ದೆಹಲಿ ಮಹಾನಗರ ಪಾಲಿಕೆ ಚುನಾವಣೋತ್ತರ ಸಮೀಕ್ಷೆ, ಬಿಜೆಪಿಗೆ ಸೋಲು, ಆಪ್‌ಗೆ ಅಧಿಕಾರ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ಹಿನ್ನಡೆಯಾಗಲಿದೆ ಎಂದು ಇಂಡಿಯಾ ಟುಡೆ ಸಮೀಕ್ಷೆ ಹೇಳುತ್ತಿದೆ. ಪಾಲಿಕೆಯನ್ನು ಬಿಜೆಪಿ ಮಣಿಸಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಮರಳಿದೆ ಎಂದು ಸಮೀಕ್ಷೆ ಹೇಳಿದೆ.
ನವದೆಹಲಿ(ಡಿ.05); ದೆಹಲಿ ಮಹಾನಗರ ಪಾಲಿಕೆ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ. ಆಡಳಿತರೂಢ ಬಿಜೆಪಿಗೆ ತೀವ್ರ ಹಿನ್ನಡೆಯಾಗಲಿದೆ ಎಂದು ಇಂಡಿಯಾ ಟುಡೆ ಸಮೀಕ್ಷೆ ಹೇಳುತ್ತಿದೆ. ಸದ್ಯ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯನ್ನು ಆಮ್ ಆದ್ಮಿ ಪಾರ್ಟಿ ಮಣಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಇಷ್ಟೇ ಅಲ್ಲ ಬಾರಿ ಅಂತರದಿಂದ ಆಪ್ ಚುನಾವಣೆ ಗೆಲ್ಲಲಿದೆ ಎಂದು ಸಮೀಕ್ಷೇ ಹೇಳಿದೆ. ಈ ಬಾರಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸ್ಥಾನ 69 ರಿಂದ 91ಕ್ಕೆ ಕುಸಿಯಲಿದೆ ಎಂದಿದೆ. ಆದರೆ ಆಮ್ ಆದ್ಮಿ ಪಾರ್ಟಿ ಸ್ಥಾನ 149 ರಿಂದ 171ಕ್ಕೆ ಏರಿಕೆಯಾಗಲಿದೆ. ಈ ಮೂಲಕ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಪಾರ್ಟಿ ಮಹಾ ನಗರ ಪಾಲಿಕೆಯಲ್ಲೂ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೋತ್ತರ ಸಮೀಕ್ಷೆ(ದೆಹಲಿ 250 ವಾರ್ಡ್)
ಆಮ್ ಆದ್ಮಿ ಪಾರ್ಟಿ: 149 ರಿಂದ 171
ಬಿಜೆಪಿ: 69 ರಿಂದ 91
ಕಾಂಗ್ರೆಸ್: 3 ರಿಂದ 7
ಇತರರ: 5 ರಿಂದ 9
MCD Election 2022: ಪಾಲಿಕೆ ಚುನಾವಣೆಯಲ್ಲಿ ಯಾರಿಗೆ ಡೆಲ್ಲಿಯ ದಿಲ್?
ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಾರ್ಟಿ ಇದೀಗ ನಿಧನಾವಾಗಿ ದೇಶದಲ್ಲಿ ಇತರ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುತ್ತಿದೆ. ಇದೀಗ ದೆಹಲಿಯ ಮಹಾನಗರ ಪಾಲಿಕೆಯನ್ನೂ ಕೈವಶ ಮಾಡಿಕೊಳ್ಳುವ ಸೂಚನೆಯನ್ನು ಸಮೀಕ್ಷೆಗಳು ನೀಡುತ್ತಿದೆ. ಆದರೆ ಕಾಂಗ್ರೆಸ್ ಕೇವಲ 3 ರಿಂದ 7 ವಾರ್ಡ್‌ಗಳಲ್ಲಿ ಸ್ಥಾನ ಉಳಿಸಿಕೊಳ್ಳಲಿದೆ ಎಂದರೆ, ಇತರರು 5 ರಿಂದ 9 ವಾರ್ಡ್‌ಗಳಲ್ಲಿ ಸ್ಥಾನ ಉಳಿಸಿಕೊಳ್ಳಲಿದೆ ಎಂದಿದೆ.
ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಾರ್ಟಿ ಇದೀಗ ನಿಧನಾವಾಗಿ ದೇಶದಲ್ಲಿ ಇತರ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುತ್ತಿದೆ. ಇದೀಗ ದೆಹಲಿಯ ಮಹಾನಗರ ಪಾಲಿಕೆಯನ್ನೂ ಕೈವಶ ಮಾಡಿಕೊಳ್ಳುವ ಸೂಚನೆಯನ್ನು ಸಮೀಕ್ಷೆಗಳು ನೀಡುತ್ತಿದೆ. ಆದರೆ ಕಾಂಗ್ರೆಸ್ ಕೇವಲ 3 ರಿಂದ 7 ವಾರ್ಡ್‌ಗಳಲ್ಲಿ ಸ್ಥಾನ ಉಳಿಸಿಕೊಳ್ಳಲಿದೆ ಎಂದರೆ, ಇತರರು 5 ರಿಂದ 9 ವಾರ್ಡ್‌ಗಳಲ್ಲಿ ಸ್ಥಾನ ಉಳಿಸಿಕೊಳ್ಳಲಿದೆ ಎಂದಿದೆ.
ಒಟ್ಟು 250 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ 1,349 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಟ್ಟು 13,638 ಮತಗಟ್ಟೆಗಳಲ್ಲಿ 1.45 ಕೋಟಿ ಮತದಾರರು ಹಕ್ಕು ಚಲಾಯಿಸಬೇಕಿತ್ತು. ಆದರೆ ಶೇ.50 ಮತದಾರರು ಮತ ಚಲಾಯಿಸಿದ್ದಾರೆ. 2017 ರಲ್ಲಿ ಬಿಜೆಪಿ 181 ಸ್ಥಾನಗಳಲ್ಲಿ ಗೆದ್ದಿದ್ದರೆ ಆಮ್‌ಆದ್ಮಿ ಪಕ್ಷ 48 ಹಾಗೂ ಕಾಂಗ್ರೆಸ್ 27 ಸ್ಥಾನಗಳಲ್ಲಿ ಗೆದ್ದಿದ್ದವು.
ಕೇಜ್ರಿವಾಲ್ ಸರ್ಕಾರದಲ್ಲೂ ಹಗರಣದ ಕಪ್ಪುಕಲೆ ಗೋಚರ?
ದೆಹಲಿಯ ಎಲ್ಲಾ ವಾರ್ಡ್‌ಗಳು ಸೇರಿ ಒಟ್ಟು 1349 ಅಭ್ಯರ್ಥಿಗಳು ಚುನಾವಣಾ ಕಣಕ್ಕಿಳಿದಿದ್ದು, 1.45 ಕೋಟಿ ಅರ್ಹ ಮತದಾರರು ಇದ್ದರು. ಇವರಲ್ಲಿ ಶೇ.50 ಜನರು ಮಾತ್ರ ಮತ ಚಲಾಯಿಸಿದ್ದಾರೆ. ಅಧಿಕಾರಿಗಳು ದೆಹಲಿಯಾದ್ಯಂತ 13,638 ಮತಗಟ್ಟೆಗಳನ್ನು ಸ್ಥಾಪಿಸಿದ್ದರು. ಚುನಾವಣೆಯಯಲ್ಲಿ 100 ವರ್ಷ ಹಾಗೂ ಅದಕ್ಕೂ ಮೀರಿದ 229 ಮತದಾರರು ಮತಚಲಾಯಿಸಿದ್ದಾರೆ. 80 ರಿಂದ 100 ವರ್ಷದೊಳಗಿನ 2,04,301 ಜನರು ಮತ ಚಲಾಯಿಸಿದ್ದಾರೆ ಎಂದು ಅಧಿಕೃತ ಅಂಕಿಅಂಶಗಳು ತಿಳಿದಿವೆ.