ಕರಾವಳಿ ಟಿಕೆಟ್ ಹಂಚಿಕೆ: ಮಾಜಿ ಜಿಲ್ಲಾಧಿಕಾರಿ ಅಭಿಪ್ರಾಯ ಪಡೀತಿದ್ಯಾ ಕಾಂಗ್ರೆಸ್ ಹೈಕಮಾಂಡ್?

ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಲೆಕ್ಕಾಚಾರದಲ್ಲಿ ತೊಡಗಿದೆ. ಯಾರಿಗೆ ಟಿಕೆಟ್ ನೀಡಿದರೆ ಗೆಲುವು ಪಕ್ಕಾ ಎಂಬ ವಿಚಾರದಲ್ಲಿ ಮಾಜಿ ಜಿಲ್ಲಾಧಿಕಾರಿ ಅಭಿಪ್ರಾಯ ಪಡೆಯುತ್ತಿದೆ ಕಾಂಗ್ರೆಸ್? 

Daskshina kannada assembly ticket issue former District Collector Opinion collective by Congress High Command rav

ದಕ್ಷಿಣ ಕನ್ನಡ (ಏ.3) ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಲೆಕ್ಕಾಚಾರದಲ್ಲಿ ತೊಡಗಿದೆ. ಯಾರಿಗೆ ಟಿಕೆಟ್ ನೀಡಿದರೆ ಗೆಲುವು ಪಕ್ಕಾ ಎಂಬ ವಿಚಾರದಲ್ಲಿ ಮಾಜಿ ಜಿಲ್ಲಾಧಿಕಾರಿ ಅಭಿಪ್ರಾಯ ಪಡೆಯುತ್ತಿದೆ ಕಾಂಗ್ರೆಸ್? 

ಹೌದೆನ್ನುತ್ತವೆ ಮೂಲಗಳು. ಕರಾವಳಿ ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ದಕ್ಷಿಣಕನ್ನಡ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್  ಅವರ ಅಭಿಪ್ರಾಯ ಪಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ಗೆ ಸಸಿಕಾಂತ್ ಸೆಂಥಿಲ್ ಸೇರ್ಪಡೆ: ಮುಂದಿನ ಎಲೆಕ್ಷನ್‌ನಲ್ಲಿ ಸ್ಪರ್ಧೆ?

ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್(Sasikanth Senthil), ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul gandhi) ಜೊತೆ ನಿಕಟ ಸಂಪರ್ಕದಲ್ಲಿದ್ದಾರೆ. ಕರಾವಳಿ ‌ಮತ್ತು ಕರ್ನಾಟಕದ ಕೆಲ ಜಿಲ್ಲೆಗಳ ಟಿಕೆಟ್ ಹಂಚಿಕೆ ಬಗ್ಗೆ ಸೆಂಥಿಲ್ ಚರ್ಚೆ ನಡೆಸಿದ್ದಾರೆನ್ನಲಾಗಿದೆ. ಇದಕ್ಕೆ ಇಂಬು ಕೊಡುವಂತೆ ಭಾರತ್ ಜೋಡೋ ಯಾತ್ರೆ(Bharat jodo yatre) ವೇಳೆ ಸಂಯೋಜಕರಾಗಿದ್ದ ಸೆಂಥಿಲ್. ರಾಹುಲ್ ಗಾಂಧಿ ಜೊತೆ ಬಲವಾದ ನಂಟು ಹೊಂದಿರುವ ಮಾಜಿ ಜಿಲ್ಲಾಧಿಕಾರಿ.

ತಮಿಳುನಾಡು ‌ಮೂಲದ ಅಧಿಕಾರಿಯಾಗಿದ್ದ ಸೆಂಥಿಲ್, ರಾಯಚೂರು ಮತ್ತು‌ ದ.ಕ ಜಿಲ್ಲೆ(Raichur and dakshina kannada)ಯಲ್ಲಿ ಜಿಲ್ಲಾಧಿಕಾರಿ ಆಗಿ ಸೇವೆ ಸಲ್ಲಿಸಿದ್ದರು. ಹೀಗಾಗಿ ಆ ಕ್ಷೇತ್ರಗಳ ಬಗ್ಗೆ ಅಪಾರ ಮಾಹಿತಿ ಅನುಭವ ಹೊಂದಿದ್ದರು. ಇತ್ತೀಚೆಗೆ ಕೇಂದ್ರ ಸರ್ಕಾರದ ವಿರುದ್ದ ಅಸಮಾಧಾನಗೊಂಡು ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದಿರುವ ಜಿಲ್ಲಾಧಿಕಾರಿ. ಬಳಿಕ ಅಲ್ಲಿಂದೀಚೆಗೆ ಕೇಂದ್ರ ವಿರುದ್ಧ ಹೇಳಿಕೆ ನೀಡುತ್ತಲೆ ಬಂದಿರುವ ಸೆಂಥಿಲ್ ಜೊತೆಗೆ ರಾಹುಲ್ ಗಾಂಧಿಗೆ ಆಪ್ತರಾಗಿದ್ದರು. ಭಾರತ್ ಜೋಡೋ ಯಾತ್ರೆ ವೇಳೆ ಸಂಯೋಜಕರಾಗಿ ಕೆಲಸ ಮಾಡಿದ್ದರು.

 

ದಕ್ಷಿಣ ಕನ್ನಡ ಡಿಸಿಯಾಗಿದ್ದ ಸೇಂಥಿಲ್‌ ಇಂದು ಕಾಂಗ್ರೆಸ್‌ಗೆ!

ಸದ್ಯ ಸೆಂಥಿಲ್ ಮೂಲಕ ರಾಜ್ಯ ರಾಜಕಾರಣ ‌ಮತ್ತು ದೈನಂದಿನ ಬೆಳವಣಿಗೆಗಳ ವರದಿ ಪಡೆಯುತ್ತಿರುವ ಹೈಕಮಾಂಡ್. ಕರಾವಳಿ ಜಿಲ್ಲೆಗಳ ಬಗ್ಗೆ ಸೆಂಥಿಲ್‌ಗೆ ಅನುಭವ ಇರುವ ಕಾರಣ ಅವರ ಅಭಿಪ್ರಾಯ ಸಂಗ್ರಹಿಸುತ್ತಿರುವ ಹೈಕಮಾಂಡ್. ಕರಾವಳಿ ಟಿಕೆಟ್ ಆಕಾಂಕ್ಷಿಗಳ ಬಗ್ಗೆ ವರದಿ ಸಂಗ್ರಹಿಸಿ ಗೆಲ್ಲುವ ಕುದುರೆಗೆ ಟಿಕೆಟ್ ಕೊಡುವ ಲೆಕ್ಕಾಚಾರ ಹಾಕಿರುವ ಕಾಂಗ್ರೆಸ್ ಹೈಕಮಾಂಡ್.

Latest Videos
Follow Us:
Download App:
  • android
  • ios