ಡಿ.ಕೆ.ಶಿವಕುಮಾರ್‌ ಮತ್ತು ನನ್ನ ನಡುವೆ ಆರಂಭದಿಂದಲೂ ಕಿತ್ತಾಟ ಇದೆ  ಅವರ ಜೊತೆ ಹೋಗುವುದು ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದಂತಾಗುತ್ತದೆ 

ಚನ್ನಪಟ್ಟಣ (ಜ.07) : ಡಿ.ಕೆ.ಶಿವಕುಮಾರ್‌ (DK Shivakumar) ಮತ್ತು ನನ್ನ ನಡುವೆ ಆರಂಭದಿಂದಲೂ ಕಿತ್ತಾಟ ಇದೆ. ನಾನು ಎಂದೂ ಡಿಕೆಎಸ್‌ ಸಹೋದರರ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ, ಮುಂದೆಯೂ ಮಾಡಿಕೊಳ್ಳುವುದಿಲ್ಲ. ಅವರ ಜೊತೆ ಹೋಗುವುದು ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದಂತಾಗುತ್ತದೆ ಎಂದು ಎಂಎಲ್ಸಿ ಯೋಗೇಶ್ವರ್‌ (CP Yogeshwar) ವ್ಯಂಗ್ಯವಾಡಿದ್ದಾರೆ. 

1999 ರಲ್ಲಿ ನಾನು ಮೊದಲ ಬಾರಿಗೆ ಕಾಂಗ್ರೆಸ್‌ (Congress) ಪಕ್ಷದಿಂದ ಟಿಕೇಟ್‌ ಕೇಳಿದಾಗ ಇದೇ ಡಿ.ಕೆ.ಶಿವಕುಮಾರ್‌ ಟಿಕೆಟ್‌ (Ticket) ತಪ್ಪಿಸಿದರು. ಬಿಜೆಪಿ ಸೇರಿದ ನಾನು 2013ರಲ್ಲಿ ಬಿಜೆಪಿ (BJP) ಮೂರು ಭಾಗವಾದಾಗ ನನ್ನ ಅಸ್ತಿತ್ವಕ್ಕಾಗಿ ಮತ್ತೆ ಕಾಂಗ್ರೆಸ್‌ಗೆ ಬಂದೆ. ಆಗಲೂ ಇದೇ ಡಿ.ಕೆ.ಶಿವಕುಮಾರ್‌ ಟಿಕೆಟ್‌ ತಪ್ಪಿಸಿದರು. ಕಳೆದ 25 ವರ್ಷಗಳಿಂದ ನನಗೆ ಕಿರುಕುಳ ಕೊಟ್ಟು ಕೊಂಡು ಬಂದಿದ್ದಾರೆ. ಅವರ ಜೊತೆಗೆ ನಾನು ಹೇಗೆ ಹೋಗಲಿ. ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಯಾವ ಕಾರಣಕ್ಕೂ ಪಕ್ಷ ಬಿಡುವುದಿಲ್ಲ, ವರಿಷ್ಠರು ಸೂಚಿಸಿದರೆ ಕನಕಪುರದಿಂದ (kanakapura) ಸ್ಪರ್ಧಿಸಲು ಸಿದ್ಧ ಎಂದರು.

ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್‌ (DK Suresh) ಮತ್ತು ಎಂಎಲ್‌ಸಿ ರವಿ ಅವರ ವರ್ತನೆಯಿಂದಾಗಿ ಇಡೀ ಜಿಲ್ಲೆಯ ಜನತೆಗೆ ಅಪಮಾನವಾಗಿದ್ದು, ಅವರು ಜಿಲ್ಲೆಯ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಇನ್ನು ಕಾಂಗ್ರೆಸ್‌ ಪಕ್ಷದಲ್ಲಿ ನಾನೇ ಸೂಪರ್‌ ಸುಪ್ರೀಂ ಎಂದು ಬಿಂಬಿಸಿಕೊಳ್ಳುತ್ತಿರುವ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸೈಡ್‌ಲೈನ್‌ ಮಾಡಲು ಈ ಪಾದಯಾತ್ರೆ ಬಳಸಿಕೊಳ್ಳುತ್ತಿದ್ದಾರೆ. ಹಲವು ಬಾರಿ ಸರ್ಕಾರದಲ್ಲಿ ಪ್ರಭಾವಿ ಮಂತ್ರಿಯಾಗಿ, ಜಲಸಂಪನ್ಮೂಲ ಸಚಿವರಾಗಿ ಕರ್ತವ್ಯ ನಿರ್ವಹಿಸಿದಾಗ ಯಾಕೆ ಮೇಕೆದಾಟು ಬಗ್ಗೆ ಕಾಳಜಿ ವಹಿಸಲಿಲ್ಲ ಎಂದು ಪ್ರಶ್ನಿಸಿದರು.

ಅವರು ಇಲ್ಲಿಯೇ ಬೆಳೆಯುತ್ತಾರೆ : ಮಾಜಿ ಸಚಿವ ಸಿಪಿ ಯೋಗೆಶ್ವರ್ ಗೆ (CP yogeshwar ) ಕಾಂಗ್ರೆಸ್ (Congress) ಸೇರುವಂತೆ ಡಿಕೆಶಿ (DK Shivakumar) ಆಹ್ವಾನ ವಿಚಾರಕ್ಕೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ (Ashwath narayan) ಪ್ರತಿಕ್ರಿಯಿಸಿದ್ದಾರೆ.

ಚನ್ನಪಟ್ಟಣದಲ್ಲಿಂದು (Channapattana) ಮಾತನಾಡಿದ ಅಶ್ವತ್ ನಾರಾಯಣ್ ನಮ್ಮ ಪಕ್ಷದ ನಾಯಕರಿಗೆ ಇಷ್ಟೊಂದು ಮಾನ್ಯತೆ ನೀಡಿದ್ದಾರೆ. ಆದರೆ ಯೋಗೇಶ್ವರ್ ಬಿಜೆಪಿ (BJp) ಬಿಡುವ ಪ್ರಶ್ನೇಯೆ ಇಲ್ಲ. ಯೋಗೇಶ್ವರ್ ನಮ್ಮ ಪಕ್ಷದಲ್ಲೇ ಇರುತ್ತಾರೆ. ನಮ್ಮ ನಾಯಕರಾಗಿ ಇರುತ್ತಾರೆ. ಮುಂದಿನ ಚುನಾವಣೆಯಲ್ಲಿ (election) ಚನ್ನಪಟ್ಟಣದಲ್ಲೇ ಸ್ಫರ್ಧೆ ಮಾಡುತ್ತಾರೆ ಎಂದರು. 

ನಮ್ಮ ನಾಯಕರಾಗಿ ಎಲ್ಲ ಕಡೆ ಸದೃಢವಾಗಿ ಸಿಪಿ ಯೋಗೆಶ್ವರ್ ಬೆಳೆಯುತ್ತಾರೆ. ನಮ್ಮ ಪಕ್ಷದ ನಾಯಕರಿಗೆ ಪ್ರತಿ ಪಕ್ಷದ ನಾಯಕರು ಮನ್ನಣೆ ನೀಡುವಾಗ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ನಾಯಕರಾಗಿ ಬೆಳೆಯುತ್ತಾರೆ. ನಮ್ಮ ಪಕ್ಷದ ನಾಯಕರ ಶಕ್ತಿ ಮತ್ತು ಅವರ ಪ್ರತಿಭೆಗೆ ಮನ್ನಣೆ ನೀಡಿ ಕಾಂಗ್ರೆಸ್ (Congress) ಪಕ್ಷಕ್ಕೆ ಕರೆಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವರ ಜೊತೆ ಹೊಗೊಲ್ಲ ಎಂದು ಸಚಿವ ಅಶ್ವತ್ ನಾರಾಯಣ್ ಹೇಳಿದರು. 

ಸಿಪಿವೈ ಸಾಕಷ್ಟು ಬಾರಿ ಅವರು ಸಚಿವರಾಗಿ ಕೆಲಸ ಮಾಡಿದ್ದಾರೆ. ಸಚಿವ ಸ್ಥಾನ ಅವರಿಗೇನು ಹೊಸದಲ್ಲ, ರಾಜಕೀಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷ ಸಂಘಟನೆ ಮಾಡ್ತಿದ್ದಾರೆ. ಅವರಿಗೆ ಯಾವೆಲ್ಲಾ ಗೌರವ ಸ್ಥಾನ ಮಾನ ನೀಡಬೇಕು ಎಲ್ಲವೂ ಸಿಗುತ್ತದೆ ಎಂದರು.

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ : ನೂರಕ್ಕೆ ನೂರು ರಾಜ್ಯದಲ್ಲಿ ಕಾಂಗ್ರೆಸ್‌ (Congress) ಅಧಿಕಾರಕ್ಕೆ ಬರಲ್ಲ. ಯಾವುದೇ ಕಾರಣಕ್ಕೂ ಅಧಿಕಾರ ಮಾಡೋದೆ ಇಲ್ಲ. ನಮ್ಮ ಶಾಸಕರು ಯಾರು ಕಾಂಗ್ರೆಸ್‌ಗೆ ಹೋಗಲ್ಲ ಎಂದು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಐಟಿ- ಬಿಟಿ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌ (Dr CN Ashwath Narayan) ತಿಳಿಸಿದರು.

ಮೈಸೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಕಾಂಗ್ರೆಸ್‌ ರಾಷ್ಟ್ರ ಮಟ್ಟದಲ್ಲೇ ಒಡೆದು ನೂರು ಭಾಗವಾಗಿದೆ. ರಾಜ್ಯ ಕಾಂಗ್ರೆಸ್‌ ನಾಯಕತ್ವಕ್ಕೆ ಕಿತ್ತಾಟ ಶುರುವಾಗಿದೆ. ನಾನು ಬರೆದುಕೊಡ್ತೀನಿ ಯಾವ ಕಾರಣಕ್ಕೂ ಕಾಂಗ್ರೆಸ್‌ ಅಧಿಕಾರಕ್ಕೆ ಬರಲ್ಲ. ನಮ್ಮ ಶಾಸಕರಾರು ಕಾಂಗ್ರೆಸ್‌ಗೆ ಹೋಗಲ್ಲ ಎಂದು ಹೇಳಿದರು.