ರಾಜ್ಯ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಗ್ಗಂಟಾಗಿಯೇ ಉಳಿದಿದ್ದು, ಮಂತ್ರಿಗಿರಿಗೆ ಬಕ ಪಕ್ಷಿಗಳಂತೆ ಕಾದು ಕುಳಿತ್ತಿದ್ದ ಶಾಸಕರಿಗೆ ಮತ್ತೆ ನಿರಾಸೆಯಾಗಿದೆ.
ಬೆಂಗಳೂರು, [ನ.22]: ಅದ್ಯಾಕೋ ಏನೋ ರಾಜ್ಯ ಮೈತ್ರಿ ಸರ್ಕಾರದ ಸಚಿವ ಸಂಪುಟಕ್ಕೆ ಮುಹೂರ್ತ ಕೂಡಿ ಬರುತ್ತಿಲ್ಲ. ಈ ತಿಂಗಳು, ಮುಂದಿನ ತಿಂಗಳು ಗ್ಯಾರಂಟಿ ಅಂತೆಲ್ಲಾ ದಿನೇ ದಿನೇ ಸಂಪುಟ ಸಭೆ ವಿಸ್ತರಣೆ ಮುಂದೂಡಲಾಗುತ್ತಿದೆ.
ಈ ಹಿಂದೆ ಉಪಚುನಾವಣೆ ಬಳಿಕ ಸಂಪುಟ ವಿಸ್ತರಣೆ ಗ್ಯಾರಂಟಿ ಎನ್ನಲಾಗಿತ್ತು. ಆದ್ರೆ ಇದೀಗ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಸಂಪುಟ ವಿಸ್ತರಣೆ ಸಧ್ಯಕ್ಕಿಲ್ಲ ಎನ್ನುವ ಸುಳಿವು ನೀಡಿದ್ದಾರೆ. ಇದ್ರಿಂದ ಮಂತ್ರಿಗಿರಿಗೆ ಬಕ ಪಕ್ಷಿಗಳಂತೆ ಕಾದು ಕುಳಿತ್ತಿದ್ದ ಶಾಸಕರಿಗೆ ಭಾರಿ ನಿರಾಸೆಯಾಗಿದೆ.
"
ಸಚಿವ ಸಂಪುಟದ ಬಗ್ಗೆ ಇಂದು [ಗುರುವಾರ] ಪ್ರತಿಕ್ರಿಯಿಸಿರುವ ಪರಮೇಶ್ವರ್, ಸಂಪುಟ ವಿಸ್ತರಣೆ ಈ ತಿಂಗಳಲ್ಲೇ ಮಾಡಬೇಕು ಅನ್ನೋದು ನಮ್ಮ ಉದ್ದೇಶ. ಈ ಕುರಿತು ಕೆ.ಸಿ.ವೇಣುಗೋಪಾಲ್ ಬಳಿ ಚರ್ಚೆ ನಡೆಸಿದ್ದೇವೆ.
ಆದರೆ ರಾಹುಲ್ ಗಾಂಧಿಯವರು ಸಧ್ಯ ಪಂಚರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದ್ರಿಂದ ರಾಹುಲ್ ಗಾಂಧಿ ಮತ್ತು ವೇಣುಗೋಪಾಲ್ ಭೇಟಿ ಇನ್ನೂ ಆಗಿಲ್ಲ ಎಂದು ಹೇಳುವ ಮೂಲಕ ಸಧ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಇಲ್ಲ ಎನ್ನುವುದನ್ನ ಸುಳಿವು ನೀಡಿದರು.
ಉತ್ತರ ಕರ್ನಾಟಕ ಭಾಗದ ಶಾಸಕರು ಸಂಪುಟ ವಿಸ್ತರಣೆಗಾಗಿ ಕಾಯುತ್ತಿದ್ದು, ರೇಸ್ ನಲ್ಲಿ ಹಲವರಿದ್ದಾರೆ. ಆದ್ರೆ, ಸಚಿವ ಸ್ಥಾನಗಳು ಖಾಲಿ ಇರುವುದು ಮಾತ್ರ 8. ಅದರಲ್ಲಿ ಕಾಂಗ್ರೆಸ್ ಪಾಲಿನ 6 ಮತ್ತು ಜೆಡಿಎಸ್ ಪಾಲಿನ 2 ಮಂತ್ರಿ ಸ್ಥಾನಗಳು ಖಾಲಿ ಇವೆ.
ಸಂಪುಟ ವಿಸ್ತರಣೆ ಮೇಲಿಂದ ಮೇಲೆ ಮುಂದೂಡುತ್ತಿರುವುದಕ್ಕೆ ಈಗಾಗಲೇ ಹಲವು ಶಾಸಕರು ಬೇಸರ ವ್ಯಕ್ತಪಡಿಸಿದ್ದು ಉಂಟು. ಇದೀಗ ಮತ್ತೆ ಮುಂದೂಡಿರುವುದು ಅತೃಪ್ತರನ್ನ ಇನ್ನಷ್ಟು ಕೆರಳಿಸಿದೆ.
