ಕುಮಾರಸ್ವಾಮಿ ಸಿಎಂ ಆಗಲು ಕಾರಣ ಯಾರು? ದೇವೇಗೌಡ್ರು ಬಿಚ್ಚಿಟ್ರು ರಹಸ್ಯ
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಕ್ಕೆ ಪ್ರಮುಖ ಕಾರಣ ಯಾರು ಎನ್ನುವುದನ್ನು ದೇವೇಗೌಡ್ರು ಬಹಿರಂಗಪಡಿಸಿದ್ದಾರೆ.
ರಾಯಚೂರು. (ಫೆ.10): ಕುಮಾರಸ್ವಾಮಿ ಅವರು ಯಡಿಯೂರಪ್ಪ ಮುಂಚೆ ಕಾಂಗ್ರೆಸ್ ಸಹಕಾರದೊಂದಿಗೆ ಮುಖ್ಯಮಂತ್ರಿಯಾಗಿದ್ದರು. ಬಳಿಕದ ಬದಲಾದ ರಾಜಕೀಯ ವಿದ್ಯಮಾನಗಳಿಂದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕಾಯ್ತು.
ಆದ್ರೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಪ್ರಮುಖವಾಗಿ ಕಾರಣ ಯಾರು ಎನ್ನುವುದನ್ನು ರಾಜ್ಯಸಭಾ ಸದಸ್ಯ ಎಚ್‌ಡಿ ದೇವೇಗೌಡ ಅವರು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.
ಹೌದು..ರಾಯಚೂರಿನಲ್ಲಿ ಮಾತನಾಡಿದ ದೇವೇಗೌಡರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಗುಲಾಂನಬಿ ಆಜಾದ್ ಅವರೇ ಕಾರಣ ಎಂದು ಸ್ಪಷ್ಟಪಡಿಸಿದರು.
'ದೇವೇಗೌಡ್ರು ಅನುಮತಿ ಕೊಟ್ರೆ ರಾಜಭವನಕ್ಕೆ ರೈತರ ಪಾದಯಾತ್ರೆ'
ಕುಮಾರಸ್ವಾಮಿ ಸಿಎಂ ಆಗಬೇಕು ಎಂದು ನಾನು ಯಾರ ಮನೆಗೂ ಹೋಗಿಲ್ಲ, ನನ್ನ ಮಗನಿಗೆ ಎರಡು ಮೇಜರ್ ಸರ್ಜರಿ ಆಗಿದೆ ಎಂದು ಗುಲಾಂನಬಿ ಆಜಾದ್ರಿಗೆ ಹೇಳಿದ್ದೆ. ಸೋನಿಯಾಗಾಂಧಿ ಮಾತುಕತೆ ನಂತರ ಕುಮಾರಸ್ವಾಮಿ ಸಿಎಂ ಆಗಿದ್ರು. ಸದ್ಯ ಸಿಎಂ ಯಡಿಯೂರಪ್ಪನವರ ಬಗ್ಗೆ ನಾನು ಯಾವುದೇ ಆರೋಪ ಮಾಡಲ್ಲ, ನನ್ನ ಶರೀರದಲ್ಲಿ ಶಕ್ತಿ ಇರೋವರ್ಗೂ ನಾನು ಪಕ್ಷ ಕಟ್ಟುತ್ತೇನೆ ಎಂದರು.
ಇನ್ನು ಈ ವೇಳೆ 2023 ರ ಚುನಾವಣೆಯ ಬಗ್ಗೆ ಮಾತನಾಡಿದ ದೇವೇಗೌಡ್ರು, ಕುಮಾರಸ್ವಾಮಿ ಸರ್ಕಾರ ಉರುಳಿದ ಮೇಲೆ ನಾನ್ಯಾರಿಗೂ ನಿಂದನೆ ಮಾಡಿಲ್ಲ. ಪಕ್ಷ ಕಟ್ಟುವುದಕ್ಕಾಗಿ ನಾನು ಸಂಪೂರ್ಣ ಭಾಗಿಯಾಗ್ತೇನೆ, ಯಾವುದೇ ಅಸ್ಥಿರತೆಗೆ ಅವಕಾಶ ನೀಡುವುದಿಲ್ಲ. ಜಾತ್ಯಾತೀತ ಜನತಾದಳದ ವರಿಷ್ಠನಾಗಿ ತೀರ್ಮಾನ ಮಾಡಿದ್ದೇನೆ, ಪ್ರಾದೇಶಿಕ ಪಕ್ಷ ಕಟ್ಟುವುದಕ್ಕೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದೇನೆ. ನಮ್ಮಲ್ಲಿಯೂ 34 ಜನ ಶಾಸಕರಿದ್ದಾರೆ. ನಾವು ವಿಲೀನ ಆಗ್ತೇವೆ ಅಂತಾರೆ, ಆದರೆ ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ ಎಂದು ಹೇಳಿದರು.