ಬೆಂಗಳೂರು ( ಜ.  20)  ಕರ್ನಾಟಕ ಕಾಂಗ್ರೆಸ್ ನಲ್ಲಿ ಸದ್ದಿಲ್ಲದೇ ದೊಡ್ಡದೊಂದು ಬದಲಾವಣೆ ಮಾಡಲಾಗಿದೆ.  ಮಾಜಿ ಸಂಸದ ಧ್ರುವ ನಾರಾಯಣ್ ಹಾಗೂ  ಮಾಜಿ ಸಚಿವ, ಬಿಟಿಎಂ ಶಾಸಕ ರಾಮಲಿಂಗಾ ರೆಡ್ಡಿ ಅವರಿಗೆ ಜವಾಬ್ದಾರಿ ನೀಡಲಾಗಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಗೆ ನಾಯಕರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ  ವೇಣುಗೋಪಾಲ್ ನೇಮಕ ಮಾಡಿದ್ದಾರೆ.

ಮಗನಿಗಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡ್ರಾ ಸುಮಲತಾ?

ಕೆಪಿಸಿಸಿನಲ್ಲಿ ಸತೀಶ್ ಜಾರಕಿಹೊಳಿ, ಸಲೀಂ ಇಬ್ರಾಹಿಂ ಮತ್ತು ಈಶ್ವರ್​ ಖಂಡ್ರೆ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಇದೀಗ ರಾಮಲಿಂಗಾ ರೆಡ್ಡಿ ಹಾಗೂ  ಧ್ರುವ ನಾರಾಯಣ್ ಇನ್ನಿಬ್ಬರು ಹೊಸ ಕಾರ್ಯಾಧ್ಯಕ್ಷರಾಗಿದ್ದಾರೆ.  ಕೆಪಿಸಿಸಿಯನ್ನು ಡಿಕೆ ಶಿವಕುಮಾರ್ ಮುನ್ನಡೆಸುತ್ತಿದ್ದು ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡಲು ವಿವಿಧ ಯೋಜನೆ ಹಾಕಿಕೊಳ್ಳಲಾಗಿದೆ.