ಕುಮಾರಸ್ವಾಮಿಗೆ ಹಳ್ಳಿಗಳ ಹಸರೇ ಗೊತ್ತಿಲ್ಲ ಅಂದ್ರೆ, ಅವರ ಮಗನಿಗೆ ಏನು ಗೊತ್ತು: ಯೋಗೇಶ್ವ‌ರ್

ನಾನು ಹಳ್ಳಿಗಳಿಗೆ ಹೋಗಿ ಪ್ರಚಾರ ಮಾಡುತ್ತಿದ್ದೇನೆ. ಈ ವೇಳೆ ಎರಡು ಬಾರಿ ಗೆದ್ದರೂ ಒಂದು ಬಾರಿಯೂ ಕುಮಾರಸ್ವಾಮಿ ಗ್ರಾಮಕ್ಕೆ ಬಂದಿಲ್ಲ ಅಂತ ಜನ ಹೇಳ್ತಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸವನ್ನು ಕುಮಾರಸ್ವಾಮಿ ಮಾಡಿಲ್ಲ. ಈಗ ಪುತ್ರನನ್ನ ತಂದು ನಿಲ್ಲಿಸ್ತಿರೋದನ್ನ ಜನ ಒಪ್ಪಲ್ಲ ಎಂದ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವ‌ರ್  
 

CP Yogeshwar Slams Union Minister HD Kumaraswamy grg

ಚನ್ನಪಟ್ಟಣ(ಅ.31):  ಕುಮಾರಸ್ವಾಮಿ ಟ್ರಿಕ್ ಮಾಡಿ ಮಗನ ಗೆಲ್ಲಿಸೋಕೆ ಮುಂದಾಗಿದ್ದಾರೆ. ಎರಡು ಬಾರಿ ಶಾಸಕರಾಗಿದ್ದ ಅವರಿಗೆ ಈ ತಾಲೂಕಿನ ಪರಿಚಯ ಇಲ್ಲ, ಹಳ್ಳಿಗಳ ಹೆಸರು ಗೊತ್ತಿಲ್ಲ. ಕುಮಾರಸ್ವಾಮಿ ಅವರಿಗೆ ಅರಿವಿಲ್ಲ ಅಂದ ಮೇಲೆ ಅವರ ಮಗನಿಗೆ ಏನು ಗೊತ್ತು ಎಂದು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವ‌ರ್ ಪ್ರಶ್ನಿಸಿದರು.

ತಾಲೂಕಿನ ಹೊಂಗನೂರು ಜಿಪಂ ವ್ಯಾಪ್ತಿಯ ಚಂದ್ರಗಿರಿದೊಡ್ಡಿಯಲ್ಲಿ ಎರಡನೇ ದಿನದ ಪ್ರಚಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಳ್ಳಿಗಳಿಗೆ ಹೋಗಿ ಪ್ರಚಾರ ಮಾಡುತ್ತಿದ್ದೇನೆ. ಈ ವೇಳೆ ಎರಡು ಬಾರಿ ಗೆದ್ದರೂ ಒಂದು ಬಾರಿಯೂ ಕುಮಾರಸ್ವಾಮಿ ಗ್ರಾಮಕ್ಕೆ ಬಂದಿಲ್ಲ ಅಂತ ಜನ ಹೇಳ್ತಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸವನ್ನು ಕುಮಾರಸ್ವಾಮಿ ಮಾಡಿಲ್ಲ. ಈಗ ಪುತ್ರನನ್ನ ತಂದು ನಿಲ್ಲಿಸ್ತಿರೋದನ್ನ ಜನ ಒಪ್ಪಲ್ಲ ಎಂದು ಹೇಳಿದರು. 

ಕಾಂಗ್ರೆಸ್‌ಗೆ ನಿಖಿಲ್‌ ಮಾತ್ರವಲ್ಲ, ನಾನೂ ಟಾರ್ಗೆಟ್‌: ಕುಮಾರಸ್ವಾಮಿ

ಎಚ್‌ಡಿಕೆ ವೈಫಲ್ಯ ತಿಳಿಸುವೆ: 

ಕ್ಷೇತ್ರದಿಂದ ಆಯ್ಕೆ ಯಾಗಿ ಕುಮಾರಸ್ವಾಮಿ ಸಿಎಂ ಆಗಿದ್ದರೂ, ಯಾವುದೇ ಅಭಿವೃದ್ಧಿ ಮಾಡಿಲ್ಲ. ಇದನ್ನ ಜನ ಗಮನಿಸಿದ್ದಾರೆ. ಎರಡು ಬಾರಿ ಸೋತಿದ್ದೇನೆ, ಆಶೀರ್ವಾದ ಮಾಡಿ ಅಂತ ಕೇಳ್ತಿದ್ದೇನೆ. ಕುಮಾರಸ್ವಾಮಿ ವೈಫಲ್ಯವನ್ನ ಪಟ್ಟಿ ಮಾಡಿ ಜನರ ಮುಂದಿಡುತ್ತೇನೆ. ಜನರಿಗೆ ಅವರ ವೈಫಲ್ಯ ಗಮನಕ್ಕೆ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಸರ್ಕಾರದ ಯೋಜನಗಳನ್ನ ನೋಡಿ ಜನ ನನ್ನನ್ನ ಬೆಂಬಲಿಸುತ್ತಾರೆ. ಕಾಂಗ್ರೆಸ್ ನ ಎಲ್ಲಾ ನಾಯಕರು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ ಎಂದರು. 

ನಿಖಿಲ್ ಎರಡು ಬಾರಿ ಸೋತಿದ್ದೇನೆ ಎಂಬ ಭಾವನಾತ್ಮಕ ಪ್ರಚಾರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲಿ ಕಳೆದುಕೊಂಡಿದ್ದೇವೋ ಅಲ್ಲೇ ಹುಡುಕಬೇಕು. ಮಂಡ್ಯ ಕಳೆದುಕೊಂಡಿದ್ರೆ ಮಂಡ್ಯದಲ್ಲೇ ಹುಡುಕಬೇಕು. ರಾಮನಗರದಲ್ಲಿ ಕಳೆದುಕೊಂಡಿದ್ರೆ ರಾಮನಗರದಲ್ಲೇ ಹುಡುಕಬೇಕು. ಅಲ್ಲೇ ಇದ್ದು ಅಭಿವೃದ್ದಿ ಕೆಲಸ ಮಾಡಿ ಮತ್ತೆ ಬೆಂಬಲ ಕೇಳಬೇಕು ಎಂದು ನಿಖಿಲ್‌ಗೆ ಟಾಂಗ್ ನೀಡಿದರು. 

ಎರಡು ಬಾರಿ ಗೆದ್ದ ಕುಮಾರಸ್ವಾಮಿ ಏನು ಮಾಡಿದರು: ಸಿ.ಪಿ.ಯೋಗೇಶ್ವರ್ ಪ್ರಶ್ನೆ

ನಾನೂ ಎರಡು ಬಾರಿ ಸೋತಿದ್ದೇನೆ. ನಾನು ಈ ಬಾರಿ ಗೆಲ್ಲಬೇಕಲ್ಲ. ಇದು ನನ್ನ ತಾಲೂಕು, ಇಲ್ಲೇ ಹುಟ್ಟಿ ಇಲ್ಲೇ ಬೆಳೆದಿದ್ದೇನೆ. ಕ್ಷೇತ್ರದ ಸಮಸ್ಯೆ, ಜನರ ಭಾವನೆ ನನಗೆ ಗೊತ್ತು. ನನಗೆ ಅಳೋದಕ್ಕೆ ಬರೋ ದಿಲ್ಲ. ನಾನು ಕಣ್ಣೀರು ಹಾಕಿ ಮತಕೇಳಲ್ಲ. ನನ್ನನ್ನ ಕಣ್ಣೀರು ಹಾಕಲು ಕ್ಷೇತ್ರದ ಜನ ಬಿಡಲ್ಲ. ಹಾಗಾಗಿ ಈ ಬಾರಿ ನನ್ನನ್ನು ಗೆಲ್ಲಿಸುವ ವಿಶ್ವಾಸ ಇದೆ ಎಂದರು. 

ಯೋಗಿ ಬಿರುಸಿನ ಪ್ರಚಾರ 

ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವ‌ರ್ 2ನೇ ದಿನ ತಾಲೂಕಿನ ಹೊಂಗನೂರು ಜಿಪಂ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಕೆಂಗಲ್ ಆಂಜ ನೇಯಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ, ಚಂದ್ರಗಿರಿದೊಡ್ಡಿ,ಪೌಳಿದೊಡ್ಡಿ, ಹನುಮಂತಪುರ, ವಂದಾರಗುಪ್ಪೆ, ಕರಿಕಲ್‌ದೊಡ್ಡಿ, ಮುನಿಯಪ್ಪನ ದೊಡ್ಡಿ ಗ್ರಾಮಗಳಲ್ಲಿ ಪ್ರಚಾರ ಮಾಡಿದರು.

Latest Videos
Follow Us:
Download App:
  • android
  • ios