ಜೆಡಿಎಸ್‌ ಮತ್ತು ಬಿಜೆಪಿ ನಡುವಿನ 20-20 ಸರ್ಕಾರದಲ್ಲಿ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದಿರಲು ‘ದೆಹಲಿಯಿಂದ ಬಂದ ಅಗ್ರಿಮೆಂಟ್‌’ ಕಾರಣ ಎಂಬ ವಿಚಾರವನ್ನು ವಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಹಿರಂಗಪಡಿಸಿದ ಘಟನೆ ಗುರುವಾರ ಸದನದಲ್ಲಿ ನಡೆಯಿತು. 

ವಿಧಾನಸಭೆ (ಫೆ.17): ಜೆಡಿಎಸ್‌ ಮತ್ತು ಬಿಜೆಪಿ ನಡುವಿನ 20-20 ಸರ್ಕಾರದಲ್ಲಿ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದಿರಲು ‘ದೆಹಲಿಯಿಂದ ಬಂದ ಅಗ್ರಿಮೆಂಟ್‌’ ಕಾರಣ ಎಂಬ ವಿಚಾರವನ್ನು ವಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಹಿರಂಗಪಡಿಸಿದ ಘಟನೆ ಗುರುವಾರ ಸದನದಲ್ಲಿ ನಡೆಯಿತು. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡುವಾಗ, ಬಿಜೆಪಿಯ ಕೆ.ಎಸ್‌.ಈಶ್ವರಪ್ಪ ಅವರು ನೀವು ಯಡಿಯೂರಪ್ಪ ಅವರಿಗೆ ಜಂಟಲ್‌ಮ್ಯಾನ್‌ ಅಗ್ರಿಮೆಂಟ್‌ ಪ್ರಕಾರ ಹಿಂದೆ 20 ತಿಂಗಳ ಅಧಿಕಾರ ನೀಡಲಿಲ್ಲ ಎಂಬ ನೋವಿದೆ ಎಂದು ಹೇಳಿದರು.

ಇದಕ್ಕೆ ಈ ಸ್ಪಷ್ಟನೆ ನೀಡಿದ ಅವರು, ನಮ್ಮ ನಡುವಿನ ಸಹಿ ಹಾಕದ ಅಗ್ರಿಮೆಂಟ್‌ ಪ್ರಕಾರ ನಡೆದಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ, ಸಹಿ ಹಾಕಬೇಕೆಂದು ದೆಹಲಿಯಿಂದ ಬಂದ ಅಗ್ರಿಮೆಂಟ್‌ನಿಂದ ಸಮಸ್ಯೆ ಆಯಿತು. ಅಷ್ಟೊತ್ತಿಗೆ ದೇವೇಗೌಡರು ದೆಹಲಿಗೆ ವಿಮಾನ ಹತ್ತಿದ್ದರು. ಅಂದು ಕೇಂದ್ರ ಸಚಿವರಾಗಿದ್ದ ಜಸ್ವಂತ್‌ ಸಿಂಗ್‌ ದೇವೇಗೌಡರಿಗೆ ಏನು ಹೇಳಿದರೋ ಇಂದಿಗೂ ಗೊತ್ತಿಲ್ಲ. ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡಲು ನಾನು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೆ. ಯಾರಿಂದ ಅನ್ಯಾಯ ಆಯಿತು ಎಂದು ಯಡಿಯೂರಪ್ಪ ಹೇಳಿದ್ದಾರೆ. ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಅಗ್ರಿಮೆಂಟ್‌ ಒಂದು ದೆಹಲಿಯಿಂದ ಬರದೆ ಹೋಗಿದ್ದರೆ ಏನೂ ಆಗುತ್ತಿರಲಿಲ್ಲ. ಆ ಅಗ್ರಿಮೆಂಟ್‌ಗೆ ಸಹಿ ಹಾಕಲು ಯಡಿಯೂರಪ್ಪ ಒಪ್ಪಿರಲಿಲ್ಲ. ಆ ಕಾರಣಕ್ಕೆ ನಾನು ಬೆಂಬಲ ಕೊಡಲಿಲ್ಲ. ಆದರೆ, ಈ ಪ್ರಸಂಗದಲ್ಲಿ ನಾನು ಬಲಿಪಶುವಾದೆ ಎಂದರು.

ಮಂಡ್ಯ ಜಿಲ್ಲೆ ಗೆಲ್ಲಲು ಬಿಜೆಪಿ ಚಾಣಕ್ಯ ತಂತ್ರ: ಅಶ್ವತ್ಥ್, ವಿಜಯೇಂದ್ರ ನೇತೃತ್ವದಲ್ಲಿ ಬಿಗ್‌ ಪ್ಲಾನ್‌

ಅಣ್ಣಾ ನಿಂದು ಗೋಲ್ಡನ್‌ ಹ್ಯಾಂಡ್‌ ಎಂದಿದ್ದ ರವಿ: ‘ಜೆಡಿಎಸ್‌ ಅಂಗವಿಕಲರ ಪಕ್ಷ ಎನ್ನುವ ರೀತಿಯಲ್ಲಿ ಸದಸ್ಯರೊಬ್ಬರು ಹೇಳಿಕೆ ನೀಡಿದ್ದಾರೆ. ನಾವು ಅವಕಾಶವಾದಿ ರಾಜಕಾರಣಿಗಳು ಎಂದೂ ಹೇಳಿದ್ದಾರೆ. ಚುನಾವಣೆಯ ಸಾಲ ತೀರಿಲ್ಲ ಎಂದು ನನ್ನ ಬಳಿ ಸಹಾಯ ಪಡೆದಾಗ ಇವು ನೆನಪಾಗಲಿಲ್ಲವೇ?’ ಎಂದು ಬಿಜೆಪಿ ಸದಸ್ಯ ಸಿ.ಟಿ.ರವಿ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಗುರುವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ‘ಅಂಗವಿಕಲ ಮಗು (ಸಮ್ಮಿಶ್ರ ಸರ್ಕಾರ) ಹುಟ್ಟಲು ಅವಕಾಶ ನೀಡಬೇಡಿ’ ಎಂದಿದ್ದ ಬಿಜೆಪಿ ಸದಸ್ಯ ಸಿ.ಟಿ.ರವಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಮತ್ತೊಮ್ಮೆ ಗೆಲ್ಲಿಸಿ ಅಭಿವೃದ್ಧಿಯಲ್ಲಿ ವಿಜಯನಗರ ನಕಾಶೆ ಬದಲಿಸುವೆ: ಸಚಿವ ಆನಂದ್‌ ಸಿಂಗ್‌

ಬಿಜೆಪಿ ಸದಸ್ಯರೊಬ್ಬರು ರಾಜ್ಯಪಾಲರ ಭಾಷಣದ ಬಗ್ಗೆ ಮಾತನಾಡದೆ ಅಂಗವಿಕಲ ಮಗು ಹುಟ್ಟಲು ಅವಕಾಶ ಕೊಡಬೇಡಿ ಎಂದಿದ್ದಾರೆ. ಜೆಡಿಎಸ್‌ ವಿಕಲಚೇತನ ಪಕ್ಷ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ರಾಜಕಾರಣದಲ್ಲಿ ವಿಕಲಾಂಗ ವ್ಯವಸ್ಥೆ ಇರಬಾರದು ಎಂದೂ ಹೇಳಿದ್ದಾರೆ. ಈ ರಾಜ್ಯದಲ್ಲಿ ವಿಕಲಚೇತನರಿಗೆ ಶಕ್ತಿ ತುಂಬಿದವರು ಈ ಕುಮಾರಸ್ವಾಮಿ. ಇಂಧನ ಇಲಾಖೆಯಲ್ಲಿ 1 ಸಾವಿರ ಮಂದಿ ವಿಕಲಚೇತನರಿಗೆ ಉದ್ಯೋಗ ನೀಡಿದ್ದೆ. ಅವರು ಈಗಲೂ ನನ್ನನ್ನು ನೆನೆಸುತ್ತಾರೆ’ ಎಂದರು. ಆದರೆ ನೀವು ಚುನಾವಣೆ ನಡೆಸಿರುವ ಸಾಲ ತೀರಿಸಲು ಆಗುತ್ತಿಲ್ಲ ಎಂದು ನನ್ನ ಬಳಿ ಸಹಾಯ ಕೇಳಿ ಬಂದಿದ್ದಿರಿ. ಸಹಾಯ ಪಡೆದ ಬಳಿಕ ಬಂದು ಅಣ್ಣ ನಿಂದು ಗೋಲ್ಡನ್‌ ಹ್ಯಾಂಡ್‌ ಎಂದಿದ್ದಿರಿ. ಈಗ ವಿಕಲಾಂಗ ಪಕ್ಷ ಎಂದು ಮಾತನಾಡುತ್ತೀರಿ ಎಂದು ಕಿಡಿ ಕಾರಿದರು.