Asianet Suvarna News Asianet Suvarna News

Assembly Election : ಕಾಂಗ್ರೆಸ್‌ ಅಭ್ಯರ್ಥಿಗಳ ಠೇವಣಿ ಕಳೆಯಿರಿ: ಅರುಣ್ ಸಿಂಗ್

  • ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಠೇವಣಿ ಕಳೆಯಿರಿ
  • ಕಾರ್ಯಕರ್ತರ ಸಂಕಲ್ಪ ಯಾತ್ರೆ ಉದ್ಘಾಟನೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌
Deduct the deposit of Congress candidates in assembly elections says arun singh rav
Author
First Published Nov 10, 2022, 9:16 AM IST

ಚಿತ್ರದುರ್ಗ (ನ.10) : ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿದ್ದು ಕಾಂಗ್ರೆಸ್‌ ಅಭ್ಯರ್ಥಿಗಳ ಠೇವಣಿ ಕಳೆಯುವ ನಿಟ್ಟಿನಲ್ಲಿ ಈಗಿನಿಂದಲೇ ಪಕ್ಷ ಸಂಘಟಿಸುವ, ಮತದಾದರರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಬೇಕೆಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಮನವಿ ಮಾಡಿದರು.

150ಕ್ಕೂ ಹೆಚ್ಚು ಸ್ಥಾನ ಗೆದ್ದು ಮತ್ತೆ ಬಿಜೆಪಿ ಅಧಿಕಾರಕ್ಕೆ; ಅರುಣ್ ಸಿಂಗ್

ನಗರದ ಎಸ್‌ಎಸ್‌ ಕೆ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಕಾರ್ಯಕರ್ತರ ಸಂಕಲ್ಪ ಯಾತ್ರೆಉದ್ಘಾಟಿಸಿ ಮಾತನಾಡಿದ ಅವರು ಕಾಂಗ್ರೆಸ್‌ಗೆ ದೇಶದಲ್ಲಿ ಎಲ್ಲಿಯೂ ನೆಲೆ ಇಲ್ಲ. ದೇಶದ ಜನರ ವಿಶ್ವಾಸವನ್ನು ಅದು ಕಳೆದುಕೊಂಡಿದೆ. ಬಿಜೆಪಿಯಲ್ಲಿ ಬೂತ್‌ ಕಾರ್ಯಕರ್ತರೇ ನಮ್ಮ ನಾಯಕರಾಗಿದ್ದು ಪಕ್ಷವನ್ನು ಅಧಿಕಾರಕ್ಕೆ ತರುವಷ್ಟರ ಮಟ್ಟಿಗೆ ಸಮರ್ಥರಾಗಿದ್ದಾರೆ. ಆ ಕಾರಣಕ್ಕಾಗಿಯೇ ದೇಶದ ಎಲ್ಲೆಲ್ಲಿ ಚುನಾವಣೆ ನಡೆದಿದೆಯೋ ಅಲ್ಲಲ್ಲಿ ಬಿಜೆಪಿ ಜಯಗಳಿಸುತ್ತಾ ಸಾಗಿದೆ ಎಂದರು.

ಹಿಂದೂ, ಹಿಂದುತ್ವಕ್ಕೆ ಅಪಮಾನ ಮಾಡುವುದೇ ಕಾಂಗ್ರೆಸ್‌ ಕೆಲಸ. ಸತೀಶ್‌ ಜಾರಕಿಹೊಳಿ ಆಡಿದ ಮಾತು ಸರಿಯೇ ಎಂಬುದನ್ನು ಖರ್ಗೆ, ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಹೇಳಬೇಕು. ಇನ್ನು ಮೇಲಾದರೂ ಈ ನಾಯಕರು ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕಿದೆ. ಕಾಂಗ್ರೆಸ್‌ ದೇಶದ ಸಂಸ್ಕೃತಿ ಹಾಳು ಮಾಡಿದರೆ, ಮೋದಿ ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಚಿತ್ರದುರ್ಗ ಅಭಿವೃದ್ಧಿಗೆ ಮೆಚ್ಚುಗೆ:

ಚಿತ್ರದುರ್ಗ ವಿಧಾನಸಭೆ ಕ್ಷೇತ್ರದಲ್ಲಿ ಸಾಕಷ್ಟುಅಭಿವೃದ್ದಿ ಕೆಲಸಗಳಾಗಿವೆ. ನಿವೇಶನ ರಹಿತರಿಗೆ ಹಕ್ಕು ಪತ್ರ ನೀಡುವಾಗ ಆ ಜನರ ಮೊಗದಲ್ಲಿನ ನಗು ನಮ್ಮಲ್ಲಿ ಸಂತಸ ತಂದಿತು. 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಇಂತಹ ಕೆಲಸಗಳ ಮಾಡಲು ಏಕೆ ಸಾಧ್ಯವಾಗಿಲ್ಲವೆಂದು ಅವರು ಪ್ರಶ್ನಿಸಿದರು.

ಇಡೀ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಸಿಸಿ ರಸ್ತೆಯನ್ನು ಚಿತ್ರದುರ್ಗ ವಿಧಾನಸಭೆ ಕ್ಷೇತ್ರ ಹೊಂದಿದೆ. ಚಿತ್ರದುರ್ಗದಲ್ಲಿ ಸಂಕಲ್ಪಯಾತ್ರೆ ಎಂದಾಗ ಅತ್ಯಂತ ಖುಷಿಯಿಂದಲೇ ಆಗಮಿಸಿದೆ. ತಿಪ್ಪಾರೆಡ್ಡಿ ಅವರಂತಹ ಸಮರ್ಥ ನಾಯಕರು ಚಿತ್ರದುರ್ಗ ಕ್ಷೇತ್ರ ಪ್ರತಿನಿಧಿಸುತ್ತಿದ್ದು ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಅತಿ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಗೆಲ್ಲಲಿದೆ ಎಂದು ಅರುಣ್‌ಸಿಂಗ್‌ ಹೇಳಿದರು.

ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಮಾತನಾಡಿ, ನಗರದ ಬಹುತೇಕ ಎಲ್ಲ ರಸ್ತೆಗಳು ಕಾಂಕ್ರಿಟ್‌ ರಸ್ತೆಯಾಗಿ ರೂಪಾಂತರಗೊಂಡಿವೆ. ಶೇ.10 ರಷ್ಟುಮಾತ್ರ ಬಾಕಿ ಉಳಿದಿದ್ದು ಅವುಗಳನ್ನು ಕೂಡಾ ಬೇಗ ಕೈಗೆತ್ತಿಕೊಂಡು ಮುಗಿಸಲಾಗುವುದು. ನಗÜರದಲ್ಲೇ 12 ಸಾವಿರ ಕುಟುಂಬಗಳಿಗೆ ಮನೆಗಳೇ ಇಲ್ಲ. ಅವರಲ್ಲಿ 3 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ಕೊಡುತ್ತಿದ್ದೇನೆ. ಅಮೃತ ಯೋಜನೆ ಯಡಿ ಪ್ರತಿ ಮನೆಗೆ ನೀರು ಕೊಡುವ ವ್ಯವಸ್ಥೆ ಮಾಡಲಾಗಿದೆ. ಮನೆಗಳಿಗೆ ಗ್ಯಾಸ್‌ ಪೈಪ್‌ ಲೈನ್‌ ಸಂಪರ್ಕ ಕಲ್ಪಿಸಲಾಗುತ್ತಿದೆÜ ಎಂದರು.

ಚಿತ್ರದುರ್ಗದಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ಆರಂಭಿಸಬೇಕೆಂಬುದು ಆ ಭಾಗದ ಜನರ ಬಹುದಿನಗಳ ಆಸೆಯಾಗಿತ್ತು. ಅದೂ ಕೂಡಾ ಈಡೇರುತ್ತಿದೆ. ಟೆಂಡರ್‌ ಮುಗಿದಿದ್ದು, ಮುಂದಿನ ತಿಂಗಳು ಶಂಕುಸ್ಥಾಪನೆ ಮಾಡುತ್ತೇವೆ. ನೀಡಿದ ಮಾತಿನಂತೆ ನಾವು ನಡೆದುಕೊಂಡು ಜನರ ಕೆÇಸಗಳನ್ನು ಮಾಡಿದ್ದೇವೆ. ನಮಗೆ ದೇಶ ಮುಖ್ಯ. ಅಧಿಕಾರ ಮುಖ್ಯ ಅಲ್ಲವೆಂದರು.

ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌. ನವೀನ್‌ ಮಾತನಾಡಿ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದರೆ. ಕಳೆದ ಭಾರಿಗಿಂತ ಕನಿಷ್ಠ 50 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಗಳಿಸುತ್ತೇವೆ. ಅಲ್ಲದೆ ಜಿಲ್ಲೆಯ 6 ಕ್ಷೇತ್ರಗಳನ್ನು ಗೆಲ್ಲಲು ಚಿತ್ರದುರ್ಗ ಸ್ಫೂರ್ತಿ ಆಗಲಿದೆ ಎಂದರು.

ಹುಬ್ಬಳ್ಳಿಗೆ ಆಗಮಿಸಿದ ಬಿಜೆಪಿ ಉಸ್ತುವಾರಿ, ಶಾಸಕ ಬೆಲ್ಲದ ಶಕ್ತಿ ಪ್ರದರ್ಶನ

ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್‌ ನಾರಾಯಣ, ಜಿಲ್ಲಾಧ್ಯಕ್ಷ ಮುರುಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಗಣಿ ಖನಿಜ ನಿಗಮದ ಮಾಜಿ ಅಧ್ಯಕ್ಷ ಲಿಂಗಮೂರ್ತಿ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್‌, ಚಾಲುಕ್ಯ ನವೀನ್‌ ಸೇರಿದಂತೆ ಇತರರು ಹಾಜರಿದ್ದರು. ಜಯಪಾಲಯ್ಯ ಕಾರ್ಯಕ್ರಮ ನಿರೂಪಿಸಿದರು. ಚಿತ್ರದುರ್ಗ ತಾಲೂಕು ಪಂಚಾಯಿತಿಯ ಮಾಜಿ ಆಧ್ಯಕ್ಷರಾದ ವೇಣುಗೋಪಾಲ್‌ ರೆಡ್ಡಿ ಮತ್ತು ಬೆಂಬಲಿಗರು ಕಾಂಗ್ರೆಸ್‌ ತೋರೆದು ಬಿಜೆಪಿ ಸೇರಿದರು

Follow Us:
Download App:
  • android
  • ios