ಬಿಜೆಪಿ ರಿಪೇರಿ ಆಗೋದಿಲ್ಲ ಎಂಬ ಶೆಟ್ಟರ್ ಹೇಳಿಕೆ: ಸಿ.ಟಿ. ರವಿ ಕೊಟ್ಟ ತಿರುಗೇಟು ಹೇಗಿದೆ ನೋಡಿ!
ಹೊಸದಾಗಿ ಮತಾಂತರವಾಗಿರುವ ಕೆಲವರು ನಾವು ಕಟ್ಟರ್ ಎಂದು ತೋರಿಸಿಕೊಳ್ಳಲು ಮಾಡುವ ರೀತಿಯಲ್ಲೇ ಇವರೂ ಮಾಡುತ್ತಿದ್ದಾರೆ. ಕಾಂಗ್ರೆಸ್ನಿನವರು ನನ್ನನ್ನ ನಂಬುತ್ತಾರೋ, ಇಲ್ಲವೋ ಎಂದು ಜಗದೀಶ್ ಶೆಟ್ಟರ್ ಬಿಜೆಪಿಗೆ ಬೈಯುತ್ತಿದ್ದಾರೆ ಎಂದು ಬಿಜೆಪಿ ರಿಪೇರಿ ಮಾಡೋದಕ್ಕೆ ಆಗೋದಿಲ್ಲ ಎಂಬ ಶೆಟ್ಟರ್ ಹೇಳಿಕೆಗೆ ಸಿಟಿ ರವಿ ತಿರುಗೇಟು ನೀಡಿದರು.
ಚಿಕ್ಕಮಗಳೂರು(ಡಿ.1): 'ಜಗದೀಶ ಶೆಟ್ಟರ್ ಡಿಎನ್‌ಎ ಸಂಘ ಪರಿವಾರದ್ದು, ಕಾಂಗ್ರೆಸ್ಸಿನದ್ದಲ್ಲ. ಅವರ ಚಿಕ್ಕಪ್ಪ ಜನ ಸಂಘದಿಂದ ಗೆದ್ದಿದ್ದರು ಎಂದು ಶೆಟ್ಟರ್ ವಿರುದ್ಧ ಬಿಜೆಪಿ ಮಾಜಿ ಸಚಿವ ಸಿಟಿ ರವಿ ವಾಗ್ದಾಳಿ ನಡೆಸಿದರು.
ಬಿಜೆಪಿ ರಿಪೇರಿ ಮಾಡೋದಕ್ಕೆ ಆಗೋದಿಲ್ಲ ಎಂಬ ಜಗದೀಶ್ ಶೆಟ್ಟರ್ ಹೇಳಿಕೆ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ರಿಪೇರಿ ಮಾಡೋದಕ್ಕೆ ಆಗೋದಿಲ್ಲ ಅನ್ನೋದು ಅವರಿಗೆ ಶೋಭೆ ತರಲ್ಲ. ಬಿಜೆಪಿ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ರೂಪಗೊಂಡಂತಹ ಪಕ್ಷ. ಬಿಜೆಪಿಯ ಪ್ರೊಡಕ್ಷನ್ ಯೂನಿಟ್ ಚೆನ್ನಾಗಿದೆ. ಪ್ರಾಡಕ್ಟ್ ಗಳು ಕೆಲವೊಮ್ಮೆ ಫಸ್ಟ್ ಕ್ವಾಲಿಟಿ, ಸೆಕೆಂಡ್ ಕ್ವಾಲಿಟಿಯಾಗಿ ರೂಪಗೊಳ್ಳುತ್ತವೆ. ಪ್ರೊಡಕ್ಷನ್ ಯುನಿಟ್ ಎಲ್ಲಿವರೆಗೂ ಚೆನ್ನಾಗಿರುತ್ತೋ ಅಲ್ಲಿವರೆಗೂ ಯಾರೂ ಬಿಜೆಪಿಯನ್ನ ಅಲುಗಾಡಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ರಾತ್ರಿ ಮಂಕಿ ಕ್ಯಾಪ್ ಧರಿಸಿ ಬಂದಿದ್ದ ಕಿರಾತಕನಿಂದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮೇಲೆ ಮಾರಣಾಂತಿಕ ಹಲ್ಲೆ!
ಜಗದೀಶ್ ಶೆಟ್ಟರ್ ಗೆ ಬಿಜೆಪಿ ಸೈದ್ದಾಂತಿಕ ನೆಲೆಯಲ್ಲಿ ರೂಪುಗೊಂಡ ಪಕ್ಷವೆಂಬ ಅರಿವಿದೆ. ಆದರೆ ಹೊಸದಾಗಿ ಮತಾಂತರವಾಗಿರುವ ಕೆಲವರು ನಾವು ಕಟ್ಟರ್ ಎಂದು ತೋರಿಸಿಕೊಳ್ಳಲು ಮಾಡುವ ರೀತಿ ಮಾಡುತ್ತಿದ್ದಾರೆ. ಕಾಂಗ್ರೆಸ್ನಿನವರು ನನ್ನನ್ನ ನಂಬುತ್ತಾರೋ, ಇಲ್ಲವೋ ಎಂದು ಜಗದೀಶ್ ಶೆಟ್ಟರ್ ಬಿಜೆಪಿಗೆ ಬೈಯುತ್ತಿದ್ದಾರೆ. ನಮ್ಮ ಜಗದೀಶ್ ಶೆಟ್ಟರ್ ಬಿಜೆಪಿಗೆ ಬೈದರೆ ನನ್ನನ್ನ ಕಾಂಗ್ರೆಸ್ ನವರು ನಂಬುತ್ತಾರೆಂದು ಭಾವಿಸಿದ್ದಾರೆ. ಜಗದೀಶ್ ಶೆಟ್ಟರ್ ಸದ್ಯ ಅತಂತ್ರ ಪರಿಸ್ಥಿತಿಯಲ್ಲಿ ಒದ್ದಾಡುತ್ತಿದ್ದಾರೆ. ನೀವು ಪಾರ್ಟಿ ಚೇಂಜ್ ಮಾಡಿರಬಹುದು ಆದರೆ ನಿಮ್ಮ ಬ್ಲಡ್ ಚೇಂಜ್ ಮಾಡೋಕಾಗುತ್ತಾ? ಅದು ಜನಸಂಘದಿಂದ ಬಂತಹಾ ಬಿಜೆಪಿ ಬ್ಲಡ್ ಎನ್ನುವ ಮೂಲಕ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದರು.
15 ಶಾಲೆಗಳಿಗೆ ಇಮೇಲ್ ಬಾಂಬ್ ಬೆದರಿಕೆ ಪ್ರಕರಣ; ಇದರ ಮೂಲ ಪತ್ತೆ ಹಚ್ಚುವವರೆಗೆ ಬಿಡುವುದಿಲ್ಲ: ಗೃಹ ಸಚಿವ ಪರಮೇಶ್ವರ್