ಭಾಷಣದ ವೇಳೆ ಸಿಎಂ ಸಿದ್ದರಾಮಯ್ಯ ಜೊತೆ ಸಚಿವ ಎಂ.ಬಿ. ಪಾಟೀಲ್‌ಗೆ ಮಾತನಾಡುತ್ತಿದ್ದರು. ಇದಕ್ಕೆ ಗರಂ ಆದ ಡಿಕೆಶಿ ಡೋಂಟ್ ಡಿಸ್ಟರ್ಬ್‌ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಏನೇ ಇರಲಿ ಮಾತನಾಡಬೇಡಿ ಅಂತ ಎಂ.ಬಿ. ಪಾಟೀಲ್‌ಗೆ ಎಚ್ಚರಿಕೆ ಕೊಟ್ಟಿದ್ದಾರೆ.  ಈ ವೇಳೆ ಸಿಎಂ ಸಿದ್ದರಾಮಯ್ಯ ಸುಮ್ಮನೆ ಇದ್ದರು. 

ಬೆಂಗಳೂರು(ಮೇ.21):  ರಾಜ್ಯದ ಜನತೆ ನಮ್ಮ ‌ಮೇಲೆ ಪ್ರೀತಿ ಇಟ್ಟಿದ್ದಾರೆ. ಕನ್ನಡ ತಾಯಿಗೆ ನಮಸ್ಕಾರ ಅರ್ಪಿಸುತ್ತೇನೆ. ನಾವು ರಾಜೀವ್ ಗಾಂಧಿ ಕಾಲದವರು. ನೇರವಾಗಿ ಕೂತು ಮಾತನಾಡಿ ರಾಜೀವ್ ಗಾಂಧಿನ ಅವರು ಶಕ್ತಿ ತುಂಬಿದ್ರು. ಡಿ.ಕೆ. ಸುರೇಶ್ ಅವರ ಕ್ವಾರಿಯಿಂದ ಕಲ್ಲು ತೆಗೆದುಕೊಂಡು ಹೋಗಲಾಗಿತ್ತು. ರಾಜೀವ್ ಗಾಂಧಿ ದೇಹ ಬಿದ್ದಿದ್ದ ಜಾಗದಲ್ಲಿ ನೆಡಲಾಗಿದೆ. ಈ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಗಾಂಧಿ ಕುಟುಂಬ ಮತ್ತು ನಮಗೆ ಮಾತ್ರ ಈ ವಿಚಾರ ಗೊತ್ತಿತ್ತು. ಇದೇ ಮೊದಲ‌ ಬಾರಿಗೆ ಈ ವಿಚಾರ ಬಹಿರಂಗ ‌ಮಾಡ್ತಾ ಇದ್ದೇನೆ ಅಂತ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಇಂದು(ಭಾನುವಾರ) ನಗರದ ಇಂದಿರಾ ಗಾಂಧಿ ಭವನದಲ್ಲಿ ನಡೆಯುತ್ತಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನನಾಡಿದ ಡಿ.ಕೆ. ಶಿವಕುಮಾರ್, ನನ್ನ ಮುಂದೆ ರಾಜೀವ್ ಗಾಂಧಿ ಒಂದು ಮಾತು ಹೇಳಿದ್ರು. ಪಂಚಾಯಿತಿಯಿಂದ ಪಾರ್ಲಿಮೆಂಟ್ ವರಗೆ ನಾಯಕರ ಸೃಷ್ಟಿ ಆಗಬೇಕು. ಆ ನಿಟ್ಟಿನಲ್ಲಿ ಕಾನೂನು ತಂದ್ರು. 18 ವರ್ಷಕ್ಕೆ ಯುವಕರಿಗೆ ಮತ ಹಾಕುವ ಅವಕಾಶ ಕೊಟ್ರು. ಬಿಜೆಪಿ, ಜನತಾ ದಳ ಟೀಕೆ ಮಾಡ್ತಾ ಇದ್ರು. ಅವತ್ತು ಪಾರ್ಲಿಮೆಂಟ್ ನಲ್ಲಿ ರಾಜೀವ್ ಗಾಂಧಿ ಭಾಷಣ ಮಾಡಿದ್ರು. 16 ವರ್ಷಕ್ಕೆ ಮಿಲಿಟರಿ ಕೆಲಸಕ್ಕೆ ತೆಗೆದುಕೊಳ್ತೆವೆ, ಬಂದೂಕು ಕೊಟ್ಟು‌ ನಿಲ್ಲಿಸ್ತೇವೆ. ಅಂತ ಯುವಕರು ಜನಪ್ರತಿನಿಧಿ ಆಯ್ಕೆ ಮಾಡಬೇಡಿ ಅಂದ್ರೆ ಹೇಗೆ. ಅಂತಹ ದೊಡ್ಡ ನಾಯಕ ರಾಜೀವ್ ಗಾಂಧಿ ಅವರು. ಗಾಂಧಿ ಕುಟುಂಬದ ತ್ಯಾಗ ಯಾರು ಮಾಡಲು ಸಾಧ್ಯವಿಲ್ಲ ಅಂತ ತಿಳಿಸಿದ್ದಾರೆ. 

8 ಮಂದಿಗಷ್ಟೇ ಒಲಿದಿದ್ದೇಕೆ ಮಂತ್ರಿ ಪಟ್ಟ?: ಸಿದ್ದು- ಡಿಕೆ ಜಂಗೀಕುಸ್ತಿಗೆ ಕಾರಣರಾದ್ರಾ ಜಮೀರ್?

ಮಾಜಿ‌ ಸಿಎಂ ವೀರೇಂದ್ರ ಪಾಟೀಲ್ ಅಧಿಕಾರದಿಂದ ಇಳಿಸಿದ ಪ್ರಸಂಗ ವಿವರಿಸಿದ ಡಿಕೆಶಿ, ನಾವು ರಾಜೀವ್ ಗಾಂಧಿ ಮುಂದೆ ಪಾಟೀಲ್ ಹೆಲ್ತ್ ಬಗ್ಗೆ ಗಮನಕ್ಕೆ ತಂದ್ವಿ, ರಾಜೀವ್ ಗಾಂಧಿ ಪಾಟೀಲ್ ಆರೋಗ್ಯ ಬಂದು ನೋಡಿದ್ರು. ಬೇರೆ ಯಾರನ್ನೂ ಸಿಎಂ ಮಾಡಬೇಕು ಅಂತ ಕೇಳಿದ್ರು. ನಾನು ಬಂಗಾರಪ್ಪ ಹೆಸರು ಹೇಳಿದೆ. ಬಂಗಾರಪ್ಪ ಮನೆಗೆ ನಾನೇ ಕರೆದುಕೊಂಡು ಹೋದೆ. ನಾನು ಬಂಗಾರಪ್ಪ ಶಿಷ್ಯ, ಎಸ್. ಎಂ. ಕೃಷ್ಣ ಶಿಷ್ಯ ಅಲ್ಲ. ಈ ವೇಳೆ ಬಂಗಾರಪ್ಪ ಗರಂ ಆದ್ರು, ಪಾಟೀಲ್ ಕೆಳಗೆ ಇಳಿಸುವ ಬಗ್ಗೆ ಹೇಳಿದ್ದಕ್ಕೆ ಬಂಗಾರಪ್ಪ ಗರಂ ಆದ್ರೂ. ನಾನು ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದೆ. ಅವತ್ತೇ ಬಂಗಾರಪ್ಪ ಹೇಳಿದ್ರು, ನಾನು ಸಿಎಂ ಆದ್ರೆ ನೀನು ಮಂತ್ರಿ ಅಂತ. ಅವತ್ತು ಪಾಟೀಲ್ ಆರೋಗ್ಯ ನೋಡಿ ಸಿಎಂ ಬದಲಾವಣೆ ಆಯ್ತು. ಏರ್‌ಪೊರ್ಟ್‌ನಲ್ಲೇ ಬದಲಾವಣೆ ಮಾಡಿ ಹೋದ್ರು. ಅದು ರಾಜೀವ್ ಗಾಂಧಿ ಗಟ್ಟಿತನದ ನಾಯಕತ್ವ ಅಂತ ರಾಜೀವ್‌ ಗಾಂಧಿ ಅವರನ್ನ ಬಣ್ಣಿಸಿದ್ದಾರೆ. 

ಸಚಿವ ಎಂ.ಬಿ. ಪಾಟೀಲ್‌ಗೆ ಎಚ್ಚರಿಕೆ ಕೊಟ್ಟ ಡಿಕೆಶಿ 

ಭಾಷಣದ ವೇಳೆ ಸಿಎಂ ಸಿದ್ದರಾಮಯ್ಯ ಜೊತೆ ಸಚಿವ ಎಂ.ಬಿ. ಪಾಟೀಲ್‌ಗೆ ಮಾತನಾಡುತ್ತಿದ್ದರು. ಇದಕ್ಕೆ ಗರಂ ಆದ ಡಿಕೆಶಿ ಡೋಂಟ್ ಡಿಸ್ಟರ್ಬ್‌ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಏನೇ ಇರಲಿ ಮಾತನಾಡಬೇಡಿ ಅಂತ ಎಂ.ಬಿ. ಪಾಟೀಲ್‌ಗೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಸುಮ್ಮನೆ ಇದ್ದರು. 

ಕಾಂಗ್ರೆಸ್‌ ಕೊಟ್ಟ 5 ಗ್ಯಾರಂಟಿಗಳು ಈಡೇರುತ್ತಾ ?: ಈ ಬಗ್ಗೆ ಆರ್ಥಿಕ ತಜ್ಞರು ಹೇಳೋದೇನು ?, ಬೇಕಿರುವ ಹಣವೆಷ್ಟು ?

ನನ್ನ ಬಳಿ ಬಂದು ಸಿದ್ದರಾಮಯ್ಯ ಹಾಗಂದ್ರು, ಎಂಬಿಪಿ ಹೀಗಂದ್ರು ಅಂತ ಅಂತ ಚಾಡಿ ಹೇಳಿ ತಂದು ಹಾಕಬೇಡಿ. ಮೊದಲು ಬೂತ್ ಮಟ್ಟದಲ್ಲಿ ಬಲಿಷ್ಟರಾಗಿ. ಸಿದ್ದರಾಮಯ್ಯ ಮನೆ ನನ್ನ ಮನೆ ಸುತ್ತುತ್ತ ಇರಬೇಡಿ . ನಿಮ್ಮ ಗುರಿ ಮುಂದಿನ ಚುನಾವಣೆಗೆ ನಿಮ್ಮ‌ ಬೂತ್ ಸಿದ್ದಪಡಿಸಿ. ಪಾರ್ಲಿಮೆಂಟ್ ಗೂ ಅಸೆಂಬ್ಲಿಗೂ ವ್ಯತ್ಯಾಸ ಇರುತ್ತೆ ಚುನಾವಣೆಯಲ್ಲಿ ತಿಳಿದುಕೊಳ್ಳಿ ಅಂತ ಕಾರ್ಯಕರ್ತರಿಗೆ ಡಿಕೆಶಿ ಹೇಳಿದ್ದಾರೆ. 

ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೋಳಿ, ಬಿ.ಕೆ. ಹರಿಪಸ್ರಾದ್, ಕೆಪಿಸಿಸಿ ಕಾರ್ಯಧ್ಯಕ್ಷರಾದ ಸಲೀಂ ಅಹ್ಮದ್, ಬಿ.ಎನ್. ಚಂದ್ರಪ್ಪ ಉಪಸ್ಥಿತರಿದ್ದರು.