ಕರ್ನಾಟಕದಲ್ಲಿ ಜನವರಿ ನಂತರ ಪಕ್ಷಾಂತರ ಪರ್ವ: ಸತೀಶ ಜಾರಕಿಹೊಳಿ

ಬಿಜೆಪಿ ಮೀಸಲಾತಿ ಹೆಚ್ಚಿಸಲು ಮುಂದಾಗಿರುವುದು ರಾಜಕೀಯ ಲಾಭಕ್ಕಾಗಿ: ಸತೀಶ ಜಾರಕಿಹೊಳಿ 

Defection After January in Karnataka Says Satish Jarkiholi grg

ರಾಯಚೂರು(ಅ.23):  ರಾಜ್ಯದಲ್ಲಿ ಜನವರಿ ಬಳಿಕ ಕಾಂಗ್ರೆಸ್‌ ಮಾತ್ರವಲ್ಲ ಎಲ್ಲ ಪಕ್ಷಗಳಲ್ಲೂ ಪಕ್ಷಾಂತರ ಮಾಡುವ ನಾಯಕರಿದ್ದಾರೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಭವಿಷ್ಯ ನುಡಿದರು.

ನಗರದಲ್ಲಿ ಭಾರತ್‌ ಜೋಡೊ ನಿಮಿತ್ತ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದವರು ಬೇರೆ ಕಡೆ ಹೋಗುತ್ತಾರೆ. ಆ ಪಕ್ಷದವರು ನಮ್ಮಲ್ಲಿಗೆ ಬರುತ್ತಾರೆ. ಚುನಾವಣೆ ಬಂದರೆ ಇದೊಂದು ಸಾಮಾನ್ಯ ಪ್ರಕ್ರಿಯೆ. ಆದರೆ, ಯಾರು ಹೋಗುತ್ತಾರೆ, ಬರುತ್ತಾರೆ ಎಂಬದು ಗೊತ್ತಾಗಬೇಕಾದರೆ ಜನವರಿವರೆಗೂ ಕಾಯಬೇಕು ಎಂದರು.

ಬಿಜೆಪಿ, ಆರ್‌ಎಸ್‌ಎಸ್‌ ಜನರಲ್ಲಿ ಕೋಮುದ್ವೇಷ ಹರಡುತ್ತಿದೆ: ರಾಹುಲ್‌ ಗಾಂಧಿ

ಮೀಸಲಾತಿ ಹೆಚ್ಚಿಸಿಕೊಳ್ಳಲು ಸಂವಿಧಾನದಲ್ಲಿ ಅವಕಾಶ ಇದೆ. ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಧರಿಸಬೇಕು. ಚುನಾವಣೆ ಪೂರ್ವದಲ್ಲಿ ಬಿಜೆಪಿ ಮೀಸಲಾತಿ ಹೆಚ್ಚಿಸಲು ಹೋಗಿರುವುದು ರಾಜಕೀಯ ಲಾಭಕ್ಕಾಗಿ. ಸಚಿವ ರಾಮುಲು ಅವರ ಒತ್ತಾಯಕ್ಕೆ ಮಾಡಿದ್ದರೆ ಇಷ್ಟುದಿನ ಯಾಕೆ ಸುಮ್ಮನಿದ್ದರು. ನಮ್ಮ ಸಮಾಜದ ಗುರುಗಳು ಅನೇಕ ತಿಂಗಳುಗಳಿಂದ ಹೋರಾಟ ಮಾಡುತ್ತಿದ್ದಾರೆ. ಮಾಡುವುದಿದ್ದರೆ ಅವರ ಹೋರಾಟಕ್ಕೆ ಮಣಿದು ಮಾಡಬೇಕಿತ್ತು. ಆದರೆ, ಕಾಯ್ದೆ ರೂಪದಲ್ಲಿಯೆ ಜಾರಿ ಮಾಡಲಿ ಎಂಬುದು ನಮ್ಮ ಒತ್ತಾಸೆಯಾಗಿದೆ. ಆದರೆ, ಬಿಜೆಪಿಯವರು ಸುಗ್ರಿವಾಜ್ಞೆ ಮೂಲಕ ಮಾಡುವ ದಾರಿ ಕಂಡುಕೊಂಡಿದ್ದು, ಅದು ತಾತ್ಕಾಲಿಕ ಪರಿಹಾರವಾಗಲಿದೆ. ಡಿಸೆಂಬರ್‌ನಲ್ಲಿ ಅಧಿವೇಶನ ಕರೆದು ಮಾರ್ಚ್‌ನಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡುವುದನ್ನು ಬಿಟ್ಟು ತಕ್ಞಣ ಜಾರಿ ಮಾಡಲಿ ಎಂದು ಆಗ್ರಹಿಸಿದರು.
 

Latest Videos
Follow Us:
Download App:
  • android
  • ios