ಕುಮಾರಸ್ವಾಮಿ ಹುಚ್ಚರಾಗಿದ್ದಾರೆ. ಅವರು ತಮ್ಮ ತಾಳ್ಮೆ ಕಳೆದುಕೊಂಡು ಹತಾಶೆಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರ ಪೊಗರು ಮಾತುಗಳು, ಬ್ಲ್ಯಾಕ್ ಮೇಲ್ ಗಳಿಗೆ ನಾನು ಹೆದರುವುದಿಲ್ಲ. ಇದು ಅವರಿಗೂ ಗೊತ್ತಿದೆ. ಅವರು ಕೇಳಿರುವ ಎಲ್ಲಾ ಲೆಕ್ಕ ದಾಖಲೆಗಳನ್ನು ಕೊಡಲು ಸಿದ್ಧ ಎಂದು ತಿರುಗೇಟು ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ 

ಬೆಂಗಳೂರು(ನ.18):  ‘ಬೆಂಗಳೂರಿನ ಮೆಜೆಸ್ಟಿಕ್‌ ಬಳಿಯ ಲುಲು ಮಾಲ್‌ ಜಮೀನು ವಿಚಾರದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಏನೇನು ಪಟ್ಟಿ ಕೊಡುತ್ತಾರೋ ಕೊಡಲಿ ಅದಕ್ಕೆ ಲೆಕ್ಕ ಕೊಡುತ್ತೇನೆ. ಇವರ ಬೆದರಿಕೆಗಳಿಗೆ ನಾನು ಜಗ್ಗುವುದಿಲ್ಲ, ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ. ತಪ್ಪು ಮಾಡಿದ್ದರೆ ಬೇಕಾದರೆ ಗಲ್ಲಿಗೆ ಹಾಕಲಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸವಾಲು ಹಾಕಿದ್ದಾರೆ.

ಕುಮಾರಸ್ವಾಮಿ ಹುಚ್ಚರಾಗಿದ್ದಾರೆ. ಅವರು ತಮ್ಮ ತಾಳ್ಮೆ ಕಳೆದುಕೊಂಡು ಹತಾಶೆಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರ ಪೊಗರು ಮಾತುಗಳು, ಬ್ಲ್ಯಾಕ್ ಮೇಲ್ ಗಳಿಗೆ ನಾನು ಹೆದರುವುದಿಲ್ಲ. ಇದು ಅವರಿಗೂ ಗೊತ್ತಿದೆ. ಅವರು ಕೇಳಿರುವ ಎಲ್ಲಾ ಲೆಕ್ಕ ದಾಖಲೆಗಳನ್ನು ಕೊಡಲು ಸಿದ್ಧ ಎಂದು ತಿರುಗೇಟು ನೀಡಿದರು.

ಎಚ್‌ಡಿಕೆ ಮಾತು ನಂಬಲು ನಾನು ದಡ್ಡನೆ?: ಡಿ.ಕೆ.ಶಿವಕುಮಾರ್

ಸರ್ಕಾರಿ ಖರಾಬು ಜಮೀನಿನಲ್ಲಿ ಮಾಲ್‌ ಕಟ್ಟಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಲುಲು ಮಾಲ್​ ಕಟ್ಟಿರುವ ಜಾಗ ಕೇಂದ್ರ ಸರ್ಕಾರದ ಒಂದು ಸಂಸ್ಥೆಯದ್ದು. ಅವರು ದಾಖಲೆ ಸಿದ್ಧಪಡಿಸಿ ಟೆಂಡರ್ ಹಾಕಿದ್ದರು. ಅದನ್ನು ನಮ್ಮ ಸ್ನೇಹಿತರು ತೆಗೆದುಕೊಂಡಿದ್ದರು. ನಮ್ಮ ಸ್ನೇಹಿತರಿಂದ ನಾನು ತೆಗೆದುಕೊಂಡಿದ್ದೇನೆ. ಏನಾದರೂ ತಪ್ಪು ಮಾಡಿದ್ದರೆ ಬೇಕಾದರೆ ಗಲ್ಲಿಗೆ ಹಾಕಲಿ. ಅವರಿಗೆ ಇನ್ನೂ ಗೊತ್ತಿಲ್ಲ. ಅವರ ತಂದೆ 10-15 ವರ್ಷದ ಹಿಂದೆಯೇ ತನಿಖೆ ಮಾಡಿಸಿದ್ದಾರೆ ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿ ಸರ್ಕಾರ ಬೀಳಿಸಿದ ವಿಚಾರ ಕೆದಕಿದ ಡಿಕೆಶಿಗೆ ತಿರುಗೇಟು, ಯತೀಂದ್ರಗೆ ವಿಡಿಯೋ ಸಂಕಷ್ಟ!

ಬ್ಲ್ಯಾಕ್ ಮೇಲ್‌ಗೆ ಹೆದರಲ್ಲ:

ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯಾಗಿ ಪ್ರತಿ ಸಂದರ್ಭದಲ್ಲೂ ನನ್ನ ಆಸ್ತಿ ವಿವರ ಘೋಷಿಸಿದ್ದೇನೆ. ನಾನು ಅಕ್ರಮವಾಗಿ ಕರೆಂಟ್ ಬಳಸಿರುವ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಆ ಮಾಲ್ ಕಟ್ಟಿದ್ದು ನಾನಲ್ಲ, ಶೋಭಾ ಡೆವಲಪರ್ಸ್ ಕಟ್ಟಿದೆ. ಅವರು ಏನೇನ್ ಬಿಲ್ಲು ಕಟ್ಟಿದ್ದಾರೆ, ತೋರಿಸುತ್ತಾರೆ. ತೋರಿಸಿ ಅಂತ ನಾನೇ ಅವರಿಗೆ ಹೇಳ್ತೇನೆ ಎಂದು ಶಿವಕುಮಾರ್‌ ತಿಳಿಸಿದರು.

ಜನರೇ ಅವರಿಗೆ ಉತ್ತರ ಕೊಟ್ಟಿದ್ದಾರೆ. ಅವರ ಮಾತು, ಆಚಾರ, ವಿಚಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಇನ್ನೂ ಏನಾದರೂ ಬೇಕಿದ್ದರೆ ನಾನು ಉತ್ತರ ಕೊಡುತ್ತೇನೆ. ಕುಮಾರಸ್ವಾಮಿ ಏನೇನು ಪಟ್ಟಿ ಕೊಡ್ತಾರೆ, ಅದಕ್ಕೆ ಲೆಕ್ಕ ಕೊಡೋಣ. ನಾನು ತಪ್ಪು ಮಾಡಿದ್ದರೆ ಬೇಕಾದರೆ ಗಲ್ಲಿಗೆ ಹಾಕಲಿ’ ಎಂದು ಹೇಳಿದರು.