ಕಾಂಗ್ರೆಸ್ ಸೇರ್ತಾರಾ ‘ಸೈನಿಕ’ ಸಿ.ಪಿ. ಯೊಗೇಶ್ವರ್? ಎಚ್‌ಡಿಕೆ ಮಣಿಸಲು ಡಿಕೆ ಬ್ರದರ್ಸ್ ಜೊತೆ ಕೈ ಜೋಡಿಸ್ತಾರಾ ಸಿಪಿವೈ?
ಎಚ್‌ಡಿಕೆ ಮಣಿಸಲು ಡಿಕೆ ಬ್ರದರ್ಸ್ ಜೊತೆ ಸಿ.ಪಿ.ವೈ ಕೈ ಜೋಡಿಸ್ತಾರಾ ಎಂದು ಹೇಳಲಾಗುತ್ತಿದ್ದು, ಕಳೆದ ಹಲವು ತಿಂಗಳಿಂದ ಕಾಂಗ್ರೆಸ್ ನಾಯಕರು ಸಿಪಿವೈಗೆ ಗಾಳ ಹಾಕಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಬೆಂಗಳೂರು (ಮಾರ್ಚ್ 25, 2023): ವಿಧಾನಸಭೆ ಚುನಾವಣೆ 2023 ಹತ್ತರ ಬರುತ್ತಿದ್ದಂತೆ ಹಾಗೂ ಚುನಾವಣಾ ದಿನಾಂಕ ಘೋಷಣೆಯಾಗುವ ಮುನ್ನವೇ ಕಾಂಗ್ರೆಸ್ ಮೊದಲ ಪಟ್ಟಿ ರಿಲೀಸ್ ಮಾಡಿದೆ. 124 ವಿಧಾನಸಭಾ ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಿದ್ದು, ಆದರೆ, ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರ ಕುತೂಹಲ ಮೂಡಿಸಿದೆ. ಚನ್ನಪಟ್ಟಣ ಕ್ಷೇತ್ರಕ್ಕೆ ಸೈನಿಕ ಸಿ.ಪಿ. ಯೋಗೇಶ್ವರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗುತ್ತೆ ಎಂದು ಹೇಳಲಾಗುತ್ತಿದೆ.
ಹೌದು, ಬಿಜೆಪಿಯಲ್ಲಿರುವ ಸಿ.ಪಿ. ಯೋಗೇಶ್ವರ್ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ಈ ಮೂಲಕ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸೋಲಿಸಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ಮಾಡ್ತಿದೆ ಎನ್ನಲಾಗಿದೆ.
ಇದನ್ನು ಓದಿ: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮೊದಲ ಪಟ್ಟಿ ರಿಲೀಸ್: 124 ವಿಧಾನಸಭಾ ಕ್ಷೇತ್ರಗಳ ಲಿಸ್ಟ್ ಹೀಗಿದೆ ನೋಡಿ..
ಎಚ್‌ಡಿಕೆ ಮಣಿಸಲು ಡಿಕೆ ಬ್ರದರ್ಸ್ ಜೊತೆ ಸಿ.ಪಿ.ವೈ ಕೈ ಜೋಡಿಸ್ತಾರಾ ಎಂದು ಹೇಳಲಾಗುತ್ತಿದ್ದು, ಕಳೆದ ಹಲವು ತಿಂಗಳಿಂದ ಕಾಂಗ್ರೆಸ್ ನಾಯಕರು ಸಿಪಿವೈಗೆ ಗಾಳ ಹಾಕಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದು, ಈಗ ಇದಕ್ಕೆ ಪುಷ್ಠಿ ಸಿಕ್ಕಿದೆ. ಮೊದಲ ಪಟ್ಟಿಯಲ್ಲಿ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯನ್ನು ಕಾಂಗ್ರೆಸ್ ಘೋಷಿಸದೆ ಹಾಗೆ ಬಿಟ್ಟಿರುವುದರಿಂದ ಈ ಮಾತುಗಳು ಕೇಳಿ ಬರುತ್ತಿದೆ.
ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಕ್ಕೆ ಟಿಕೆಟ್ ಫೈನಲ್ ಮಾಡಿದ್ದು, ಚನ್ನಪಟ್ಟಣ ಕ್ಷೇತ್ರಕ್ಕೆ ಮಾತ್ರ ಎಐಸಿಸಿ ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ರಾಮನಗರ ಕ್ಷೇತ್ರದಿಂದ ಇಕ್ಬಾಲ್ ಹುಸೇನ್‌ಗೆ ಟಿಕೆಟ್ ಘೋಷಿಸಿದ್ದರೆ, ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಎಚ್.ಸಿ. ಬಾಲಕೃಷ್ಣ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಗಾಗೆ, ನಿರೀಕ್ಷೆಯಂತೆ ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ಇದನ್ನೂ ಓದಿ: ಕೋಲಾರ, ವರುಣಾ ಎರಡೂ ಕಡೆ ಸ್ಪರ್ಧೆಗೆ ಸಿದ್ದರಾಮಯ್ಯ ಸಿದ್ಧತೆ: ಹೈಕಮಾಂಡ್‌ನಿಂದಲೂ ಒಪ್ಪಿಗೆ ಸಾಧ್ಯತೆ
ಈ ಹಿನ್ನೆಲೆ ಚನ್ನಪಟ್ಟಣ ಕ್ಷೇತ್ರಕ್ಕೆ ಮಾತ್ರ ಎಐಸಿಸಿ ಅಭ್ಯರ್ಥಿಯನ್ನು ಫೈನಲ್ ಮಾಡದೆ ಇರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ಕಳೆದ ಹಲವು ದಿನಗಳಿಂದ ಸಿಪಿವೈ ಕಾಂಗ್ರೇಸ್ ಸೇರ್ತಾರೆ ಎಂಬ ಚರ್ಚೆ ಹಿನ್ನಲೆ, ಇದಕ್ಕೆ ಪುಷ್ಠಿ ನೀಡುವಂತೆ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯನ್ನು ಫೈನಲ್ ಮಾಡಿಲ್ಲ. ಸದ್ಯ, ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಯಾಗಿ ಪ್ರಸನ್ನ ಗೌಡ ಸ್ಪರ್ಧಿಸಲಿದ್ದಾರೆ ಎನ್ನಲಗ್ತಿದ್ದು, ಒಮದು ವೇಳೆ ಸೈನಿಕ ಸಿ.ಪಿ. ಯೊಗೇಶ್ವರ್ ಕಾಂಗ್ರೆಸ್‌ಗೆ ಹೋದ್ರೆ ಅವರೇ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಲಿದೆ.
ಕಾಂಗ್ರೆಸ್ ಸಂಪೂರ್ಣ ಪಟ್ಟಿ
ಚಿಕ್ಕೋಡಿ - ಗಣೇಶ್ ಹುಕ್ಕೇರಿ
ಕಾಗವಾಡ - ಭೀಮಗಗೌಡ ಕಾಗೆ
ಕುಡಚಿ - ಮಹೇಂದ್ರ ಕೆ
ಹುಕ್ಕೇರಿ - ಎ.ಬಿ.ಪಾಟೀಲ್
ಯಮಕನಮಡಿ - ಸತೀಶ್ ಜಾರಕಿಹೊಳಿ
ಬೆಳಗಾವಿ ಗ್ರಾಮೀಣ - ಲಕ್ಷ್ಮಿ ಹೆಬ್ಬಾಳ್ಕರ್
ದೇವನಹಳ್ಳಿ - ಕೆ.ಎಚ್.ಮುನಿಯಪ್ಪ
ಖಾನಾಪು - ಅಂಜಲಿ ನಿಂಬಾಳ್ಕರ್
ಬೈಲಹೊಂಗಲ - ಮಹಾಂತೇಶ್ ಕೌಜಲಗಿ
ರಾಮದುರ್ಗ - ಅಶೋಕ್ ಪಟ್ಟಣ್
ಜಮಖಂಡಿ - ಆನಂದ್ ನ್ಯಾಮಗೌಡ
ಹುನಗುಂದ - ವಿಜಯಾನಂದ ಕಾಶಪ್ಪನವರ್
ಮುದ್ದೇಬಿಹಾಳ - ಅಪ್ಪಾಜಿ ನಾಡಗೌಡ
ಬಸವನ ಬಾಗೇವಾಡಿ - ಶಿವಾನಂದ ಪಾಟೀಲ್
ಬಬಲೇಶ್ವರ್ - ಎಂ.ಬಿ.ಪಾಟೀಲ್
ಇಂಡಿ - ಯಶವಂತರಾಯ ಗೌಡ ಪಾಟೀಲ್
ಜೇವರ್ಗಿ - ಅಜಯ್ ಸಿಂಗ್
ಸುರಪುರ - ರಾಜಾವೆಂಕಟಪ್ಪ ನಾಯಕ
ಶಹಪುರ_ಶರಣಬಸಪ್ಪ ಗೌಡ
ಚಿತ್ತಾಪುರ - ಪ್ರಿಯಾಂಕ್ ಖರ್ಗೆ
ಸೇಡಂ - ಶರಣಪ್ರಕಾಶ್ ಪಾಟೀಲ್
ಚಿಂಚೋಳಿ - ಸುಭಾಷ್ ರಾಠೋಡ್
ಕಲಬುರಗಿ ಉತ್ತರ - ಕನಿಜ ಫಾತಿಮಾ
ಆಳಂದ - ಬಿ.ಎಆರ್.ಪಾಟೀಲ್
ಹುಮ್ನಾಬಾದ್ - ರಾಜಶೇಖರ್ ಪಾಟೀಲ್
ಬೀದರ್ ದಕ್ಷಿಣ - ಅಶೋಕ್ ಖೇಣಿ
ಬೀದರ್ - ರಹೀಂ ಖಾನ್
ಬಾಲ್ಕಿ - ಈಶ್ವರ್ ಖಂಡ್ರೆ
ರಾಯಚೂರು ಗ್ರಾಮೀಣ - ಬಸನಗೌಡ ದದ್ದಲ್
ಮಸ್ಕಿ - ಬಸನಗೌಡ ತುರ್ವಿಹಾಳ
ಕುಷ್ಟಗಿ - ಅಮರೇಗೌಡ ಬಯ್ಯಾಪುರ
ಕನಕಗಿರಿ - ಶಿವರಾಜ್ ತಂಗಡಗಿ
ಯಲಬುರ್ಗಾ - ಬಸವರಾಜ ರಾಯರೆಡ್ಡಿ
ಕೊಪ್ಪಳ - ರಾಘವೇಂದ್ರ ಹಿಟ್ನಾಳ್
ಗದಗ - ಎಚ್.ಕೆ.ಪಾಟೀಲ್
ರೋಣ - ಜಿ.ಎಸ್.ಪಾಟೀಲ್
ಹುಬ್ಬಳ್ಳಿ-ಧಾರವಾಡ (ಪೂರ್ವ) - ಪ್ರಸಾದ್ ಅಬ್ಬಯ್ಯ
ಹಳಿಯಾಳ- ಆರ್.ವಿ.ದೇಶಪಾಂಡೆ
ಕಾರವಾರ - ಸತೀಶ್ ಸೈಲ್
ಭಟ್ಕಳ - ಮಂಕಾಳ ವೈದ್ಯ
ಹಾನಗಲ್ - ಶ್ರೀನಿವಾಸ್ ಮಾನೆ
ಹಾವೇರಿ - ರುದ್ರಪ್ಪ ಲಮಾಣಿ
ಬ್ಯಾಡಗಿ - ಬಸವರಾಜ ಶಿವಣ್ಣನವರ್
ಹಿರೆಕೇರೂರು - ಯು.ಬಿ.ಬಣಕಾರ್
ರಾಣೆಬೆನ್ನೂರು - ಪ್ರಕಾಶ್ ಕೋಳಿವಾಡ
ಹೂವಿನ ಹಡಗಲಿ - ಪರಮೇಶ್ವರ್ ನಾಯ್ಕ್
ಹಗರಿಬೊಮ್ಮನಹಳ್ಳಿ - ಭೀಮಾನಾಯ್ಕ್
ವಿಜಯನಗರ - ಎಚ್.ಆರ್.ಗವಿಯಪ್ಪ
ಕಂಪ್ಲಿ - ಗಣೇಶ್
ಬಳ್ಳಾರಿ ಗ್ರಾಮೀಣ - ನಾಗೇಂದ್ರ
ಸಂಡೂರು - ತುಕಾರಾಂ
ಚಳ್ಳಕೆರೆ - ರಘುಮೂರ್ತಿ
ಹಿರಿಯೂರು - ಡಿ.ಸುಧಾಕರ್
ಹೊಸದುರ್ಗ - ಗೋವಿಂದಪ್ಪ
ದಾವಣಗೆರೆ ಉತ್ತರ- ಎಸ್.ಎಸ್ ಮಲ್ಲಿಕಾರ್ಜುನ್
ದಾವಣಗೆರೆ ದಕ್ಷಿಣ - ಶಾಮನೂರು ಶಿವಶಂಕರಪ್ಪ
ಮಾಯಕೊಂಡ - ಕೆ.ಎಸ್.ಬಸವರಾಜ್
ಭದ್ರಾವತಿ - ಸಂಗಮೇಶ್ವರ್
ಸೊರಬ - ಮಧು ಬಂಗಾರಪ್ಪ
ಸಾಗರ - ಬೇಳೂರು ಗೋಪಾಲಕೃಷ್ಣ
ಬೈಂದೂರು - ಗೋಪಾಲ್ ಪೂಜಾರಿ
ಕುಂದಾಪುರ - ದಿನೇಶ್ ಹೆಗಡೆ
ಕಾಪು - ವಿನಯ್ ಕುಮಾರ್ ಸೊರಕೆ
ಶೃಂಗೇರಿ - ಟಿಡಿ ರಾಜೇಗೌಡ
ಚಿಕ್ಕನಾಯಕನಹಳ್ಳಿ - ಕಿರಣ್ ಕುಮಾರ್
ತಿಪಟೂರು - ಷಡಕ್ಷರಿ
ತುರುವೆಕೆರೆ - ಬೆಮೆಲ್ ಕಾಂತರಾಜ್
ಕುಣಿಗಲ್ - ರಂಗನಾಥ್
ಕೊರಟಗೆರೆ - ಪರಮೇಶ್ವರ್
ಶಿರಾ - ಟಿಬಿ ಜಯಚಂದ್ರ
ಪಾವಗಡ - ಎಚ್ವಿ ವೆಂಕಟೇಶ್
ಮಧುಗಿರಿ - ಕೆಎನ್ ರಾಜಣ್ಣ
ಗೌರಿಬಿದನೂರು ಶಿವಶಂಕರ ರೆಡ್ಡಿ
ಬಾಗೇಪಲ್ಲಿ - ಎಸ್.ಎನ್.ಸುಬ್ಬಾರೆಡ್ಡಿ
ಚಿಂತಾಮಣಿ - ಎಂಸಿ ಸುಧಾಕರ್
ಶ್ರೀನಿವಾಸಪುರ - ರಮೇಶ್ ಕುಮಾರ್
ಕೆಜಿಎಫ್ - ರೂಪಾ ಶಶೀಧರ್
ಬಂಗಾರಪೇಟೆ - ನಾರಾಯಣಸ್ವಾಮಿ
ಮಾಲೂರು - ನಂಜೇಗೌಡ
ಬ್ಯಾಟರಾಯನಪುರ - ಕೃಷ್ಣಭೈರೇಗೌಡ
ಆರ್.ಆರ್.ನಗರ - ಕುಸುಮಾ
ಮಲ್ಲೇಶ್ವರಂ - ಅನೂಪ್ ಅಯ್ಯಂಗಾರ್
ಹೆಬ್ಬಾಳ - ಭೈರತಿ ಸುರೇಶ್
ಸರ್ವಜ್ಞನಗರ - ಕೆಜೆ ಜಾರ್ಜ್
ಶಿವಾಜಿನಗರ - ರಿಜ್ವಾನ್ ಅರ್ಷದ್
ಶಾಂತಿನಗರ - ಎನ್.ಎಹ್ಯಾರಿಸ್
ಗಾಂಧಿನಗರ - ದಿನೇಶ್ ಗುಂಡೂರಾವ್
ರಾಜಾಜಿನಗರ - ಪುಟ್ಟಣ್ಣ
ಗೋವಿಂದರಾಜನಗರ - ಪ್ರಿಯಾಕೃಷ್ಣ
ವಿಜಯನಗರ - ಎಂ.ಕೃಷ್ಣಪ್ಪ
ಚಾಮರಾಜಪೇಟೆ - ಜಮೀರ್ ಅಹ್ಮದ್ ಖಾನ್
ಬಸವನಗುಡಿ - ಯುಬಿ ವೆಂಕಟೇಶ್
ಬಿಟಿಎಂ ಲೇಔಟ್ - ರಾಮಲಿಂಗಾರೆಡ್ಡಿ
ಜಯನಗರ - ಸೌಮ್ಯಾ ರೆಡ್ಡಿ
ಮಹದೇವಪುರ - ನಾಗೇಶ್
ಆನೇಕಲ್ - ಶಿವಣ್ಣ
ಹೊಸಕೋಟೆ - ಶರತ್ ಬಚ್ಚೇಗೌಡ
ದೇವನಹಳ್ಳಿ - ಕೆ.ಎಚ್.ಮುನಿಯಪ್ಪ
ದೊಡ್ಡಬಳ್ಳಾಪುರ - ವೆಂಕಟರಾಮಯ್ಯ
ನೆಲಮಂಗಲ - ಶ್ರೀನಿವಾಸ್ ಎನ್
ಮಾಗಡಿ - ಬಾಲಕೃಷ್ಣ
ರಾಮನಗರ - ಇಕ್ಬಾಲ್ ಹುಸೇನ್
ಕನಕಪುರ - ಡಿಕೆ ಶಿವಕುಮಾರ್
ಮಳವಳ್ಳಿ - ನರೇಂದ್ರ ಸ್ವಾಮಿ
ಶ್ರೀರಂಗಪಟ್ಟಣ - ರಮೇಶ್ ಬಂಡಿಸಿದ್ದೇಗೌಡ
ನಾಗಮಂಗಲ - ಚಲುವರಾಯಸ್ವಾಮಿ
ಹೊಳೆನರಸೀಪುರ - ಶ್ರೇಯಸ್ ಪಟೇಲ್
ಸಕಲೇಶಪುರ - ಮುರಳಿ ಮೋಹನ್
ಬೆಳ್ತಂಗಡಿ - ರಕ್ಷಿತ್ ಶಿವರಾಮ್
ಮೂಡಬಿದ್ರೆ - ಮಿಥುನ್ ರೈ
ಮಂಗಳೂರು - ಯುಟಿ ಖಾದರ್
ಬಂಟ್ವಾಳ - ರಮಾನಾಥ್ ರೈ
ಸುಳ್ಯ - ಕೃಷ್ಣಪ್ಪ ಜಿ
ವಿರಾಜಪೇಟೆ - ಪೊನ್ನಣ್ಣ
ಪಿರಿಯಾಪಟ್ಟಣ - ಕೆ.ವೆಂಕಟೇಶ್
ಕೆ.ಆರ್.ನಗರ - ಡಿ.ರವಿಶಂಕರ್
ಹುಣಸೂರು - ಎಚ್.ಪಿ.ಮಂಜುನಾಥ್
ಎಚ್.ಡಿ.ಕೋಟೆ - ಅನಿಲ್ ಚಿಕ್ಕಮಾದು
ನಂಜನಗೂರು -ದರ್ಶನ್ ಧ್ರುವನಾರಾಯಣ
ನರಸಿಂಹರಾಜ - ತನ್ವೀರ್ ಸೇಠ್
ವರುಣಾ - ಸಿದ್ದರಾಮಯ್ಯ
ಟಿ.ನರಸಿಪುರ - ಎಚ್.ಸಿ.ಮಹದೇವಪ್ಪ
ಹನೂರು - ನರೇಂದ್ರ
ಚಾಮರಾಜನಗರ - ಪುಟ್ಟರಂಗಶೆಟ್ಟಿ
ಗುಂಡ್ಲುಪೇಟೆ - ಗಣೇಶ್ ಪ್ರಸಾದ್