Asianet Suvarna News Asianet Suvarna News

ಕುಂಕುಮದ ಬದಲು ಸಿದ್ದರಾಮಯ್ಯಗೆ ಟೋಪಿ ಹಾಕಿ: ಶಾಸಕ ಬೆಲ್ಲದ ವ್ಯಂಗ್ಯ

ಸಿದ್ದರಾಮಯ್ಯ ಮೊದಲಿನಿಂದಲೂ ಹಿಂದೂ ವಿರೋಧಿ‌. ಓಲೈಕೆ ರಾಜಕಾರಣ ಮಾಡುವ ಉದ್ದೇಶದಿಂದ ಹಿಂದೂ ಆಚರಣೆ ವಿರೋಧಿಸುತ್ತಾರೆ. ಹೀಗಾಗಿ, ಅವರು ಹೋದಲ್ಲೆಲ್ಲ ಕುಂಕುಮ ಹಚ್ಚುವ ಬದಲು ಟೋಪಿ ಹಾಕಿ ಎಂದು ವ್ಯಂಗ್ಯವಾಡಿದ ಶಾಸಕ ಅರವಿಂದ ಬೆಲ್ಲದ

Dharwad BJP MLA Aravind Bellad Slams CM Siddaramaiah grg
Author
First Published Feb 4, 2024, 4:17 AM IST

ಹುಬ್ಬಳ್ಳಿ(ಫೆ.04): ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣೆಗೆ ಕುಂಕುಮ ಹಂಚಿಕೊಳ್ಳುವುದಿಲ್ಲ. ಹೀಗಾಗಿ, ಅವರು ಎಲ್ಲಿಗೆ ಬಂದರೂ ಅವರ ಹಣೆಗೆ ಕುಂಕುಮ‌ ಹಚ್ಚಬೇಡಿ. ಬದಲಿಗೆ ಟೋಪಿ ಹಾಕಿ ಎಂದು ರಾಜ್ಯದ ಜನರಲ್ಲಿ ಶಾಸಕ ಅರವಿಂದ ಬೆಲ್ಲದ ಮನವಿ ಮಾಡಿಕೊಂಡಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಮೊದಲಿನಿಂದಲೂ ಹಿಂದೂ ವಿರೋಧಿ‌. ಓಲೈಕೆ ರಾಜಕಾರಣ ಮಾಡುವ ಉದ್ದೇಶದಿಂದ ಹಿಂದೂ ಆಚರಣೆ ವಿರೋಧಿಸುತ್ತಾರೆ. ಹೀಗಾಗಿ, ಅವರು ಹೋದಲ್ಲೆಲ್ಲ ಕುಂಕುಮ ಹಚ್ಚುವ ಬದಲು ಟೋಪಿ ಹಾಕಿ ಎಂದು ವ್ಯಂಗ್ಯವಾಡಿದರು. '

ವಿಕಸಿತ ಪ್ರಗತಿಶೀಲ ಭಾರತದ ಬಜೆಟ್‌: ರಮೇಶ ಜಾರಕಿಹೊಳಿ

ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದ ಕಾಂಗ್ರೆಸ್ ನಾಯಕರು ದೆಹಲಿ ಚಲೋ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಶಾಸಕರಿಗೆ ಅನುದಾನ ಕೊಡುವ ಯೋಗ್ಯತೆ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕಿಲ್ಲ. ತಮ್ಮಲ್ಲಿನ ಒಳಜಗಳ, ಭ್ರಷ್ಟಾಚಾರದ ಆರೋಪದಿಂದ ಪಾರಾಗಲು ಜನರ ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಮೂಲಕ ನಾಯಕರೆಲ್ಲ ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಗ್ಯಾರಂಟಿಗಳು ಕೇವಲ ಲೋಕಸಭಾ ಚುನಾವಣೆವರೆಗೆ ಮಾತ್ರ ಇರಲಿವೆ ಎಂದು ಹೇಳಿದರು.

Follow Us:
Download App:
  • android
  • ios