ಚಿಕ್ಕಮಗಳೂರು: ಗ್ರಾಮ ಪಂಚಾಯತ್‌ಗೆ ಮಗಳು ಅಧ್ಯಕ್ಷೆ, ತಾಯಿ ಉಪಾಧ್ಯಕ್ಷೆ..!
ಕಾಫಿನಾಡು ಚಿಕ್ಕಮಗಳೂರು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಯಾಕಂದ್ರೆ, ಒಂದೇ ಮನೆಯಲ್ಲಿ ಶಾಸಕರಾಗಿದ್ದಾರೆ. ಸಚಿವರಾಗಿದ್ದಾರೆ. ಮಂತ್ರಿಗಳಾಗಿದ್ದಾರೆ. ಆದ್ರೆ, ಹಳ್ಳಿಯ ಜಾತಿ ರಾಜಕೀಯದಲ್ಲಿ ಸದಸ್ಯರಾಗೋದೆ ಕಷ್ಟ ಸಾಧ್ಯ. ಹೀಗಿರುವಾಗ ಆಧುನಿಕ ರಾಜಕೀಯ ಕುರುಕ್ಷೇತ್ರದಲ್ಲಿ ಒಂದೇ ಮನೆಯ ತಾಯಿ-ಮಗಳು ಇಬ್ಬರು ಅಧ್ಯಕ್ಷರು-ಉಪಾಧ್ಯಕ್ಷರಾಗಿರೋದು ನಿಜಕ್ಕೂ ಸಾಧನೆಯೇ ಸರಿ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಆ.08): ದಿಲ್ಲಿ ರಾಜಕೀಯಕ್ಕಿಂತ ಹಳ್ಳಿ ರಾಜಕೀಯ ಕಷ್ಟ. ಪಕ್ಷದ ಬ್ಯಾನರ್ ಅಡಿ ಎಂಪಿ-ಎಂಎಲ್‍ಎ ಬೇಕಾದ್ರು ಆಗ್ಬೋದು. ಆದ್ರೆ, ಹಳ್ಳಿ ರಾಜಕೀಯದಲ್ಲಿ ಸದಸ್ಯ ಆಗೋದು ಕಷ್ಟ. ಅದ್ರಲ್ಲೂ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷರಾಗೋದು ಇನ್ನೂ ಕಷ್ಟ. ಹೀಗಿರುವಾಗ ಅಮ್ಮ-ಮಗಳು ಒಂದೇ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ-ಉಪಾಧ್ಯಕ್ಷೆಯಾದ್ರೆ ಹೇಗಿರುತ್ತೆ ಅಲ್ವಾ. ಅಂತಹ ಒಂದು ಅಪರೂಪದ ಸನ್ನಿವೇಶಕ್ಕೆ ಚಿಕ್ಕಮಗಳೂರು ಸಾಕ್ಷಿಯಾಗಿದೆ.
ಮಗಳು ಅಧ್ಯಕ್ಷೆ, ತಾಯಿ ಉಪಾಧ್ಯಕ್ಷೆ
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗರ್ಜೆ ಗ್ರಾಮ ಅಪರೂಪದ ಘಟನೆಗೆ ಸಾಕ್ಷಿ ಆಗಿದೆ. ಇದೇ ಗ್ರಾಮ ವಾಸಿಗಳಾದ 21 ವರ್ಷದ ಸ್ನೇಹ, ಈಕೆ ತಾಯಿ ನೇತ್ರಾವತಿ ಗರ್ಜೆ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಉಪ್ಯಾಧ್ಯಕೆಯಾಗಿ ಆಯ್ಕೆ ಆಗಿದ್ದಾರೆ.ಗರ್ಜೆ ಗ್ರಾಮ ಪಂಚಾಯಿತಿಗೆ ಸ್ನೇಹ ಅಧ್ಯಕ್ಷೆ. ಆಕೆ ತಾಯಿ ನೇತ್ರಾವತಿ ಉಪಾಧ್ಯಕ್ಷೆ. ಗರ್ಜೆ-ಜಿ.ಮಾದಾಪುರ ಎರಡು ಗ್ರಾಮ ಸೇರಿ ಒಂದು ಪಂಚಾಯಿತಿ. ಒಟ್ಟು ಏಳು ಜನ ಸದಸ್ಯರು. ಕಳೆದ ಅವಧಿಗೆ ಬೇರೆಯವರು ಅಧ್ಯಕ್ಷರು-ಉಪಾಧ್ಯಕ್ಷರಾಗಿದ್ದರು. ಈ ಬಾರಿ ಅಧ್ಯಕ್ಷೆ ಸ್ಥಾನ ಜನರಲ್ ಲೇಡಿಗೆ ಬಂದಿತ್ತು. ಉಪಾಧ್ಯಕ್ಷೆ ಸ್ಥಾನ ಬಿಸಿಎಂ ಲೇಡಿಗೆ ಬಂದಿತ್ತು. ಏಳು ಜನ ಸದಸ್ಯರಲ್ಲಿ ಕೆಲ ವಿರೋಧ ಇದ್ದೇ ಇರುತ್ತೆ. ಇಲ್ಲು ಇತ್ತು. ಏರಲ್ಲಿ 3 ಜನರ ಗುಂಪು ಒಂದು. 4 ಜನರ ಗುಂಪು ಮತ್ತೊಂದು. ಆ ವಿರೋಧದ ಮಧ್ಯೆಯೂ ತಾಯಿ-ಮಗಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ. ತಾಯಿ-ಮಗಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಸಿಕ್ಕಿರೋದ್ರಿಂದ ತಾಯಿ-ಮಗಳು ಇಬ್ಬರು ಖುಷಿಯಾಗಿದ್ದಾರೆ. ನಾವು ಗೆಲ್ತೀವಿ ಅನ್ನೋದೆ ಕನಸಾಗಿತ್ತು. ಅದೃಷ್ಠದಿಂದ ಗೆದ್ವಿ. ಆದ್ರೆ, ಅಧ್ಯಕ್ಷರು-ಉಪಾಧ್ಯಕ್ಷರು ಆಗ್ತೀವಿ ಅಂತ ಕನಸಲ್ಲೂ ಕಂಡಿರಲಿಲ್ಲ. ಈಗ ಆಗಿದ್ದೇವೆ. ಜನ ನಂಬಿಕೆ ಉಳಿಸಿಕೊಂಡು ಒಳ್ಳೆ ಕೆಲಸ ಮಾಡ್ಬೇಕು ಅಂತಾರೆ ಉಪಾಧ್ಯಕ್ಷೆ ನೇತ್ರಾವತಿ.
ಚಿಕ್ಕಮಗಳೂರು: ಕಾರ್ಯಾಚರಣೆ ವೇಳೆ ಅಟ್ಟಿಸಿಕೊಂಡು ಬಂದ ಕಾಡಾನೆ, ಕೂದಲೆಳೆ ಅಂತರದಲ್ಲಿ ಅರಣ್ಯ ಸಿಬ್ಬಂದಿ ಪಾರು
ಒಳ್ಳೆ ಕೆಲಸ ಮಾಡಬೇಕೆಂದು ಕನಸು
45ರ ಅಮ್ಮ ನೇತ್ರಾವತಿ ಉಪಾಧ್ಯಕ್ಷೆಯಾಗಿದ್ದು ದೊಡ್ಡ ವಿಚಾರವಿಲ್ಲ. ಆದ್ರೆ, 21ರ ಮಗಳು ಅಧ್ಯಕ್ಷೆಯಾಗಿದ್ದೇ ರಣರೋಚಕ. ಪದವಿ ಓದಿರೋ ಆಕೆ ಎಲೆಕ್ಷನ್ ನಿಲ್ಲೋಕೆ ಮನಸ್ಸಿರಲಿಲ್ಲ. ಜಿ.ಮಾದಾಪುರ ಹಾಗೂ ಗರ್ಜೆ ಎರಡೂ ಗ್ರಾಮದಲ್ಲೂ ನೇತ್ರಾವತಿಯನ್ನ ನಿಲ್ಲಿಸೋಕೆ ಬಂಬೆಲಿಗರು ತೀರ್ಮಾನಿಸಿದ್ದರು. ಎರಡೂ ಕಡೆ ಗೆದ್ರೆ ಮತ್ತೆ ಉಪಚುನಾವಣೆ ನಡೆಯುತ್ತೆ ಎಂದು ನಾಮಪತ್ರ ಸಲ್ಲಿಕೆಯ ಕಡೇ ದಿನದ ಕೊನೆ ಐದು ನಿಮಿಷದಲ್ಲಿ ಆಮೇಲೆ ನೋಡೋಣ ಎಂದು ಸ್ನೇಹ ತಂದೆ ಸ್ನೇಹಿತರು ಸ್ನೇಹಾಳ ಹೆಸರು ಸೇರಿಸಿ ನಾಮಪತ್ರ ಸಲ್ಲಿಸಿದ್ದರು. ಅಮ್ಮ-ಮಗಳು ಇಬ್ಬರು ಗೆದ್ದೇಬಿಟ್ರು. ಗೆದ್ದಿದ್ದೇ ಪುಣ್ಯ ಎಂದುಕೊಂಡಿದ್ದ ಅಮ್ಮ-ಮಗಳು ಇಂದು ಅಧ್ಯಕ್ಷೆ-ಉಪಾಧ್ಯಕ್ಷೆಯಾಗಿರೋದ್ನ ನೆನೆದು ಇಬ್ಬರೂ ತೀವ್ರ ಆಶ್ಚರ್ಯ ವ್ಯಕ್ತಪಡಿಸಿದ್ದು, ಊರಿನ ಜನ ಹಾಗೂ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ, ಒಳ್ಳೆ ಕೆಲಸ ಮಾಡಬೇಕೆಂದು ಕನಸ ಕಟ್ಟಿದ್ದಾರೆ ಅಧ್ಯಕ್ಷೆ ಸ್ನೇಹ.
ಒಟ್ಟಾರೆ, ಕಾಫಿನಾಡು ಚಿಕ್ಕಮಗಳೂರು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಯಾಕಂದ್ರೆ, ಒಂದೇ ಮನೆಯಲ್ಲಿ ಶಾಸಕರಾಗಿದ್ದಾರೆ. ಸಚಿವರಾಗಿದ್ದಾರೆ. ಮಂತ್ರಿಗಳಾಗಿದ್ದಾರೆ. ಆದ್ರೆ, ಹಳ್ಳಿಯ ಜಾತಿ ರಾಜಕೀಯದಲ್ಲಿ ಸದಸ್ಯರಾಗೋದೆ ಕಷ್ಟ ಸಾಧ್ಯ. ಹೀಗಿರುವಾಗ ಆಧುನಿಕ ರಾಜಕೀಯ ಕುರುಕ್ಷೇತ್ರದಲ್ಲಿ ಒಂದೇ ಮನೆಯ ತಾಯಿ-ಮಗಳು ಇಬ್ಬರು ಅಧ್ಯಕ್ಷರು-ಉಪಾಧ್ಯಕ್ಷರಾಗಿರೋದು ನಿಜಕ್ಕೂ ಸಾಧನೆಯೇ ಸರಿ.