ಗ್ಯಾರಂಟಿ ಸ್ಥಗಿತ ವಿಪಕ್ಷಗಳ ಹಣೇಲಿ ಬರೆದಿಲ್ಲ: ಡಿ.ಕೆ. ಶಿವಕುಮಾ‌ರ್

ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲು ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ. ಹೀಗಾಗಿ ಬಿಜೆಪಿ ಬಗ್ಗೆ ಜನರು ಜಾಗೃತರಾಗಿರಬೇಕು ಎಂದು ದೇವೇಗೌಡ ಅವರು ಸಂದೇಶ ನೀಡಿದ್ದಾರೆ. ನಮ್ಮ ಗ್ಯಾರಂಟಿಗಳನ್ನು ನಿಲ್ಲಿಸಲು ವಿರೋಧ ಪಕ್ಷದವರ ಹಣೆಯಲ್ಲಿ ಬರೆದಿಲ್ಲ ಎಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ 

DCM DK Shivakumar Slams BJP JDS grg

ಬೆಂಗಳೂರು(ನ.12):  ರಾಜ್ಯ ಸರ್ಕಾರ ಜಾರಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದು ವಿರೋಧ ಪಕ್ಷದವರ ಹಣೆಯಲ್ಲಿ ಬರೆದಿಲ್ಲ. ರಾಜ್ಯದ ತಾಯಂದಿರಿಗೆ ನೆರವಾಗಲು ಗೃಹಲಕ್ಷ್ಮಿ ಯೋಜನೆಯಡಿ ಹಣ ನೀಡುತ್ತಿದ್ದೇವೆ. ಅದನ್ನು ತಪ್ಪಿಸಲು ಬಿಜೆಪಿ-ಜೆಡಿಎಸ್ ಹೊರಟಿದ್ದು, ಜನರು ಹುಷಾರಾಗಿರಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಹೇಳಿದ್ದಾರೆ. 

ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಯೋಜನೆ ನಿಲ್ಲಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾ‌ರ್, ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲು ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ. ಹೀಗಾಗಿ ಬಿಜೆಪಿ ಬಗ್ಗೆ ಜನರು ಜಾಗೃತರಾಗಿರಬೇಕು ಎಂದು ದೇವೇಗೌಡ ಅವರು ಸಂದೇಶ ನೀಡಿದ್ದಾರೆ. ನಮ್ಮ ಗ್ಯಾರಂಟಿಗಳನ್ನು ನಿಲ್ಲಿಸಲು ವಿರೋಧ ಪಕ್ಷದವರ ಹಣೆಯಲ್ಲಿ ಬರೆದಿಲ್ಲ ಎಂದರು. 

4 ಬಾರಿ ಬೊಮ್ಮಾಯಿ ಗೆಲ್ಲಿಸಿದರೂ ಕ್ಷೇತ್ರಕ್ಕೆ ಏನೂ ಮಾಡಲಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌

ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು: 

ರಾಜ್ಯದ ಜನರು ಗ್ಯಾರಂಟಿ ಯೋಜನೆಗಳು ಮತ್ತು ಸರ್ಕಾರದ ಆಡ ಳಿತವನ್ನು ಒಪ್ಪಿದ್ದಾರೆ. ಅದರಿಂದಲೇ ಉಪ ಚುನಾವಣೆ ಯಲ್ಲಿ 3 ಕಡೆ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು. 

700 ಕೋಟಿ ಅಬಕಾರಿ ಆರೋಪ ಸಾಬೀತಿಗೆ ಮೋದಿ ಸವಾಲ್‌: ಪ್ರಧಾನಿ ವಿರುದ್ಧ ಮುಗಿಬಿದ್ದ ಸಿದ್ದು, ಡಿಕೆಶಿ

ಪ್ರಧಾನಿ ದಾರಿ ತಪ್ಪಿಸಿದ್ದಾರೆ: 

ರಾಜ್ಯದ ಅಬಕಾರಿ ಇಲಾಖೆ ಯಲ್ಲಿ 700 ಕೋಟಿ ರು. ವಸೂಲಿ ಮಾಡಲಾಗಿದೆ ಎಂಬ ಪ್ರಧಾನಿ ಮೋದಿ ಅವರ ಆರೋಪದ ಬಗ್ಗೆ ಮಾತನಾಡಿದ ಶಿವಕುಮಾರ್, ಪ್ರಧಾನಿ ಸುಳ್ಳು ಆರೋಪ ಮಾಡಿದ್ದಾರೆ. ಯಾರೋ ಅವರನ್ನು ದಾರಿ ತಪ್ಪಿಸಿದ್ದಾರೆ. ಈ ಆರೋಪ ಸಾಬೀತಾದರೆ ರಾಜಕೀಯ ತ್ಯಜಿಸುವುದಾಗಿ ಸಿಎಂ ಹೇಳಿದ್ದಾರೆ. ಅದಕ್ಕಿಂತ ಇನ್ನೇನು ಬೇಕು ಎಂದರು.

ಕೇತಗಾನಹಳ್ಳಿ ಜಮೀನು ನೀಡಿ, ದುಪ್ಪಟ್ಟು ಹಣ ನೀಡುವೆ: ಡಿಕೆಶಿ 

ಚನ್ನಪಟ್ಟಣ: ರಾಮನಗರ ಜಿಲ್ಲೆಯಲ್ಲಿ ಕಾರ್ಖಾನೆ ಸ್ಥಾಪಿಸುತ್ತೇವೆ ಎನ್ನುವ ಕುಮಾರಸ್ವಾಮಿ ಅವರೇ ಬಿಡದಿ ಮತ್ತು ಕೇತಗಾನಹಳ್ಳಿಯಲ್ಲಿ ಇರುವ ನಿಮ್ಮ ಜಮೀನು ಕೊಟ್ಟರೆ ನಾನೇ ಅದಕ್ಕೆ ದುಪ್ಪಟ್ಟು ಹಣ ಕೊಡುವೆ. ಅಲ್ಲಿಯೇ ಕಾರ್ಖಾನೆ ಸ್ಥಾಪಿಸಿ ಎಂದು ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಬಹಿರಂಗ ಸಭೆಯಲ್ಲಿ ಮಾತನಾಡಿ, ಕುಮಾರಸ್ವಾಮಿ ಅವರೇ ಚನ್ನ ಪಟ್ಟಣ ಉಪಚುನಾವಣೆ ಯಲ್ಲಿ ನಿಮ್ಮ ಯಾವ ಹಣ ಬಲವೂ ನಡೆಯುವುದಿಲ್ಲ ಎಂದರು.

Latest Videos
Follow Us:
Download App:
  • android
  • ios