ನವದೆಹಲಿ[ಫೆ.11]: ದೆಹಲಿ ಸೇರಿದಂತೆ ಬಿಜೆಪಿ ನೇತೃತ್ವದ NDA ಕಳೆದೆರಡು ವರ್ಷಗಳಲ್ಲಿ ಒಟ್ಟು 7 ರಾಜ್ಯಗಳನ್ನು ಕಳೆದುಕೊಂಡಿದೆ. ಕಳೆದ ಬಾರಿ ದೆಹಲಿಯಲ್ಲಿ ಕೇವಲ 3 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಒಳ್ಳೆಯ ಫಲಿತಾಂಶ ಸಿಗುವ ನಿರೀಕ್ಷೆ ಇತ್ತು. ದೆಹಲಿ ಬಿಜೆಪಿಯ ಅಧ್ಯಕ್ಷ ಮನೋಜ್ ತಿವಾರಿ ಕೂಡಾ 48 ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚಿಸುವ ಭರವಸೆ ವ್ಯಕ್ತಪಡಿಸಿದ್ದರು. ಆದರೆ ಆರಂಭಿಕ ಟ್ರೆಂಡ್ ನಲ್ಲೇ ಬಿಜೆಪಿಯ ಈ ಕನಸು ಕಮರಿದೆ. ಬಿಜೆಪಿ ಪಾಲಿಗೆ ದೇಶದ ಆಡಳಿತ ನಕ್ಷೆ ಬದಲಾಗಿಲ್ಲ. ಆದರೆ 12 ರಾಜ್ಯಗಳಲ್ಲಿ ಬಿಜೆಪಿ ವಿರೋಧ ಪಕ್ಷಗಳೇ ಅಧಿಕಾರದಲ್ಲಿವೆ. ಕೇವಲ 16 ರಾಜ್ಯಗಳಲ್ಲಷ್ಟೇ NDA ಸರ್ಕಾರವಿದೆ. ಇನ್ನು ಇಲ್ಲಿ ಕೇವಲ ಶೇ. 42ರಷ್ಟು ಜನಸಂಖ್ಯೆ ಮಾತ್ರವಿದೆ ಎಂಬುವುದು ಉಲ್ಲೇಖನೀಯ.

ಆಪ್‌ಗೆ ಬಹುಮತ: ವಿಧಾನಸಭೆ ವಿಸರ್ಜಿಸಿದ ಲೆ. ಗವರ್ನರ್!

ಇನ್ನು ಕಾಂಗ್ರೆಸ್ ತಮ್ಮ ಸ್ವಂತ ಬಲ ಹಾಗೂ ಮೈತ್ರಿ ಶಕ್ತಿಯೊಂದಿಗೆ ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ, ಪಂಜಾಬ್, ಪುದುಚೇರಿಯಲ್ಲಿ ಅಧಿಕಾರದಲ್ಲಿದೆ. ಡಿಸೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಝಾರ್ಖಂಡ್ ನಲ್ಲಿ ಸರ್ಕಾರ ರಚಿಸಿದ ಬಳಿಕ ಕಾಂಗ್ರೆಸ್ 7 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಸತತ ಮೂರನೇ ಬಾರಿ ಗೆದ್ದು ಬೀಗಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಕೇರಳದಲ್ಲಿ ಸಿಪಿಐ (ಎಂ) ನೇತೃತ್ವದ ಮೈತ್ರಿ, ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್, ಒಡಿಶಾದಲ್ಲಿ ಬಿಜೆಡಿ ಮತ್ತು ತೆಲಂಗಾಣದಲ್ಲಿ ಟಿಆರ್ಎಸ್ ಅಧಿಕಾರದಲ್ಲಿವೆ.

ಇನ್ನು ಇತ್ತ ತಮಿಳುನಾಡಿನಲ್ಲಿ ಬಿಜೆಪಿ ಎಐಎಡಿಎಂಕೆ ಜೊತೆಗೂಡಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿತ್ತು, ಆದರೂ ರಾಜ್ಯದಲ್ಲಿ ಕಮಲ ಪಾಳಯದ ಒಬ್ಬ ಶಾಸಕನೂ ಇಲ್ಲ. ಹೀಗಾಗಿ ಅದಕ್ಕೆ ಸರ್ಕಾರದ ಪಾಲುದಾರಿಕೆ ಸಿಗಲಿಲ್ಲ. 2017ರ ಡಿಸೆಂಬರ್ ನಲ್ಲಿ NDA ಉನ್ನತ ಸ್ಥಾನದಲ್ಲಿತ್ತು, ಬಿಜೆಪಿ ಹಾಗೂ ಅದರ ಮೈತ್ರಿ ಪಕ್ಷದ ಬಳಿ ಒಟ್ಟು 19 ರಾಜ್ಯಗಳಿದ್ದವು. ಆದರೆ ಕೇವಲ ಒಂದೇ ವರ್ಷದೊಳಗೆ ಬಿಜೆಪಿ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ಗಢ ಹೀಗೆ 3 ರಾಜ್ಯಗಳನ್ನು ಕಳೆದುಕೊಳ್ತು. ಇನ್ನು ನಾಲ್ಕನೇ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಬಿಜೆಪಿ, ಟಿಡಿಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಆದರೆ 2018ರ ಮಾರ್ಚ್ ನಲ್ಲಿ ಟಿಡಿಪಿ, ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಳ್ತು. 2019ರಲ್ಲಿ ಇಲ್ಲಿನ ನಡೆದ ವಿಧಾನಸಭಾ ಚುನಾವಣೆಯಲ್ಲಿ ವೈಎಸ್ ಆರ್ ಕಾಂಗ್ರೆಸ್ ಅಧಿಕಾರ ಪಡೆಯಿತು. ಐದನೇ ರಾಜ್ಯ ಮಹಾರಾಷ್ಟ್ರದಲ್ಲಿ ಚುನಾವಣೆ ಬಳಿಕ ಶಿವಸೇನೆ, ಬಿಜೆಪಿ ಜೊತೆಗಿನ ಮೈತ್ರಿಗೆ ವಿದಾಯ ಹಾಡಿತು. ಈಗ ಮತ್ತೊಮ್ಮೆ ದೆಹಲಿ ಫಲಿತಾಂಶ ಬಿಜೆಪಿಗೆ ನಿರಾಸೆಯುಂಟು ಮಾಡಿದೆ.

ದೆಹಲಿ ನಾಶಕ್ಕೆ ಕಾರಣ ಹೇಳಿದ ಮಾಜಿ ರಾಷ್ಟ್ರಪತಿ ಮಗಳು!

ಫೆಬ್ರವರಿ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ