ಕಾಂಗ್ರೆಸ್‌ನ 32 ಶಾಸಕರು ಬಿಜೆಪಿಗೆ ಬರ್ತಾರೆ: ಹೊಸ ಬಾಂಬ್ ಸಿಡಿಸಿದ ಡಿಸಿಎಂ
32 ಬಿಜೆಪಿ ಶಾಸಕರು ಶೀಘ್ರ ರಾಜೀನಾಮೆ ನೀಡಲಿದ್ದಾರೆ ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಹೇಳಿಕೆಗೆ ಡಿಸಿಎಂ ಅಶ್ವಥ್ ನಾರಾಯಣ ಲೇವಡಿ ಮಾಡಿದ್ದಾರೆ.
ಕಲಬುರಗಿ, (ಫೆ.24): ಕಾಂಗ್ರೆಸ್‌ನ 32 ಶಾಸಕರು ಬಿಜೆಪಿಗೆ ಬರ್ತಾರೆ ಎನ್ನುವುದನ್ನ ಸಿಎಂ ಇಬ್ರಾಹಿಂ ಹೇಳಿರಬೇಕು ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ವ್ಯಂಗ್ಯವಾಡಿದರು.
ಸಿಎಂ ಇಬ್ರಾಹಿಂ ಅವರು ಭಾನುವಾರ ವಿಜಯಪುರದಲ್ಲಿ ಮಾತನಾಡಿ, 32 ಬಿಜೆಪಿ ಶಾಸಕರು ಇನ್ನೊಂದು ವಾರದಲ್ಲಿ ರಾಜೀನಾಮೆ ನೀಡುತ್ತಾರೆ ಎಂದು ಬಾಂಬ್ ಸಿಡಿಸಿದ್ದರು.
ಒಂದು ವಾರದಲ್ಲಿ ಬಿಜೆಪಿ ಶಾಸಕರು ರಾಜೀನಾಮೆ: ಹೊಸ ಬಾಂಬ್ ಸಿಡಿಸಿದ ಸಿಎಂ
ಇದಕ್ಕೆ ಕಲಬುರಗಿಯಲ್ಲಿ ಇಂದು (ಸೋಮವಾರ)ನಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವಥ್ ನಾರಾಯಣ, ನಮ್ಮ ಸರಕಾರ ಸಂಪೂರ್ಣ ಸುಭದ್ರವಾಗಿದೆ. ಮೂರು ವರ್ಷ, ಮೂರು ತಿಂಗಳು ಕಾಲ ಆಡಳಿತ ಪೂರ್ಣಗೊಳಿಸುತ್ತೇವೆ. ಮತ್ತೆ 2023 ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಬಿಜೆಪಿ ಸರಕಾರ ಅವಧಿ ಪೂರೈಸುತ್ತೆ ಅಂತಿದಾರೆ. ವಿರೋಧ ಪಕ್ಷಗಳೇ ಬೆಂಬಲ ನೀಡಿದ್ದರಿಂದ ಸಮಸ್ಯೆ ಎಲ್ಲಿಂದ ಎಂದರು.
ಇನ್ನು ಸಿಎಂ ವಿರುದ್ದ ಅನಾಮಧೇಯ ಪತ್ರ ವಿಚಾರಕ್ಕೆ ಡಿಸಿಎಂ ಪ್ರತಿಕ್ರಿಯಿಸಿ, ಅದು ಯಾರೋ ಅನಾಮಧೆಯರು ಬರೆದ ಪತ್ರ.. ಅದಕ್ಕೆ ಮಹತ್ವ ಕೊಡಬೇಕಾಗಿಲ್ಲ. ಯಡಿಯೂರಪ್ಪ ಸಿಎಂ ಆಗಿ ಅವಧಿ ಪೂರ್ಣಗೊಳಿಸುವುದು ಖಚಿತ ಎಂದು ಕಡ್ಡಿಮುರಿದಂತೆ ಹೇಳಿದರು.