ಆಪ್‌ಗೆ ಬಹುಮತ: ವಿಧಾನಸಭೆ ವಿಸರ್ಜಿಸಿದ ಲೆ. ಗವರ್ನರ್!
ದೆಹಲಿ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭ| ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಮುನ್ನಡೆ ಅಂಕಿ ಅಂಶ| ಆಪ್ 62, ಬಿಜೆಪಿ 08, ಕಾಂಗ್ರೆಸ್ ಶೂನ್ಯ ಸ್ಥಾನದಲ್ಲಿ ಮುನ್ನಡೆ| 6ನೇ ವಿಧಾನಸಭೆ ವಿಸರ್ಜಿಸಿದ ದೆಹಲಿ ಲೆ. ಗವರ್ನರ್| ಲೆ.ಗವರ್ನರ್ ಅನಿಲ್ ಬೈಜಾಲ್ ಅವರಿಂದ ಪ್ರಸ್ತುತ ವಿಧಾನಸಭೆ ವಿಸರ್ಜನೆ| 7ನೇ ವಿಧಾನಸಭೆ ರಚನೆಗೆ ಹೊಸ ಆದೇಶ ಹೊರಡಿಸಲಿರುವ ಲೆ. ಗವರ್ನರ್|
ನವದೆಹಲಿ(ಫೆ.11): ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಆಡಳಿತಾರೂಢ ಆಪ್ ಮುನ್ನಡೆ ಕಾಯ್ದುಕೊಂಡಿದೆ. ಇದುವರೆಗೂ ಬಂದ ಅಂಕಿ ಅಂಶಗಳ ಪ್ರಕಾರ ಆಪ್ 62, ಬಿಜೆಪಿ 08, ಕಾಂಗ್ರೆಸ್ ಶೂನ್ಯ ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ.
ಇನ್ನು ದೆಹಲಿ ವಿಧಾನಸಭೆ ಕ್ಷೇತ್ರಗಳ ಪೂರ್ಣ ಫಲಿತಾಂಶ ಹೊರಬರುವ ಮುನ್ನವೇ, ಲೆ.ಗವರ್ನರ್ ಅನಿಲ್ ಬೈಜಾಲ್ ಪ್ರಸ್ತುತ ವಿಧಾನಸಭೆಯನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.
ದೆಹಲಿಯಲ್ಲಿ ಕಮಾಲ್ ಮಾಡ್ತಾರಾ ಕೇಜ್ರಿ?
ದೆಹಲಿಯ 6ನೇ ವಿಧಾನಸಭೆಯನ್ನು ವಿಸರ್ಜಿಸಿರುವ ಲೆ.ಗವರ್ನರ್ ಅನಿಲ್ ಬೈಜಾಲ್, ಪೂರ್ಣ ಫಲಿತಾಂಶ ಬಂದ ಬಳಿಕ 7ನೇ ವಿಧಾನಸಭೆ ರಚನೆಗೆ ಹೊಸ ಆದೇಶ ಹೊರಡಿಸಲಿದ್ದಾರೆ ಎನ್ನಲಾಗಿದೆ.
ಮತ್ತೆ ಸಮೀಕರಣ ಬದಲು: ಆಪ್ ಪಾಳೆಯದಲ್ಲಿ ಸಂತಸ, ಬಿಜೆಪಿ ಪಾಳೆಯದಲ್ಲಿ ಆತಂಕ!