ಬೆಂಗಳೂರು[ನ.14]: ಶಾಸಕರ ಅನರ್ಹತೆ ಕುರಿತ ಸ್ಪೀಕರ್ ನಿರ್ಣಯವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿರುವುದರಿಂದ ಈ ಶಾಸಕರು ಪ್ರಸಕ್ತ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದಲ್ಲಿ ಮಾತ್ರ ಸಚಿವ ಸ್ಥಾನ ಅಥವಾ ನಿಗಮ ಮಂಡಳಿಯ ಅಧ್ಯಕ್ಷಗಿರಿ ಪಡೆಯಲು ಸಾಧ್ಯ. ಇಲ್ಲದಿದ್ದರೆ ರಾಜಿನಾಮೆ ನೀಡಿ ಹೊರಬಂದಿದ್ದು ವ್ಯರ್ಥವಾಗುವ ಅಪಾಯವಿದೆ

ಆದರೆ, ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಗೆದ್ದು ಬಂದರೂ ಅವರಿಗೆ ಅಧಿಕಾರಯುತ ಸ್ಥಾನ ನೀಡಬಹುದಾಗಿದೆ ಎಂದು ತಿಳಿದು ಬಂದಿದೆ.

ಬೇಗ್ ಬಿಟ್ಟು ಉಳಿದೆಲ್ಲ ಅನರ್ಹರು ಬಿಜೆಪಿ ಸೇರ್ಪಡೆ

ಹಾಗಂತ ವಿಧಾನಪರಿಷತ್ತಿಗೆ ನಾಮಕರಣ ಮಾಡುವಂತಿಲ್ಲ. ಒಂದೋ ವಿಧಾನಪರಿಷತ್ತಿನ ವಿವಿಧ ಕ್ಷೇತ್ರಗಳಿಂದ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬೇಕು. ಇಲ್ಲವೇ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಗೆಲ್ಲಬೇಕು.

ಅನರ್ಹ ಶಾಸಕರ ತೀರ್ಪಿನಿಂದ ಬಿಜೆಪಿಗೇನು ಲಾಭ?

ಸದ್ಯದ ಪರಿಸ್ಥಿತಿಯಲ್ಲಿ ವಿಧಾನಪರಿಷತ್ತಿನಲ್ಲಿ ಯಾವುದೇ ಸ್ಥಾನಗಳು ಖಾಲಿ ಇಲ್ಲ. ಹೀಗಾಗಿ, ವಿಧಾನಸಭೆಯ ಪ್ರಸಕ್ತ ಉಪಚುನಾವಣೆಯಲ್ಲಿ ಸೋತವರಿಗೆ ಮುಂದೆ ವಿಧಾನಪರಿಷತ್ ಪ್ರವೇಶಿಸಲು ದಾರಿ ಮಾಡಿಕೊಡಬೇಕಾದರೆ ಬಿಜೆಪಿ ಸದಸ್ಯರಿಂದ ರಾಜೀನಾಮೆ ಪಡೆಯಬೇಕಾಗುತ್ತದೆ. ಈ ಬಗ್ಗೆ ಉಪಚುನಾವಣೆಯ ಫಲಿತಾಂಶದ ನಂತರ ಆಲೋಚಿಸಲಾಗುವುದು ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.