ದೆಹಲಿ ಗದ್ದುಗೆಯೇರಲು ಪಣ ತೊಟ್ಟಿರುವ ಬಿಜೆಪಿ ಪಕ್ಷದ ಪ್ರಣಾಳಿಕೆ ಸಂಕಲ್ಪ ಪತ್ರದ 2ನೇ ಹಂತ ಬಿಡುಗಡೆ ಮಾಡಿದೆ. ಇದರಲ್ಲಿಯೂ ಉಚಿತ ಶಿಕ್ಷಣ , ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಜೀವ ವಿಮೆ ಸೇರಿದಂತೆ ಹಲವು ಉಚಿತ ಭರವಸೆಗಳನ್ನು ನೀಡಿದೆ.
ನವದೆಹಲಿ (ಜ.22): ದೆಹಲಿ ಗದ್ದುಗೆಯೇರಲು ಪಣ ತೊಟ್ಟಿರುವ ಬಿಜೆಪಿ ಪಕ್ಷದ ಪ್ರಣಾಳಿಕೆ ಸಂಕಲ್ಪ ಪತ್ರದ 2ನೇ ಹಂತ ಬಿಡುಗಡೆ ಮಾಡಿದೆ. ಇದರಲ್ಲಿಯೂ ಉಚಿತ ಶಿಕ್ಷಣ , ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಜೀವ ವಿಮೆ ಸೇರಿದಂತೆ ಹಲವು ಉಚಿತ ಭರವಸೆಗಳನ್ನು ನೀಡಿದೆ. ಬಿಜೆಪಿ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಅನುರಾಗ್ ಠಾಕೂರ್ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಇದರಲ್ಲಿ ಹಲವು ಉಚಿತ ಭರವಸೆಗಳನ್ನು ಮತದಾರರಿಗೆ ನೀಡಲಾಗಿದೆ.
ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಶುವಿಹಾರದಿಂದ ಸ್ನಾತಕೋತ್ತರ ಪದವಿ ತನಕ ಅಗತ್ಯ ಇರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ 2 ಪ್ರಯತ್ನಗಳಿಗೆ 15 ಸಾವಿರ ರು., ಭೀಮರಾವ್ ಅಂಬೇಡ್ಕರ್ ಸ್ಟೈಫಂಡ್ ಯೋಜನೆಯಡಿ ಐಟಿಐ ಮತ್ತು ಪಾಲಿಟೆಕ್ನಿಕ್ ಕೌಶಲ್ಯ ಕೇಂದ್ರಗಳಲ್ಲಿ ತಾಂತ್ರಿಕ ಕೋರ್ಸ್‌ಗಳನ್ನು ಓದುತ್ತಿರುವ ಪರಿಶಿಷ್ಟ ಜಾತಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1 ಸಾವಿರ ರು. ಆರ್ಥಿಕ ನೆರವು, ಆಟೋ ಟ್ಯಾಕ್ಸಿ ಚಾಲಕರ ಕಲ್ಯಾಣ ಮಂಡಳಿ ಸ್ಥಾಪಿಸಿ ಚಾಲಕರಿಗೆ 10 ಲಕ್ಷ ರು. ಜೀವ ವಿಮೆ ಮತ್ತು 5 ಲಕ್ಷ ರು. ಅಪಘಾತ ವಿಮೆ ನೀಡುವುದಾಗಿ ಭರವಸೆ ನೀಡಿದರು. ಇದೇ ವೇಳೆ ಠಾಕೂರ್ ಅವರು ‘ಬಿಜೆಪಿ ಅಧಿಕಾರಕ್ಕೆ ಬಂದರೆ ಎಸ್‌ಐಟಿ ಸ್ಥಾಪಿಸಿ ಆಪ್ ಹಗರಣಗಳ ತನಿಖೆ ಮಾಡುತ್ತೇವೆ’ ಎಂದು ಹೇಳಿದರು.
ರಾಹುಲ್ ಗಾಂಧಿ ವಿರುದ್ಧ 5 ಲೀ. ಹಾಲು ನಷ್ಟ ಕೇಸು ಹಾಕಿದ ಬಿಹಾರಿ ಬಾಬು!
ಬಿಜೆಪಿ ಭರವಸೆಗಳು ದೇಶಕ್ಕೆ ಅಪಾಯಕಾರಿ: ಬಿಜೆಪಿ ಸಂಕಲ್ಪ ಪತ್ರದಲ್ಲಿ ನೀಡಿರುವ ಭರವಸೆಗಳು ದೇಶಕ್ಕೆ ಅಪಾಯಕಾರಿ ಎಂದು ಆಪ್ ನಾಯಕ, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದಾರೆ. ‘ಬಿಜೆಪಿ ಅಧಿಕಾರಕ್ಕೆ ಬಂದರೆ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣವನ್ನು ಸ್ಥಗಿತಗೊಳಿಸಲು ಮತ್ತು ಮೊಹಲ್ಲಾ ಕ್ಲಿನಿಕ್ ಸೇರಿದಂತೆ ಉಚಿತ ಆರೋಗ್ಯ ಸೇವೆಗಳನ್ನು ತೆಗೆದುಹಾಕಲು ಯೋಜಿಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ದೆಹಲಿಯಲ್ಲಿ ಬಡವರು ಬದುಕುವುದೇ ಕಷ್ಟವಾಗುತ್ತದೆ. ಇದು ಜನ ಸಾಮಾನ್ಯರ ಮೇಲಿನ ದಾಳಿ’ ಎಂದಿದ್ದಾರೆ.
ಸ್ವಾಮಿತ್ವ ಸ್ವತ್ತಿನ ಕಾರ್ಡು ವಿತರಿಸಿದ ಪ್ರಧಾನಿ ನರೇಂದ್ರ ಮೋದಿ: ಗ್ರಾಮೀಣ ಭಾಗದ ಜನರ ಆಸ್ತಿಗೆ ಕಾನೂನು ಬದ್ಧ ಹಕ್ಕು ಕಲ್ಪಿಸುವ ದಾಖಲೆ ಪತ್ರವಾದ ಸ್ವಾಮಿತ್ವ ಸ್ವತ್ತಿನ ಕಾರ್ಡ್‌ಗಳ ಬೃಹತ್ ವಿತರಣಾ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ನೆರೆವೇರಿಸಿದರು. ಈ ಕಾರ್ಯಕ್ರಮದಲ್ಲಿ 10 ರಾಜ್ಯಗಳ ಒಟ್ಟು 65 ಲಕ್ಷ ಕುಟುಂಬಗಳಿಗೆ ಈ ಕಾರ್ಡ್ ವಿತರಿಸಲಾಯಿತು. ಕಾರ್ಡ್ ವಿತರಣೆ ಬಳಿಕ ಕೆಲವು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ‘ಈ ಯೋಜನೆಯಿಂದ ಸಾಲ ಮತ್ತು ಇತರ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಜನರಿಗೆ ಅನುಕೂಲವಾಗಲಿದೆ. ಇಂದು 65 ಲಕ್ಷ ಕಾರ್ಡ್ ವಿತರಣೆಯೊಂದಿಗೆ ಇದುವರೆಗೆ ದೇಶವ್ಯಾಪಿ ಗ್ರಾಮಗಳಲ್ಲಿನ 2.24 ಕೋಟಿ ಫಲಾನುಭವಿಗಳು ಈ ಸ್ವಾಮಿತ್ವ ಸ್ವತ್ತನ್ನು ಹೊಂದಿದಂತಾಗಿದೆ ಎಂದು ತಿಳಿಸಿದರು.
ಪದಗ್ರಹಣ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಹತ್ತಾರು ಶಾಕ್: ಡಬ್ಲುಎಚ್‌ಒನಿಂದ ಅಮೆರಿಕ ಔಟ್
‘ಗ್ರಾಮಗಳಲ್ಲಿನ ಆಸ್ತಿಯು ಉತ್ಪಾದಕತೆ ಇಲ್ಲದ ಬಂಡವಾಳವಿದ್ದಂತೆ. ಜನರಿಗೆ ಇದು ಆದಾಯ ಹೆಚ್ಚಳಕ್ಕೆ ಸಹಾಯ ಮಾಡುವುದಿಲ್ಲ ಎಂದು ಆರ್ಥಿಕ ತಜ್ಞರೊಬ್ಬರು ಅಭಿಪ್ರಾಯಪಡುತ್ತಾರೆ. ಆದ್ದರಿಂದ ಈ ಕಾರ್ಡ್‌ನಿಂದ ದೊರೆಯುವ ಆಸ್ತಿ ಹಕ್ಕಿನಿಂದ ಜನರು ಸ್ವಂತ ಉದ್ಯಮ ಪ್ರಾರಂಭಿಸಬಹುದು. ರೈತರಿಗೆ ಇದು ಆರ್ಥಿಕ ಭದ್ರತೆ ಒದಗಿಸುತ್ತದೆ’ ಎಂದು ಹೇಳಿದರು. ಸ್ವಾಮಿತ್ವ ಯೋಜನೆಯ ಸ್ವತ್ತಿನ ಕಾರ್ಡ್‌ಗಳು ಛತ್ತೀಸ್‌ಗಢ, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಿಜೋರಾಂ, ಒಡಿಶಾ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಎರಡು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ 50 ಸಾವಿರ ಗ್ರಾಮಗಳ ಫಲಾನುಭವಿಗಳಿಗೆ ಹಂಚಿಕೆಯಾಗಿದೆ.
