ಮೂಲ ಕಾಂಗ್ರೆಸ್ಸಿಗರಿಗೆ ಬೆಲೆ ನೀಡದೇ ತನ್ನ ಬೆಂಬಲಿಗರನ್ನ ನಮ್ಮೇಲೆ ಏರುತ್ತಿದ್ದಾರೆಂದು ಮೂಲ ಕಾಂಗ್ರೆಸ್ಸಿಗರು ಆರೋಪ. 

ಹೊಸಕೋಟೆ(ಡಿ.09): ಹೊಸಕೋಟೆ ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಪಕ್ಷದ ಸಭೆಯಲ್ಲಿ ಶರತ್ ಬೆಂಬಲಿಗರು ಮತ್ತು ಮೂಲ ಕಾಂಗ್ರೆಸ್ಸಿಗರ ನಡುವೆ ಮಾತಿನ ಚಕಮಕಿ ನಡೆದಿದೆ. ಮೂಲ ಕಾಂಗ್ರೆಸ್ಸಿಗರಿಗೆ ಬೆಲೆ ನೀಡದೇ ತನ್ನ ಬೆಂಬಲಿಗರನ್ನ ನಮ್ಮೇಲೆ ಏರುತ್ತಿದ್ದಾರೆಂದು ಮೂಲ ಕಾಂಗ್ರೆಸ್ಸಿಗರು ಆರೋಪಿಸಿದ್ದಾರೆ. 

ಚೇರ್‌ಗಳನ್ನ ತೆಗೆದುಕೊಂಡು ಕಾರ್ಯಕರ್ತರು ಧಮ್ಕಿ ಹಾಕಿದ್ದಾರೆ. ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಗಲಾಟೆ ನಡೆದಿದೆ. ಸ್ವಾಭಿಮಾನಿ ಶಾಸಕ ಶರತ್ ಬಚ್ಚೇಗೌಡ್ರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. 

ಕಲಬುರಗಿ: ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಉಸ್ತುವಾರಿ ಸಚಿವ ನಿರಾಣಿ: ಬಿ.ಆರ್‌. ಪಾಟೀಲ್‌

ಇತ್ತೀಚೆಗೆ ಅನುಗೊಂಡನಹಳ್ಳಿ ಪಕ್ಷದ ಕಚೇರಿ ಉದ್ಘಾಟನೆಗೆ ಬ್ಲಾಕ್ ಅಧ್ಯಕ್ಷರ ಗಮನಕ್ಕೆ ತರದೇ ಶಾಸಕ‌ ಶರತ್ ಉದ್ಘಾಟಿಸಿದ್ದಾರೆ ಅಂತ ಆರೋಪಿಸಲಾಗಿದೆ. ಕೆಪಿಸಿಸಿಯಲ್ಲಿ ಈ ಹಿಂದೆ ಇದ್ದ ಮೂಲ ಕಾಂಗ್ರೆಸ್ಸಿಗರನ್ನ ಅವರ ಗಮನಕ್ಕೆ ತರದೇ ಶರತ್ ತಮ್ಮ ಬೆಂಬಲಿಗರಿಗೆ ಸದಸ್ಯತ್ವ ಕೋಡಿಸಿದ್ದಾರೆಂಬ ಮಾಜಿ ಕೆಪಿಸಿಸಿ ಸದಸ್ಯ ಪ್ರಸಾದ್ ಆರೋಪಿಸಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಈ ಭಿನ್ನಮತ ಶರತ್‌ಗೆ ಮುಳುವಾಗುತ್ತಾ? ಎಂಬ ಚರ್ಚೆಗಳು ಇಡೀಗ ಆರಂಭವಾಗಿವೆ.