ಚನ್ನಪಟ್ಟಣದಲ್ಲಿ ಬೈ ಎಲೆಕ್ಷನ್ ಆದ್ರೂ ಯೋಗೇಶ್ವರ್‌ಗೇನು ಟಿಕೆಟ್ ಸಿಗಲ್ಲ: ಬಾಲಕೃಷ್ಣ

ಎಚ್ಡಿಕೆ ಅವರ ಮನೆಯಲ್ಲಿ ಏನು ನಡೆಯುತ್ತೆ ಅನ್ನೋದು ಗೊತ್ತಾಗುತ್ತೆ. ಚನ್ನಪಟ್ಟಣದಲ್ಲಿ ಎಚ್ಡಿಕೆ ಹಾಗೂ ಸಿಪಿವೈ ಇವರನ್ನ ಒದ್ದು ಓಡಿಸೋಣ ಅಂತ ಅವರು, ಅವರನ್ನ ಒದ್ದು ಓಡಿಸೋಣ ಅಂತ ಇವರು ನಿಂತಿದ್ದಾರೆ. ಇವರೇನೋ ಎಲ್ಲೋ ಹೋಗಿ ಅಡ್ಜಸ್ಟ್ ಆಗ್ತಾರೆ. ಆದ್ರೆ ಚನ್ನಪಟ್ಟಣ ಕ್ಷೇತ್ರದ ಕಾರ್ಯಕರ್ತರ ಕಥೆ ಏನು? ಕಾರ್ಯಕರ್ತರು ನಿಜವಾಗಿಯೂ ಬಲಿಪಶು ಆಗುತ್ತಾರೆ: ಶಾಸಕ ಎಚ್.ಸಿ.ಬಾಲಕೃಷ್ಣ 

CP Yogeshwar Not Get Ticket If ByElection in Channapatna Says MLA HC HC Balakrishna grg

ಮಾಗಡಿ(ಮಾ.27):  ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ನಿಲ್ಲಿಸಬೇಕು ಅಂತ ಎಚ್ಡಿಕೆ ಹೋಂ ಮಿನಿಸ್ಟರ್ ಆದೇಶ ಆಗಿದೆ ಎಂದು ಶಾಸಕ ಹೆಚ್.ಸಿ. ಬಾಲಕೃಷ್ಣ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಎಚ್ಡಿಕೆ ಅವರ ಮನೆಯಲ್ಲಿ ಏನು ನಡೆಯುತ್ತೆ ಅನ್ನೋದು ಗೊತ್ತಾಗುತ್ತೆ. ಚನ್ನಪಟ್ಟಣದಲ್ಲಿ ಎಚ್ಡಿಕೆ ಹಾಗೂ ಸಿಪಿವೈ ಇವರನ್ನ ಒದ್ದು ಓಡಿಸೋಣ ಅಂತ ಅವರು, ಅವರನ್ನ ಒದ್ದು ಓಡಿಸೋಣ ಅಂತ ಇವರು ನಿಂತಿದ್ದಾರೆ. ಇವರೇನೋ ಎಲ್ಲೋ ಹೋಗಿ ಅಡ್ಜಸ್ಟ್ ಆಗ್ತಾರೆ. ಆದ್ರೆ ಚನ್ನಪಟ್ಟಣ ಕ್ಷೇತ್ರದ ಕಾರ್ಯಕರ್ತರ ಕಥೆ ಏನು? ಕಾರ್ಯಕರ್ತರು ನಿಜವಾಗಿಯೂ ಬಲಿಪಶು ಆಗುತ್ತಾರೆ. ಈಗಲೇ ಚನ್ನಪಟ್ಟಣ ಕಾರ್ಯಕರ್ತರು ಎಚ್ಚೆತ್ತುಕೊಳ್ಳಬೇಕು. ಬೈ ಎಲೆಕ್ಷನ್ ಆದ್ರೆ ಯೋಗೇಶ್ವರ್‌ಗೆ ಟಿಕೆಟ್ ಸಿಗಲ್ಲ. ಈಗಲೇ ಅವರ ಕಾರ್ಯಕರ್ತರು ಕಾಂಗ್ರೆಸ್‌ಗೆ ಬನ್ನಿ, ನಿಮ್ಮ ನಾಯಕರು ಬಂದರೂ ಒಳ್ಳೆಯದೇ. ಈಗಲೇ ಬಂದ್ರೆ ನಿಮ್ಮಲ್ಲೇ ಯಾರಾದ್ರೂ ಎಂಎಲ್ಎ ಆಗಬಹುದು ಎಂದು ಪರೋಕ್ಷವಾಗಿ ಸಿ.ಪಿ.ಯೋಗೇಶ್ವರ್‌ಗೆ ಆಹ್ವಾನ ನೀಡಿದರು.

ರಾಮನಗರ: ಸೀರೆ ಸಿಕ್ಕ ಪ್ರಕರಣ ಜೆಡಿಎಸ್ ರಚಿಸಿರುವ ಡ್ರಾಮಾ, ಬಾಲಕೃಷ್ಣ

ಡಿಕೆ ಬ್ರದರ್ಸ್‌ ರಕ್ತ ಚರಿತ್ರೆ ಉಳ್ಳವರು ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಹೇಳಿಕೆ ವಿಚಾರವಾಗಿ ಮಾತನಾಡಿದ ಬಾಲಕೃಷ್ಣ, ಯೋಗೇಶ್ವರ್‌ ಅವರೇ ಕನಕಪುರ ಎಲ್ಲಾ ಓಡಾಡಿಕೊಂಡು ಬಂದಿದ್ದಾರೆ, ಎಲ್ಲಾದರು ಆ ಅನುಭವ ಆಗಿದ್ಯಾ.? ಅಪಪ್ರಚಾರ ಮಾಡಲು ಇತಿಮಿತಿ ಇರಬೇಕು. ಅವರಿಗೆ ತಲೆ ಕೆಟ್ಟುಹೋಗಿದೆ. ಅರೆ ಮಿಲಿಟರಿ ಪಡೆ ಬಂದು ಚುನಾವಣೆ ಮಾಡಬೇಕು ಎನ್ನುತ್ತಾರೆ. ಅಭಿವೃದ್ಧಿ ವಿಚಾರ ಮಾತಾಡಿ ಮತ ಗಿಟ್ಟಿಸಿಕೊಳ್ಳುತ್ತಿಲ್ಲ. ಅಪಪ್ರಚಾರ ಮಾಡಿ ಮತ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜನ ಬುದ್ದಿವಂತರಿದ್ದಾರೆ. ಯಾರು ಅಭಿವೃದ್ಧಿ ಮಾಡ್ತಾರೆ ಎಂಬುದು ಗೊತ್ತು ಎಂದು ಹೇಳಿದರು. ಜನ ಇದಕ್ಕೆ ಉತ್ತರ ಕೊಡುತ್ತಾರೆ ನಾನು ಶಾಸಕ ಮುನಿರತ್ನ, ಸಿ.ಪಿ.ಯೋಗೇಶ್ವರ್ ಇಬ್ಬರಿಗೂ ಹೇಳುತ್ತೇನೆ ಕೇಳಿ, ಅಭಿವೃದ್ಧಿ ಬಗ್ಗೆ ಚರ್ಚೆ ಆಗಲಿ ಅವರು ಅಭ್ಯರ್ಥಿಯನ್ನು ಕರೆದುಕೊಂಡು ಬರುತ್ತಾರಾ ಕೇಳಿ ಎಂದು ಪ್ರಶ್ನಿಸಿದರು.

ಮುನಿರತ್ನ, ಯೋಗೇಶ್ವರ್‌ಗೆ ಟಾಂಗ್

ಪಿಚ್ಚರ್ ತೆಗೆಯೋದು, ರಾಮ, ಕೀಚಕ, ಧರ್ಮ ಯುದ್ದ ಯಾರ್ಯಾರು ಏನೇನು ಮಾಡಿದ್ದಾರೆ ಎಲ್ಲಾ ಗೊತ್ತಿದೆ. ಯಾರ್ಯಾರ ವಸ್ತ್ರಾಭರಣ ಮಾಡಿದ್ದಾರೆ ಮುನಿರತ್ನ ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇವೆ. ಗೋವಿಂದ ಹರ ಗೋವಿಂದ ಮುನಿರತ್ನನಾಯ್ಡು ಗೋವಿಂದ ಅಂತ ಹಾಡು ಬರುತ್ತೆ ಗೊತ್ತಾ? ಬೇಕು ಅಂದ್ರೆ ಆ ಹಾಡನ್ನ ಹಾಕುತ್ತೇವೆ, ಯಾರ ಸೀರೆ ಎಳೆದ್ರು ಅವ್ರು? ಯಾರ ಸೀರೆಗೆ ಕೈ ಹಾಕಿದ್ರು ಅವೆಲ್ಲವನ್ನು ತೋರಿಸೋಣವಾ? ನಿಮಗೆ ಆ ಹಾಡು ಹಾಕ್ತೇನೆ ಕೇಳಿಕೊಳ್ಳಿ. ಆ ಹಾಡಿಲ್ಲಿ ಯಾರು ಸೀರೆ ಎಳೆದ್ರು, ಯಾವ ಹೆಣ್ಣುಮಕ್ಕಳ ಸೀರೆಗೆ ಕೈ ಹಾಕಿದ್ರು ಎಂಬುದು ಆ ಹಾಡಲ್ಲಿದೆ ಎಂದು ಶಾಸಕ ಮುನಿರತ್ನ ವಿರುದ್ಧ ಶಾಸಕ ಎಚ್.ಸಿ.ಬಾಲಕೃಷ್ಣ ಗಂಭೀರ ಆರೋಪ ಮಾಡಿದರು.

Latest Videos
Follow Us:
Download App:
  • android
  • ios