ನನ್ನ ಮೇಲೆ 2017ರಲ್ಲಿ ಮೈಸೂರಿನ ನಂಜನಗೂಡಿನಲ್ಲಿ ಒಂದು ಕ್ರಿಮಿನಲ್ ಕೇಸು ದಾಖಲಾಗಿತ್ತು. ತಾವು ಅವಿವಾಹಿತ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟ

ಮಂಗಳೂರು(ಮಾ.29): ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು 27.31 ಲಕ್ಷ ಮೌಲ್ಯದ ಸ್ಥಿರಾಸ್ತಿ ಹಾಗೂ 43.50 ಲಕ್ಷ ಮೌಲ್ಯದ ಚರಾಸ್ತಿ ಸೇರಿ ಒಟ್ಟು 71 ಲಕ್ಷ ರೂ. ಮೌಲ್ಯದ ಹೊಂದಿದ್ದಾರೆ. 6.52 ಲಕ್ಷ ರೂ. ವಾರ್ಷಿಕ ಆದಾಯ ಹೊಂದಿದ್ದಾರೆ. 

ಕೆನರಾ ಬ್ಯಾಂಕ್‌ನಲ್ಲಿ 9.62 ಲಕ್ಷ ರೂ. ಸಾಲವಿದೆ. ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು 2 ಲಕ್ಷ ರು. ಠೇವಣಿ ಹೊಂದಿದ್ದಾರೆ. ಒಲಿವ‌ರ್ ಸ್ಟೀಲ್ ಸೊಲ್ಯೂಷನ್ಸ್‌ನಲ್ಲಿ 7.20 ಲಕ್ಷ ಹೂಡಿಕೆ ಮಾಡಿದ್ದಾರೆ. ಟೊಯಟಾ ಇನ್ನೋವಾ ವಾಹನ ಹೊಂದಿದ್ದಾರೆ. ಉಳ್ಳಾಲ ತಾಲೂಕಿನ ತಲಪಾಡಿಯಲ್ಲಿ ಐದು ಕಡೆಗಳಲ್ಲಿ ಒಟ್ಟು 152 ಸೆಂಟ್ಸ್ ಕೃಷಿ ಭೂಮಿ ಹೊಂದಿದ್ದು, ಇದರ ಮಾರುಕಟ್ಟೆ ಮೌಲ್ಯ 43.50 ಲಕ್ಷ ಇದೆ.

ನಾಮಪತ್ರ ಸಲ್ಲಿಕೆ ಮಾಡಿದ ಡಿಕೆ ಸುರೇಶ್‌, ಕಳೆದ ಐದು ವರ್ಷದಲ್ಲಿ ಡಿಕೆ ಸುರೇಶ್‌ ಆಸ್ತಿ ಶೇ. 75ರಷ್ಟು ಏರಿಕೆ!

ಇವರ ಮೇಲೆ 2017ರಲ್ಲಿ ಮೈಸೂರಿನ ನಂಜನಗೂಡಿನಲ್ಲಿ ಒಂದು ಕ್ರಿಮಿನಲ್ ಕೇಸು ದಾಖಲಾಗಿತ್ತು. ತಾವು ಅವಿವಾಹಿತ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.