ಹಣ ಮಾಡಲು ರಾಜಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿಲ್ಲ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಹಣ ಮಾಡಲು ರಾಜಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿಲ್ಲ. ಜನಸೇವೆಯ ಆಶಯ ಹೊತ್ತು ರಾಜಕಾರಣಕ್ಕೆ ಬಂದೆ ಎಂದು ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಬಳ್ಳಾರಿ (ಜು.03): ಹಣ ಮಾಡಲು ರಾಜಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿಲ್ಲ. ಜನಸೇವೆಯ ಆಶಯ ಹೊತ್ತು ರಾಜಕಾರಣಕ್ಕೆ ಬಂದೆ ಎಂದು ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ತುಂಗಭದ್ರಾ ಬಂಟರ ಸಂಘದಿಂದ ನಗರದ ಬಂಟ್ಸ್ ಭವನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಹೋಟೆಲ್ ಮಾಲೀಕರ ಸಂಘ ಹಾಗೂ ತುಂಗಭದ್ರಾ ಬಂಟರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಾನು ಬದುಕು ಕಟ್ಟಿಕೊಳ್ಳಲು ಮುಂಬೈಗೆ ಹೋಗಬಹುದಿತ್ತು. ಆದರೆ, ಬಳ್ಳಾರಿಯ ಕಡೆಗೆ ಬಂದೆ. ಇಲ್ಲಿನ ಜನರ ಪ್ರೀತಿ-ವಿಶ್ವಾಸ ಗಳಿಸಿಕೊಂಡು ಈ ಊರಿನಲ್ಲಿಯೇ ಬದುಕು ಕಟ್ಟಿಕೊಂಡೆ.
ಜೀವನದ ಮೆಟ್ಟಿಲು ಹತ್ತುವಾಗ ಅನೇಕ ಸಂಕಷ್ಟಗಳನ್ನು ಎದುರಿಸಿದ್ದೇನೆ. ಆದರೆ, ಧೈರ್ಯವಾಗಿ ಎಲ್ಲವನ್ನೂ ಎದುರಿಸಿ ಮುಂದೆ ಬಂದಿದ್ದೇನೆ. ನನ್ನ ಅನೇಕ ಸಂಕಷ್ಟಸಮಯದಲ್ಲಿ ಬಳ್ಳಾರಿಯ ಅನೇಕ ಸ್ನೇಹಿತರು ನೆರವಾದರು. ಮೊದಲಿನಿಂದಲೇ ಸೇವಾ ಮನೋಭಾವ ರೂಢಿಸಿಕೊಂಡಿದ್ದೆ. ರಾಜಕೀಯ ಕ್ಷೇತ್ರಕ್ಕೆ ಹೊಕ್ಕು ಮತ್ತಷ್ಟು ಜನರ ಸೇವೆಗೈಯಬೇಕು ಎಂಬ ಆಸೆ ಹೊತ್ತಿದ್ದೆ. ಕಾಪು ಕ್ಷೇತ್ರದ ಮತದಾರರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಗೊಂಡಿರುವೆ. ಆಸ್ತಿ, ಅಂತಸ್ತುಗಳು, ಜಾತಿ-ಧರ್ಮಗಳು ಮುಖ್ಯವಲ್ಲ. ಎಲ್ಲರೊಂದಿಗೆ ಸೌಹಾರ್ದತೆಯ ಜೀವನ ನಡೆಸಬೇಕು ಎಂಬ ಆಸೆ ಹೊತ್ತಿದ್ದೇನೆ ಎಂದರು.
ಶಿಕ್ಷಕರು ದೇಶ ಕಟ್ಟುವ ಸತ್ಪ್ರಜೆಗಳನ್ನು ಸಮಾಜಕ್ಕೆ ನೀಡಿ: ಸಚಿವ ಕೆ.ಎನ್.ರಾಜಣ್ಣ
ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಮಾತನಾಡಿ, ಸುರೇಶ್ ಶೆಟ್ಟಿಪ್ರತಿಯೊಬ್ಬರಿಗೂ ಸ್ಪಂದಿಸುತ್ತಿದ್ದ ಗುಣವುಳ್ಳವರು. ನನಗೂ ಅನೇಕ ಬಾರಿ ಸಹಾಯ-ಸಹಕಾರ ಮಾಡಿದ್ದಾರೆ. ಅನೇಕರ ಬೆಳವಣಿಗೆಗೆ ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದರಲ್ಲದೆ, ಬೆಳಕು ನೀಡುವ ಸೂರ್ಯನಂತೆ ಸುರೇಶ್ ಶೆಟ್ಟಅವರದ್ದು ಅಪರೂಪದ ವ್ಯಕ್ತಿತ್ವ ಎಂದರು.
ನಗರ ಶಾಸಕ ನಾರಾ ಭರತ್ ರೆಡ್ಡಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ ಮಾತನಾಡಿದರು. ತುಂಗಭದ್ರಾ ಬಂಟರ ಸಂಘದ ಅಧ್ಯಕ್ಷ ಡಾ. ಮಾಧವಶೆಟ್ಟಿಅಧ್ಯಕ್ಷತೆ ವಹಿಸಿದ್ದರು. ಹೋಟೆಲ್ ಮಾಲೀಕರ ಸಂಘದ ಪ್ರಮಖರಾದ ರೇಣುಕಾ ಹೋಟೆಲ್ ಹರೀಶ್ ಶೆಟ್ಟಿ, ಮಯೂರ ಮಧುಸೂದನ್, ಬಂಟರ ಸಂಘದ ಕಾರ್ಯದರ್ಶಿ ಸೂರ್ಯಕುಮಾರ್ ಶೆಟ್ಟಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸರಾವ್ ಸೇರಿದಂತೆ ನಗರದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸುರೇಶ್ ಶೆಟ್ಟಿಸ್ನೇಹಿತರು ಭಾಗವಹಿಸಿದ್ದರು.
ಸೈಬರ್ ಕ್ರೈಂ ಹಾಗೂ ಫೇಕ್ ನ್ಯೂಸ್ ತಡೆಗಟ್ಟಲು ರೂಪುರೇಷೆಗೆ ಸಿದ್ಧತೆ: ಸಚಿವ ಪರಮೇಶ್ವರ್
ಇದಕ್ಕೂ ಮುನ್ನ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಜರುಗಿದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದ ಶಾಸಕ ಸುರೇಶ್ ಶೆಟ್ಟಿಅವರು ಬಳ್ಳಾರಿ ಜನರ ಪ್ರೀತಿ-ಅಭಿಮಾನವನ್ನು ಸ್ಮರಿಸಿಕೊಂಡರು. ಜಿಪಂ ಮಾಜಿ ಸದಸ್ಯ ಎ. ಮಾನಯ್ಯ ಉದ್ಘಾಟಿಸಿ ಮಾತನಾಡಿದರು. ಮೇಯರ್ ತ್ರಿವೇಣಿ, ಶಾಸಕ ಭರತ್ ರೆಡ್ಡಿ, ಕಾಂಗ್ರೆಸ್ ಮುಖಂಡ ಕಲ್ಲುಕಂಬ ಪಂಪಾಪತಿ, ಹೊನ್ನೂರು ಅಲಿ, ಎಚ್. ಸಿದ್ದೇಶ್, ಶಿವಶಂಕರ್, ಪಂಪಾಪತಿ, ನರಸಪ್ಪ, ಪರಶುರಾಮ್ ಮತ್ತಿತರರು ಭಾಗವಹಿಸಿದ್ದರು.