಾದರಿಯಲ್ಲಿ ಬೆಂಗಳೂರು ನಗರದ ನಾಯಕರ ‘ಮಾಲ್‌ದಾರ್‌’ ಚೇಲಾ ಎನಿಸಿದ ಮಾಗಡಿ ರಸ್ತೆ(Magadi road)ಯ ಕುಬೇರರೊಬ್ಬರು ತಮ್ಮ ಚಾಲಕನೊಂದಿಗೆ ಒಂದು ವಾಹನ ತುಂಬ ಕ್ಯಾಶ್‌ ಹಾಗೂ ಸಾಕಷ್ಟುಬಂಗಾರವನ್ನು ಲಾಕರ್‌ವೊಂದರಲ್ಲಿ ಇಡಲು ಕಳುಹಿಸಿದ್ದರಂತೆ.

ಆದರೆ, ಆ ಚಾಲಕ ಮಾಲ್‌ನೊಂದಿಗೆ ನಾಪತ್ತೆ!

ಗಾಬರಿ ಬಿದ್ದ ಚೇಲಾ ಹಾಗೂ ಅವರ ನಾಯಕರು ಆತನನ್ನು ಹುಡುಕಿಸಲು ಎಲ್ಲ ಪ್ರಯತ್ನ ಪಟ್ಟು ಸುಸ್ತಾದರಂತೆ. ಕಡೆಗೆ ಬೇರೆ ದಾರಿಯಿಲ್ಲದೆ, ಚಾಲಕನ ಮೇಲೆ ಸಣ್ಣದೊಂದು ಮೊತ್ತ ಲಪಟಾಯಿಸಿ ಪರಾರಿಯಾಗಿದ್ದಾನೆ ಎಂದು ದೂರು ಕೊಟ್ಟು, ಆತನ ಹಿಂದೆ ಪೊಲೀಸರನ್ನು ಬಿಟ್ಟರಂತೆ. ಒಂದು ವಾರಗಳ ಕಾಲ ಹುಡುಕಾಡಿದ ಪೊಲೀಸರಿಗೆ ಚಾಲಕ ಕಡೆಗೂ ಸಿಕ್ಕ. ಆದರೆ, ಆತನ ಜತೆಗಿದ್ದ ಕ್ಯಾಶ್‌ನ ಪ್ರಮಾಣ ನೋಡಿ ಅವರೂ ಶಾಕ್‌!

Karnataka Assembly Election 2023: ಬೆಳಗಾವಿ ಗಡಿಭಾಗದಲ್ಲಿ ಗಿಫ್ಟ್‌ ರಾಜಕೀಯ ಜೋರು..!

ಆದರೆ, ನಮ್ಮ ನಾಯಕರು ಬಹಳ ಪವರ್‌ಫುಲ್‌. ಹೇಗೋ ಮಾಡಿ ಪೊಲೀಸರ ಬಾಯಿ ಮುಚ್ಚಿಸಿ ಆ ಹಣ ರಿಕವರಿ ಮಾಡಿಕೊಂಡರಂತೆ. ಅಷ್ಟಾಗುವ ವೇಳೆಗೆ ಆ ಕ್ಯಾಶ್‌ನ ಶೇ. 25ರಷ್ಟುಮೊತ್ತ ಮಟಾಶ್‌!