ನಮ್ಮ ಸುದ್ದಿಗೆ ಬಂದವರಿಗೆಲ್ಲಾ ಒಂದೊಂದಾಗಿ ಸೆಟ್ಲಮೆಂಟ್‌ ಆಗಿದೆ. ಈಶ್ವರಪ್ಪನಿಗೂ ಈಗಾಗಲೇ ಒಂದು ಸುತ್ತಿನ ಸೆಟ್ಲಮೆಂಟ್‌ ಆಗಿದೆ. ಈಗ ಈಶ್ವರಪ್ಪ ಎಲ್ಲಿದ್ದಾರೆ ಎಂದು ಗೊತ್ತಿದೆಯೆಲ್ಲಾ? ಎಂದು ಹೇಳಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

ಬೆಂಗಳೂರು(ಫೆ.11):  'ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಅವರು ಸದನದಲ್ಲಿ ನಮ್ಮ ತಂದೆಯನ್ನು ನೆನಪಿಸಿಕೊಂಡರು. ಅದಕ್ಕಾಗಿ ಈಗಾಗಲೇ ಒಂದು ಸುತ್ತಿನ ಸೆಟ್ಲಮೆಂಟ್‌ ಆಗಿದೆ. ಡಿ.ಕೆ. ಸುರೇಶ್‌ ಅವರನ್ನು ಗುಂಡಿಟ್ಟು ಕೊಲ್ಲುವುದಾದರೆ ಕೊಲ್ಲಲಿ ಬಿಡಿ. ಡಿ.ಕೆ. ಸುರೇಶ್ ಮೈಯಲ್ಲಿರುವುದು ಈಶ್ವರಪ್ಪನ ಗುಂಡಿನ ಬೆದರಿಕೆಗೆ ಹೆದರುವ ರಕ್ತವಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ಕೆ.ಎಸ್‌. ಈಶ್ವರಪ್ಪ ಹೇಳಿಕೆ ಕುರಿತು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸುದ್ದಿಗೆ ಬಂದವರಿಗೆಲ್ಲಾ ಒಂದೊಂದಾಗಿ ಸೆಟ್ಲಮೆಂಟ್‌ ಆಗಿದೆ. ಈಶ್ವರಪ್ಪನಿಗೂ ಈಗಾಗಲೇ ಒಂದು ಸುತ್ತಿನ ಸೆಟ್ಲಮೆಂಟ್‌ ಆಗಿದೆ. ಈಗ ಈಶ್ವರಪ್ಪ ಎಲ್ಲಿದ್ದಾರೆ ಎಂದು ಗೊತ್ತಿದೆಯೆಲ್ಲಾ? ಎಂದು ಹೇಳಿದರು.

ಬರಪರಿಹಾರಕ್ಕೆ ಶಬರಿಯಂತೆ ಕಾದರೂ ಪ್ರಯೋಜನವಾಗಿಲ್ಲ; ಕೇಂದ್ರದಿಂದ ಕರ್ನಾಟಕದ ಜನರ ಶೋಷಣೆ ಆಗ್ತಿದೆ: ಸಿಎಂ ಕಿಡಿ

ಕೆಂಪೇಗೌಡರ ಇತಿಹಾಸ ಗೊತ್ತಿದೆಯಲ್ಲವೇ? ಬೆಂಗಳೂರಿನಲ್ಲಿ ನಮ್ಮದೇ ಆದ ಇತಿಹಾಸ ಇದೆ. ನಾವು ರಾಜಕಾರಣ ಮಾಡಬೇಕಾದವರು. ನಾವೇನು ಕಿವಿ ಮೇಲೆ ಹೂವು ಇಟ್ಟುಕೊಂಡು ಬಂದಿಲ್ಲ. ಎಲ್ಲದಕ್ಕೂ ಸೆಟ್ಲಮೆಂಟ್‌ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.