ಬಿಜೆಪಿಯಲ್ಲಿ ಹರಿದಾಡ್ತಿದೆ 'ಅಸಮಾಧಾನ'ದ ಆಡಿಯೋ: ಮಾಜಿ ಸಚಿವರ ಪುತ್ರನ ವಿರುದ್ಧ 'ಧ್ವನಿ' ಬಾಂಬ್ ಸ್ಫೋಟ..!
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಪ್ರಚಾರದ ವೇಳೆ ಇಬ್ಬರು ಆಪ್ತವಾಗಿ ಮಾತ್ನಾಡಿಕೊಂಡಿದ್ದ ಆಡಿಯೋ ಸದ್ಯ ವೈರಲ್ ಆಗಿದೆ. ಆಡಿಯೋದಲ್ಲಿ ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ.ಪಾಟೀಲ ಹಾಗೂ ಸಿ.ಸಿ.ಪಾಟೀಲರ ಪುತ್ರ ಉಮೇಶ್ ಗೌಡ ಬಗ್ಗೆ ಅಸಮಾಧಾನದ ಮಾತುಗಳು ಕೇಳಿ ಬಂದಿವೆ.
ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ
ಗದಗ(ಮೇ.30): ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ, ಮುಂಡರಗಿ ಬಿಜೆಪಿ ತಾಲೂಕು ಅಧ್ಯಕ್ಷ ಹೇಮಗಿರೀಶ್ ಹಾವಿನಾಳ ಅವರ ಮಧ್ಯದ ಸಂಭಾಷಣೆ ಆಡಿಯೋ ಗದಗ ಬಿಜೆಪಿ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಪ್ರಚಾರದ ವೇಳೆ ಇಬ್ಬರು ಆಪ್ತವಾಗಿ ಮಾತ್ನಾಡಿಕೊಂಡಿದ್ದ ಆಡಿಯೋ ಸದ್ಯ ವೈರಲ್ ಆಗಿದೆ. ಆಡಿಯೋದಲ್ಲಿ ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ.ಪಾಟೀಲ ಹಾಗೂ ಸಿ.ಸಿ.ಪಾಟೀಲರ ಪುತ್ರ ಉಮೇಶ್ ಗೌಡ ಬಗ್ಗೆ ಅಸಮಾಧಾನದ ಮಾತುಗಳು ಕೇಳಿ ಬಂದಿವೆ.
ಆಡಿಯೋ ಆರಂಭದಲ್ಲಿ ಹೇಮಗಿರೀಶ್ ಹಾವಿನಾಳ ಅವರು, ಸಿ.ಸಿ.ಪಾಟೀಲರ ಪುತ್ರ ಉಮೇಶ್ ಗೌಡ ಅವರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿದ್ದಾರೆ. ವಯಸ್ಸಿನಲ್ಲಿ ಹಿರಿಯರಾಗಿರೋ ಹೇಮಗಿರೀಶ ಅವರಿಗೆ ಉಮೇಶ್ ಗೌಡ ಪಾಟೀಲ ಅವರು ಏಕ ವಚನದಲ್ಲೇ ಮಾತ್ನಾಡ್ತಾರಂತೆ. ಈ ವಿಷ್ಯವನ್ನ ಹೇಮಗಿರೀಶ ಅವರು ಶಾಸಕ ಚಂದ್ರು ಲಮಾಣಿ ಅವರ ಬಳಿ ಹೇಳಿಕೊಂಡಿದ್ದಾರೆ. ಉಮೇಶ್ ಗೌಡನ ವಯಸ್ಸು ಎಷ್ಟು..? ಮಿನಿಸ್ಟರ್ ಮಗ ಅಂದ್ರೆ ಮೇಲಿಂದ ಬಂದಿದ್ದಾನಾ..? ಅಂತೆಲ್ಲ ಮಾಜಿ ಸಚಿವ ಸಿ.ಸಿ.ಪಾಟೀಲ ಪುತ್ರ ಉಮೇಶ್ ಗೌಡ ಪಾಟೀಲ ಬಗ್ಗೆ ಹೇಮಗಿರೀಶ್ ಪ್ರಸ್ತಾಪಿಸಿದ್ದಾರೆ.
ಗದಗ: ಬರ ಪರಿಹಾರ ಸಾಲಕ್ಕೆ ಜಮೆ, ವಿಷದ ಬಾಟಲಿ ಜತೆ ಬ್ಯಾಂಕಿಗೆ ಬಂದ ರೈತ..!
ಮಂಡಳ ಅಧ್ಯಕ್ಷರನ್ನ ಬಿಟ್ಟು ಬೊಮ್ಮಾಯಿ ಅವರ ಮಗ ಭರತ್ ಬೊಮ್ಮಾಯಿ ಅವರನ್ನ ಕರೆದುಕೊಂಡು ಪ್ರಚಾರ ಮಾಡಿದ್ದಾರೆ ಅಂತಾ ಉಮೇಶ್ ಗೌಡ ಅವರ ವರ್ತನೆ ಬಗ್ಗೆ ಶಾಸಕರ ಎದುರು ಹೇಮಗಿರೀಶ್ ಕಂಪ್ಲೆಂಟ್ ಮಾಡಿದ್ದಾರೆ. ಹೇಮಗಿರೀಶ್ ಅವರ ಮಾತಿಗೆ ಉತ್ತರಿಸಿದ ಶಾಸಕ ಚಂದ್ರು ಲಮಾಣಿ ಅವರು, ಈ ವಿಷಯವನ್ನ ನೀವು ಹೈಲೆಟ್ ಮಾಡ್ಬೇಕು. ಅವರಿಗೆ ಡ್ಯಾಮೇಜ್ ಆಗುತ್ತೆ ಅಂತಾ ಹೇಳ್ತಾರೆ. ಜೊತೆಗೆ ಗದಗ ಬಿಜೆಪಿ ಗಟ್ಟಿಯಾಗಬೇಕು. ಗದಗಿನವರು ಬೆಂಕಿ ಹಚ್ಚಬೇಕು ಎಂದ ಶಾಸಕ ಡಾ. ಚಂದ್ರು ಲಮಾಣಿ ಹೇಳಿದ್ದಾರೆ.
ಮತ್ತೆ ಸಿ.ಸಿ. ಪಾಟೀಲ ವಿರುದ್ಧ ಅಸಮಾಧಾನದ ಮಾತನಾಡುವ ಹೇಮಗಿರೀಶ್ ಅವರು, ಮೊನ್ನೆ ಗದಗಿನ ಸಂಕನೂರು ಮಾಸ್ತರ್ (ಪರಿಷತ್ ಸದಸ್ಯ ಎಸ್ ವಿ ಅಂಕನೂರು) ಹೆಂಗಂದ್ರು ನೋಡಿದ್ರಲ್ಲ.. ಸಿಸಿ ಪಾಟೀಲರಿಗೆ ಬೈದರೆ ಸುಮ್ಮನಿರು ಅಂತಾರೆ, ಅತ್ತಿತ್ತ ಜನರನ್ನ ನೋಡ್ತಾರೆ.. ಯಾತಕ್ಕೆ ಸುಮ್ಮನಿರಬೇಕು ಅಂತಾ ಪ್ರಶ್ನೆ ಮಾಡ್ತಾರೆ.. ಇಲ್ಲಿಗೆ ಆಡಿಯೋ ಸಂಭಾಷಣೆ ಕಟ್ ಆಗಿದೆ.
ಗದಗ ರಾಜಕಾರಣದಲ್ಲಿ ಸಿಸಿ ಪಾಟೀಲ, ಪುತ್ರ ಉಮೇಶ್ ಗೌಡ ಪಾಟೀಲ ಹಸ್ತಕ್ಷೇಪಕ್ಕೆ ಆಕ್ರೋಶ:
ಗದಗ ರಾಜಕಾರಣದಲ್ಲಿ ಸಿಸಿ ಪಾಟೀಲ ಕುಟುಂಬ ಎಂಟ್ರಿಯಾಗಿದ್ದು ಕೆಲ ಮುಖಂಡರಿಗೆ ಸಮಾಧಾನ ಇಲ್ಲ. ವಿಧಾನಸಭಾ ಚುನಾವಣೆ ಬಳಿಕ ಗದಗ ಬಿಜೆಪಿಯಲ್ಲಿ ಬಣರಾಜಕೀಯ ಜೋರಾಗಿದೆ. ಇಷ್ಟು ದಿನ ತೆರೆ ಮರೆಯಾಗಿ ನಡೆಯುತ್ತಿದ್ದ ಅಸಮಾಧಾನದ ಮಾತುಗಳು ಸದ್ಯ ಬಹಿರಂಗವಾಗಿವೆ. ಮೂಲಗಳ ಮಾಹಿತಿ ಪ್ರಕಾರ ಸಿಸಿ ಪಾಟೀಲರಿಗೂ ಆಡಿಯೋ ವಿಷಯ ತಿಳಿದಿದ್ಯಂತೆ. ಹೇಮಗಿರೀಶ ಅವರನ್ನ ಕರೆದು ಬುದ್ಧಿ ಹೇಳಿ, ಕಳಿಸಿದ್ದಾರಂತೆ.. ಬಹಿರಂಗವಾಗಿ ಮಾತ್ನಾಡದಂತೆ ಹೇಳಿದ್ದಾರೆ ಅಂತೆಲ್ಲ ರಾಜಕೀಯ ವಲಯದಲ್ಲಿ ಚರ್ಚೆಯಾಗ್ತಿವೆ.