‘ನಾವು ಮಂಡ್ಯದಲ್ಲಿ ಏಳಕ್ಕೆ ಆರು ಸ್ಥಾನ ಗೆದ್ದಿರುವುದನ್ನು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೊಟ್ಟೆಕಿಚ್ಚು ಹಾಗೂ ಅಸೂಯೆಗೆ ಮದ್ದಿಲ್ಲ. ನಮ್ಮ ಬಗ್ಗೆ ಏನೇನು ಆರೋಪ ಮಾಡಿದ್ದಾರೋ ಎಲ್ಲವನ್ನೂ ತನಿಖೆ ಮಾಡೋಣ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪರೋಕ್ಷ ತಿರುಗೇಟು ನೀಡಿದ್ದಾರೆ.

ಬೆಂಗಳೂರು (ಆ.08): ‘ನಾವು ಮಂಡ್ಯದಲ್ಲಿ ಏಳಕ್ಕೆ ಆರು ಸ್ಥಾನ ಗೆದ್ದಿರುವುದನ್ನು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೊಟ್ಟೆಕಿಚ್ಚು ಹಾಗೂ ಅಸೂಯೆಗೆ ಮದ್ದಿಲ್ಲ. ನಮ್ಮ ಬಗ್ಗೆ ಏನೇನು ಆರೋಪ ಮಾಡಿದ್ದಾರೋ ಎಲ್ಲವನ್ನೂ ತನಿಖೆ ಮಾಡೋಣ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪರೋಕ್ಷ ತಿರುಗೇಟು ನೀಡಿದ್ದಾರೆ.

ಸಚಿವ ಚಲುವರಾಯಸ್ವಾಮಿ ವಿರುದ್ಧ ಅಧಿಕಾರಿಗಳು ರಾಜ್ಯಪಾಲರಿಗೆ ಬರೆದಿರುವ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಮಂಡ್ಯದಲ್ಲಿ ಆರು ಸ್ಥಾನ ಗೆದ್ದಿರುವುದಕ್ಕೆ ಸಹಿಸಿಕೊಳ್ಳಲಾಗುತ್ತಿಲ್ಲ. ಅಸೂಯೆಗೆ ಮದ್ದಿಲ್ಲ’ ಎಂದು ಹೇಳಿದರು. ಅಧಿಕಾರಿಗಳು ಏನು ಪತ್ರ ಬರೆದಿದ್ದಾರೋ ನನಗೆ ಗೊತ್ತಿಲ್ಲ. ಬರೆದಿದ್ದಾರೋ ಇಲ್ಲವೋ ಕೂಡ ಗೊತ್ತಿಲ್ಲ. ನಮ್ಮ ಮೇಲೆ ಅವರು ಬೇರೆ ಬೇರೆ ಆರೋಪಗಳನ್ನು ಮಾಡುತ್ತಿದ್ದಾರೆ. ಎಲ್ಲವನ್ನೂ ತನಿಖೆ ಮಾಡಿಸೋಣ ಎಂದರು.

ಅವಕಾಶ ಸಿಕ್ಕರೆ ಪುತ್ರ ಸುನಿಲ್‌ ಚಾ.ನಗರದಿಂದ ಸ್ಪರ್ಧೆ: ಸಚಿವ ಮಹದೇವಪ್ಪ

ಮಲ್ಲೇಶ್ವರ, ರಾಜರಾಜೇಶ್ವರಿನಗರದಲ್ಲಿ ಬಿಲ್‌ ಆಗುತ್ತಿಲ್ಲ. ಆ ಬಗ್ಗೆ ನಮಗೂ ಜವಾಬ್ದಾರಿ ಇದೆ. ಮಾಜಿ ಸಚಿವ ಅಶ್ವತ್ಥನಾರಾಯಣ್‌ ಅವರು ಈ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದ್ದರು. ಮುನಿರತ್ನ ಹಾಗೂ ತಮ್ಮ ಕ್ಷೇತ್ರದ ಬಗ್ಗೆ ತನಿಖೆಗೆ ಆಗ್ರಹಿಸಿದ್ದರು. ಅವರ ನುಡಿಮುತ್ತುಗಳ್ನು ನಾವು ಕೇಳಬೇಕಲ್ಲ. ಬೇರೆ ಕಡೆಯಲ್ಲಿ ಬಿಲ್‌ ಆಗುವುದಕ್ಕೆ ಮೂರು ವರ್ಷ ಆಗಬೇಕು. ಇಲ್ಲಿ 15, 20 ದಿನಕ್ಕೆಲ್ಲಾ ಬಿಲ್‌ ಮಾಡಿದ್ದಾರೆ. ಇವೆಲ್ಲಾ ಹೇಗಾಗಿದೆ ಎಂಬುದು ಗೊತ್ತಾಗಬೇಕಲ್ಲ. ಹೀಗಾಗಿ ಕಾಮಗಾರಿಗಳ ಪರಿಶೀಲನೆಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಹಿಂದೆ ಅಶ್ವತ್ಥನಾರಾಯಣ್‌ ಅವರು ಬಿಲ್‌ ಕೊಡುತ್ತಿಲ್ಲ ಎಂದು ಆರೋಪ ಮಾಡಿದ್ದರು. ವಿಧಾನಸಭೆಯಲ್ಲೂ ಮಾತನಾಡಿ ತನಿಖೆ ನಡೆಸಲು ಆಗ್ರಹಿಸಿದ್ದರು. 15 ದಿನಗಳಿಗೆ ಬಿಲ್‌ ನೀಡಲು ಆಗುತ್ತದೆಯೇ? ಒಂದು ತಿಂಗಳಲ್ಲೇ ಕೆಲಸ ಮುಗಿಸಲು ಸಾಧ್ಯವೇ? ಒಂದು ವೇಳೆ ಇಂತಹವುಗಳಿಗೆಲ್ಲಾ ಬಿಲ್‌ ನೀಡಿದರೆ ಅವರು ಮುಂದೆ ನಮ್ಮ ಮೇಲೆ ದೂರು ಕೊಡಬಹುದಲ್ಲ. ಹೀಗಾಗಿ ಗುತ್ತಿಗೆದಾರರ ನೈಜ ಕೆಲಸಕ್ಕೆ ಬಿಲ್‌ ನೀಡುತ್ತೇವೆ ಎಂದು ತಿರುಗೇಟು ನೀಡಿದರು.

ಮೋದಿ ಬಂದ ಮೇಲೆ ರೈಲ್ವೆ ಇಲಾಖೆ ಚಿತ್ರಣ ಬದಲು: ಪ್ರಲ್ಹಾದ್‌ ಜೋಶಿ

ಸ್ಪಂದನಾ ಸಾವಿಗೆ ಡಿಕೆಶಿ ಸಂತಾಪ: ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ತಂದೆ, ಕುಟುಂಬ ಸದಸ್ಯರೆಲ್ಲರೂ ನನಗೆ ಗೊತ್ತು. ಸ್ಪಂದನಾ ಅವರಿಗೆ ಚಿಕ್ಕ ವಯಸ್ಸಿನಲ್ಲೇ ಹೀಗೆ ಆಗಿದ್ದಕ್ಕೆ ದುಃಖ ಇದೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಡಿ.ಕೆ. ಶಿವಕುಮಾರ್‌ ಪ್ರಾರ್ಥಿಸಿದರು.