Asianet Suvarna News Asianet Suvarna News

ಸಾಲ ತೀರಿಸಲು ಆಗಲ್ಲವೆಂದು ಬಂದು- ಗೋಲ್ಡನ್ ಹ್ಯಾಂಡ್ ಅಂತ ಹೇಳಿದ್ಯಲ್ಲಾ: ಕುಮಾರಸ್ವಾಮಿ ಟೀಕೆ

ನನ್ನ ಬಳಿ ಆವಾಗ ಬಂದಿದ್ಯಲ್ಲಾ. ಸಾಲ ತೀರಿಸಲು ಅಗಲ್ಲ ಅಂತ ಬಂದಿದ್ಯಲ್ಲಾ. ಸಹಾಯ ಮಾಡಿದ ನಂತರ ನೀವು ಬಂದಿದ್ರಲ್ಲಾ. ಅಣ್ಣ ನಿನ್ನದು ಕೈಯಲ್ಲ - ಗೋಲ್ಡನ್ ಹ್ಯಾಂಡ ಅಂತ ಹೇಳಿದ್ಯಲ್ಲಾ. ಈಗ ಜೆಡಿಎಸ್‌ ಬಗ್ಗೆ ಮಾತಾನಾಡ್ತೀರಾ.?

CT Ravi said Can not pay the debt your hand is golden hand Kumaraswamy Criticism sat
Author
First Published Feb 16, 2023, 2:40 PM IST | Last Updated Feb 16, 2023, 2:40 PM IST

ಬೆಂಗಳೂರು (ಫೆ.16): ಜೆಡಿಎಸ್‌ ಪಕ್ಷವನ್ನು ವಿಕಲಚೇತನರ ಪಕ್ಷವೆಂದು ಹೇಳಿಕೆ ನೀಡಿರುವ ಸಿ.ಟಿ. ರವಿ, ನನ್ನ ಬಳಿ ಆವಾಗ ಬಂದಿದ್ಯಲ್ಲಾ. ಸಾಲ ತೀರಿಸಲು ಅಗಲ್ಲ ಅಂತ ಬಂದಿದ್ಯಲ್ಲಾ. ಸಹಾಯ ಮಾಡಿದ ನಂತರ ನೀವು ಬಂದಿದ್ರಲ್ಲಾ. ಅಣ್ಣ ನಿನ್ನದು ಕೈಯಲ್ಲ - ಗೋಲ್ಡನ್ ಹ್ಯಾಂಡ ಅಂತ ಹೇಳಿದ್ಯಲ್ಲಾ. ಈಗ ವಿಕಲಚೇತನರ ಬಗ್ಗೆ ಬಹಳ ಮಾತಾಡ್ತೀರಾ? ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. 

ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುವ ವೇಳೆ ಮಾತನಾಡಿದ ಕುಮಾರಸ್ವಾಮಿ ಅವರು, ಜೆಡಿಎಸ್ ವಿಕಲಚೇತನ ಪಕ್ಷ ಅನ್ನೋ ರೀತಿ ಸಿ.ಟಿ.ರವಿ ಕೊಟ್ಟಿದ್ದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಅವಕಾಶವಾದಿ ರಾಜಕಾರಣಿಗಳೂ ಅಂತ ಹೇಳಿದ್ದಾರೆ. ರಾಜಕಾರಣದಲ್ಲಿ ವಿಕಲಾಂಗ ವ್ಯವಸ್ಥೆ ಇರಬಾರದು ಅಂದಿದ್ದೀರಿ. ಏನ್ ನೀವು ಸಿದ್ಧಾಂತದ ಮೇಲೆ ಬಂದವರು. ಈ ರಾಜ್ಯದಲ್ಲಿ ವಿಕಲಚೇತರಿಗೆ ಶಕ್ತಿ ತುಂಬಿದವರು ಈ ಕುಮಾರಸ್ವಾಮಿ. ನಮ್ಮ ಸರ್ಕಾರದ ಅವಧಿಯಲ್ಲಿ ವಿಕಲಚೇತನರಿಗೆ ಇಂಧನ ಇಲಾಖೆಯಲ್ಲಿ ನೌಕರಿ ಕೊಟ್ಟಿದ್ದೆ. ವಿಕಲಚೇತನರಿಗೆ ಶಕ್ತಿ ತುಂಬಿದರೆ ಅವರು ಸಹ ಬದುಕಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್‌ನವರು ಕಾಲು ಮುರಿದ ಕುದುರೆ ಕೊಟ್ಟರೆ ಓಡುವುದೇ?- ನಿಖಿಲ್

ಹೌದು ನಾವು ರಾಜಕಾರಣದಲ್ಲಿ ವಿಕಲಚೇತನರೇ. ಈ ವಿಕಲಚೇತನರ ಪಕ್ಷದ ಬಗ್ಗೆ ಮಾತಾಡ್ತಿರಾ. ನನ್ನ ಬಳಿ ಆವಾಗ ಬಂದಿದ್ಯಲ್ಲಾ. ಸಾಲ ತೀರಿಸಲು ಅಗಲ್ಲ ಅಂತ ಬಂದಿದ್ಯಲ್ಲಾ. ಸಹಾಯ ಮಾಡಿದ ನಂತರ ನೀವು ಬಂದಿದ್ರಲ್ಲಾ. ಅಣ್ಣ ನಿನ್ನದು ಕೈಯಲ್ಲ - ಗೋಲ್ಡನ್ ಹ್ಯಾಂಡ ಅಂತ ಹೇಳಿದ್ಯಲ್ಲಾ. ಈಗ ವಿಕಲ ಚೇತನರ ಬಗ್ಗೆ ಬಹಳ ಮಾತಾಡ್ತೀರಾ...? ಎಂದು ಕೇಳುವ ಮೂಲಕ ಸಿ.ಟಿ.ರವಿ ವಿರುದ್ಧ ಆಕ್ರೋಶ ಹೊರ ಹಾಕಿದರು.

ತೊಗರಿ ಬೆಳೆ ಹಾನಿಗೆ ಪರಿಹಾರ ಸಿಕ್ಕಿಲ್ಲ: ಈ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಮಕ್ಕಳಿಗೆ ಬಸ್ ವ್ಯವಸ್ಥೆ ಇಲ್ಲ. ರಾಯಚೂರಿನಲ್ಲಿ 6 ಕಿ.ಮೀ ಮಕ್ಕಳು ನಡೆಯುವ ಸ್ಥಿತಿ ನಿರ್ಮಾಣವಾಗಿದೆ. ಕರೋನಾ ಬಂದಾಗ ಎಲ್ಲಾ ಸರಿ ಮಾಡಿದ್ವಿ ಅಂತ ಭಾಷಣ ಮಾಡಿದ್ದಾರೆ. ಆದರೆ ಒಂದು ವ್ಯವಸ್ಥೆ ಇಲ್ಲ ಮಕ್ಕಳಿಗೆ. ಕೊರಟಗೆರೆಯಲ್ಲಿ ಗೊಲ್ಲ ಸಮೂದಾಯದ ಮಕ್ಕಳಿಗೆ ಬಸ್ ಇಲ್ಲದ ಬಗ್ಗೆ ಗೊತ್ತಾಯಿತು. ಅದಕ್ಕೆ ನಾನೇ ಒಂದು ವಾಹನ ವ್ಯವಸ್ಥೆ ಮಾಡಿದೆ. ತೊಗರಿಬೆಳೆಗಾರರಿಗೆ ನೆಟ್ಟಿ ರೋಗದಿಂದ ಸಂಕಷ್ಟವಾಗಿದೆ. ಅವರಿಗೆ ಪರಿಹಾರ ಕೊಡಲು ಯಾವುದೇ ಸಚಿವರು ಇನ್ನೂ ಭರವಸೆ ಕೊಟ್ಟಿಲ್ಲ. ತೊಗರಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಳೆ ವಿಮೆ ಇನ್ನೂ ರೈತರಿಗೆ ಬಂದಿಲ್ಲ. ಹತ್ತಿ., ತೊಗರಿ, ಕಬ್ಬು, ಸೇರಿದಂತೆ ಎಲ್ಲಾ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಎಂದು ಕಿಡಿಕಾರಿದರು.

ತಾಜ್‌ ವೆಸ್ಟ್‌ ಎಂಡ್‌ಗೆ ಹೋಗಿದ್ದ: ಕಾಂಗ್ರೆಸ್‌ ಮತ್ತು ಬಿಜೆಪಿಯವರು ಆಡಳಿತ ಮಾಡದೇ ಕುಮಾರಸ್ವಾಮಿ ವೆಸ್ಟ್ ಎಂಡ್ ನಲ್ಲಿ ಇದ್ದ ಎಂದು ಟೀಕೆ ಮಾಡಿದ್ದಾರೆ. ನಾನು ವೆಸ್ಟ್‌ಎಂಡ್ ಗೆ ನಾನು ಆಟ ಆಡಲು ಹೋಗಿದ್ದೇನಾ? 19 ಗಂಟೆ ಕೆಲಸ ಮಾಡಿದ್ದೇನೆ.. ಬಡವರಿಗೆ ನೆರವಾಗಿದ್ದೇನೆ. ಬಂಗ್ಲೆ ಕೊಟ್ಟಿದ್ದರಾ ನನಗೆ.? ಏನ್ ವೆಸ್ಟ್ ಎಂಡ್ ಗೆ ಹೋಗಿದ್ದಾ. ಹೋಗಿದ್ದಾ ಅಂದ್ರು.? ನಮ್ಮ ರಾಜ್ಯದಲ್ಲಿ ಪ್ರಗತಿಯ ಜೊತೆಗೆ ಬಡತನವೂ ಜಾಸ್ತಿಯಾಗಿದೆ. ನಗರದ ಸ್ಲಂ ಮತ್ತು ಹಳ್ಳಿಗಳಿಗೆ ಹೋಗಿ ನೋಡಿ ಎಂದರು. 

ಚಿಕ್ಕಮಗಳೂರು: ಶ್ರೀಮಠ ಸಂಸ್ಕಾರ ಕೊಡುವ ಶ್ರೇಷ್ಠ ಕೇಂದ್ರ: ಸಿ.ಟಿ.ರವಿ

ಸಾಲ ಮನ್ನಾದ ಲಾಭ ರೈತರಿಗೆ ಆಗ್ತಿಲ್ಲ: ಸಾಲ ಮನ್ನಾದ ಲಾಭ ರೈತರಿಗೆ ಆಗ್ತಿಲ್ಲ. ಹುಬ್ಬಳ್ಳೀಯಲ್ಲಿ ಎರಡು ಬ್ಯಾಂಕ್ ಗಳು ರೈತರಿಗೆ ಸಾಲಮನ್ನಾ ಲಾಭ ಕೊಡ್ತಿಲ್ಲ. ಅಂತಹ ಬ್ಯಾಂಕ್ ಗಳ ಮೇಲೆ ಕ್ರಮ ಆಗಬೇಕಿತ್ತು. ಇನ್ನೂ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಹಿಂದಿನ ಸರ್ಕಾರದ ಸಾಲಮನ್ನಾ ಯೋಜನೆಯನ್ನು ಈ ಸರ್ಕಾರ ಮುಂದುವರಿಸುತ್ತಿಲ್ಲ. ಸಾಲ ಮನ್ನಾ ಯೋಜನೆಯನ್ನು ಸರ್ಕಾರ ಲಘುವಾಗಿ ಪರಿಗಣಿಸಿದೆ. ರೈತರಿಗೆ ಸಾಲಮನ್ನಾ ಲಾಭ ಸಿಗಬೇಕಲ್ಲವೇ..? 1,890 ಕೋಟಿ ರೂ ಸಾಲಮನ್ನಾದ ಲಾಭ ರೈತನಿಗೆ ಇನ್ನೂ ಕೊಟ್ಟಿಲ್ಲ ಎಂದು ಹೇಳಿದರು.

Latest Videos
Follow Us:
Download App:
  • android
  • ios