ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮೊದಲ ಪಟ್ಟಿ ರಿಲೀಸ್: 124 ವಿಧಾನಸಭಾ ಕ್ಷೇತ್ರಗಳ ಲಿಸ್ಟ್ ಹೀಗಿದೆ ನೋಡಿ..
ಪ್ರಮುಖವಾಗಿ, ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬುದು ಕುತೂಹಲ ಮೂಡಿಸಿತ್ತು. ಈಗ ಸಿದ್ದರಾಮಯ್ಯ ವರುಣಾದಿಂದಲೇ ಸ್ಪರ್ಧಿಸುವುದು ಸ್ಪಷ್ಟವಾಗಿದೆ.
2023 ರ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಳೆದ 3 - 4 ದಿನಗಳಿಂದ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದ್ದು, ಈವರೆಗೆ ಪಟ್ಟಿ ಬಿಡುಗಡೆಯಾಗಿರಲಿಲ್ಲ. ಆದರೆ, ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸುವ ದಿನವೇ ಕಾಂಗ್ರೆಸ್ 124 ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪ್ರಮುಖವಾಗಿ, ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬುದು ಕುತೂಹಲ ಮೂಡಿಸಿತ್ತು. ಈಗ ಸಿದ್ದರಾಮಯ್ಯ ವರುಣಾದಿಂದಲೇ ಸ್ಪರ್ಧಿಸುವುದು ಸ್ಪಷ್ಟವಾಗಿದೆ. ಅಲ್ಲದೆ, ಮೊದಲ ಪಟ್ಟಿಯಲ್ಲಿ ಕೋಲಾರ ಹಾಗೂ ಬಾದಾಮಿ ಕ್ಷೇತ್ರದ ಅಭ್ಯರ್ಥಿ ಹೆಸರಿಲ್ಲ. ಸಿದ್ದರಾಮಯ್ಯ 2 ಕ್ಷೇತ್ರ ಸ್ಪರ್ಧೆ ಸುಳಿವು ಬೆನ್ನಲ್ಲೇ ಮೊದಲ ಪಟ್ಟಿಯಲ್ಲಿ ಕೋಲಾರ, ಬಾದಾಮಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿರದಿರುವುದು ಕುತೂಹಲ ಮೂಡಿಸಿದೆ.
ಇದನ್ನು ಓದಿ: ಕೋಲಾರ, ವರುಣಾ ಎರಡೂ ಕಡೆ ಸ್ಪರ್ಧೆಗೆ ಸಿದ್ದರಾಮಯ್ಯ ಸಿದ್ಧತೆ: ಹೈಕಮಾಂಡ್‌ನಿಂದಲೂ ಒಪ್ಪಿಗೆ ಸಾಧ್ಯತೆ
ಅಲ್ಲದೆ, ಕನಕಪುರದಲ್ಲಿ ಡಿ.ಕೆ. ಶಿವಕುಮಾರ್‌ಗೆ ಟಿಕೆಟ್ ಘೋಷಿಸಲಾಗಿದ್ದು, ದರ್ಶನ್ ಧ್ರುವನಾರಾಯಣಗೆ ನಂಜನಗೂಡು ಕ್ಷೇತ್ರದಿಂದ ಟಿಕೆಟ್ ಘೋಷಿಸಲಾಗಿದೆ. ಇನ್ನು, ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕೆ.ಎಚ್.ಮುನಿಯಪ್ಪಗೆ ಟಿಕೆಟ್ ನೀಡಲಾಗಿದ್ದರೆ, ರಾಜಕೀಯ ನಿವೃತ್ತಿ ಘೋಷಿಸಿದ್ದ ತನ್ವೀರ್ ಸೇಠ್‌ಗೆ ಮತ್ತೆ ಟಿಕೆಟ್ ಘೋಷಿಸಿರುವುದು ಅಚ್ಚರಿ ಮೂಡಿಸಿದೆ.
ಸಿಎಂ ಬೊಮ್ಮಾಯಿ ವಿರುದ್ಧ ವಿನಯ್ ಕುಲಕರ್ಣಿ ಸ್ಪರ್ಧೆ, ಕರ್ನಾಟಕ ಕುರುಕ್ಷೇತ್ರಕ್ಕೆ ಸಾಕ್ಷಿಯಾಗಲಿದೆ ಶಿಗ್ಗಾವಿ...
ಇನ್ನು, ಎಚ್.ಸಿ. ಮಹದೇವಪ್ಪಗೆ ಟಿ. ನರಸೀಪುರ ಟಿಕೆಟ್ ನೀಡಲಾಗಿದ್ದರೆ, ಬೆಂಗಳೂರಿನ ಪ್ರಮುಖ ಕ್ಷೇತ್ರಗಳಲ್ಲೊಂದಾದ ಮಲ್ಲೇಶ್ವರಕ್ಕೆ ಅನೂಪ್ ಅಯ್ಯಂಗಾರ್ ಎಂಬ ಬ್ರಾಹ್ಮಣ ಅಭ್ಯರ್ಥಿಯನ್ನು ಘೋಷಿಸಲಾಗಿದೆ. ಹಾಗೆ, ರಾಜಾಜಿನಗರ ಕ್ಷೇತ್ರಕ್ಕೆ ಪುಟ್ಟಣ್ಣಗೆ ಟಿಕೆಟ್ ಘೋಷಿಸಲಾಗಿದೆ. ಆದರೆ, ಕುಂದಗೋಳ ಕ್ಷೇತ್ರಕ್ಕೆ ಮೊದಲ ಪಟ್ಟಿಯಲ್ಲಿ ಯಾವುದೇ ಅಭ್ಯರ್ಥಿ ಬಿಡುಗಡೆ ಮಾಡಿಲ್ಲ.
ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಹೀಗಿದೆ ನೋಡಿ.. ಮುದ್ದೇಬಿಹಾಳ ಕ್ಷೇತ್ರದಿಂದ ಅಪ್ಪಾಜಿ ನಾಡಗೌಡ ಅವರಿಗೆ ಟಿಕೆಟ್ ಘೋಷಿಸಿದ್ದರೆ, ಬಬಲೇಶ್ವರದಿಂದ ಎಂ.ಬಿ. ಪಾಟೀಲ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಹಾಗೆ, ಇಂಡಿ ಕ್ಷೇತ್ರದಿಂದ ಯಶವಂತರಾಯಗೌಡ ಪಾಟೀಲ್ ಅವರಿಗೆ ಟಿಕೆಟ್ ನೀಡಿದ್ದರೆ, ಬಸವನ ಬಾಗೇವಾಡಿಯಿಂದ ಶಿವಾನಂದ ಪಾಟೀಲ್ ಅವರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡಲಾಗಿದೆ. ಒಟ್ಟಾರೆ, ವಿಜಯಪುರ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳ ಅಭ್ಯರ್ಥಿಯನ್ನು ಕಾಂಗ್ರೆಸ್ ಘೋಷಿಸಿದೆ.
ತುಮಕೂರು ಜಿಲ್ಲೆಯ ಪಾವಗಡ ಕ್ಷೇತ್ರದಲ್ಲಿ ಹಾಲಿ ಶಾಸಕ ವೆಂಕಟರಮಣಪ್ಪಗೆ ಟಿಕೆಟ್ ನೀಡಿಲ್ಲ. ಅವರ ಬದಲು ಹೆಚ್.ವಿ. ವೆಂಕಟೇಶ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಸಿಎಂ ಕ್ಷೇತ್ರ ಶಿಗ್ಗಾವಿಗೂ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ವಿನಯ್ ಕುಲಕರ್ಣಿ - ಅಜ್ಜಂಪೀರ್ ಖಾದ್ರಿ ನಡುವೆ ಟಿಕೆಟ್‌ಗೆ ಪೈಪೋಟಿ ನಡೆಯುತ್ತಿದ್ದು, ಈ ಹಿನ್ನೆಲೆ ಘೋಷಣೆ ಮಾಡಿಲ್ಲ. ಹಾಗೆ, ರಾಣೆಬೆನ್ನೂರು ಕ್ಷೇತ್ರದಲ್ಲಿ ಕೋಳಿವಾಡ ಪುತ್ರ ಪ್ರಕಾಶ್ ಕೋಳಿವಾಡಗೆ ಟಿಕೆಟ್ ಘೋಷಿಸಲಾಗಿದೆ. ಹಾಲಿ ಶಾಸಕರು ಮತ್ತು ಮಾಜಿ ಶಾಸಕರಿಗೆ ಮೊದಲ ಪಟ್ಟಿಯಲ್ಲಿ ಅವಕಾಶ ನೀಡಿದ್ದು, ಗೊಂದಲ ಇಲ್ಲದ ಕ್ಷೇತ್ರದಲ್ಲಿ ಮಾತ್ರ ಟಿಕೆಟ್ ಘೋಷಣೆ ಮಾಡಲಾಗಿದೆ.
ಕಾಂಗ್ರೆಸ್ ಸೇರ್ಪಡೆಯಾದ ಎಲ್ಲಾ ಮಾಜಿ ಶಾಸಕರ ಕ್ಷೇತ್ರದ ಟಿಕೆಟ್ ಅನ್ನು ಘೋಷಣೆ ಮಾಡಿಲ್ಲ. ರಾಮನಗರ ಕ್ಷೇತ್ರದಲ್ಲಿ ಇಕ್ಬಾಲ್ ಹುಸೇನ್‌ಗೆ ಟಿಕೆಟ್ ಘೋಷಿಸಲಾಗಿದ್ದು, ನಿಖಿಲ್ ವಿರುದ್ಧ ಡಿಕೆ ಸುರೇಶ್ ಸ್ಪರ್ಧೆ ಮಾಡುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಈ ಮಧ್ಯೆ, ರಾಯಚೂರು ಜಿಲ್ಲೆಯ ಇಬ್ಬರೂ ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಫೈನಲ್ ಮಾಡಲಾಗಿದ್ದು, ಮಸ್ಕಿ ಕ್ಷೇತ್ರದ ಹಾಲಿ ಶಾಸಕ ಬಸನಗೌಡ ತುರ್ವಿಹಾಳ ಅವರಿಗೆ ಟಿಕೆಟ್ ನೀಡಲಾಗಿದ್ದು, ಹಾಗೆ, ರಾಯಚೂರು ಗ್ರಾಮೀಣ ಕ್ಷೇತ್ರದ ಹಾಲಿ ಶಾಸಕ ಬಸನಗೌಡ ದದ್ದಲ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಒಟ್ಟಾರೆ, 7 ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ 2 ಕ್ಷೇತ್ರದ ಟಿಕೆಟ್ ಮಾತ್ರ ಘೋಷಣೆ ಮಾಡಲಾಗಿದೆ. ದೇವದುರ್ಗ, ಮಾನ್ವಿ, ಸಿಂಧನೂರು, ರಾಯಚೂರು ನಗರ, ಲಿಂಗಸೂಗೂರು ಕ್ಷೇತ್ರಗಳು ಬಾಕಿ ಇವೆ.
ಹಾವೇರಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಫೈನಲ್ ಮಾಡಲಾಗಿದ್ದು, ಹಾವೇರಿ ಎಸ್ ಸಿ ಮೀಸಲು ಕ್ಷೇತ್ರದಲ್ಲಿ ರುದ್ರಪ್ಪ ಲಮಾಣಿಗೆ ಟಿಕೆಟ್ ನೀಡಲಾಗಿದ್ದು, ಹಾನಗಲ್‌ನಲ್ಲಿ ಶ್ರೀನಿವಾಸ್ ಮಾನೆಗೆ ಘೋಷಿಸಲಾಗಿದೆ. ಹಾಗೆ, ರಾಣೆಬೆನ್ನೂರಿನಲ್ಲಿ ಕೆ.ಬಿ. ಕೋಳೀವಾಡ ಪುತ್ರ ಪ್ರಕಾಶ್ ಕೋಳೀವಾಡಗೆ ಟಿಕೆಟ್ ನೀಡಲಾಗಿದ್ದು, ಹಿರೇಕೇರೂರಿನಲ್ಲಿ ಯು.ಬಿ ಬಣಕಾರ್ ಅವರಿಗೆ ಟಿಕೆಟ್ ಸಿಕ್ಕಿದೆ. ಆದರೆ, ಶಿಗ್ಗಾವಿ ಕ್ಷೇತ್ರದ ಅಭ್ಯರ್ಥಿ ಆಯ್ಕೆಯನ್ನು ಪೆಂಡಿಂಗ್ ಇಟ್ಟಿದೆ.
ವಲಸೆ ಬಂದವರಿಗೆ ಮಣೆ ಹಾಕಿದ ಕಾಂಗ್ರೆಸ್
ಹಿರೆಕೆರೂರು ಕ್ಷೇತ್ರದಿಂದ ಯುಬಿ ಬಣಕಾರ್‌ಗೆ ಟಿಕೆಟ್ ನೀಡಲಾಗಿದ್ದು, ಚನ್ನಪಟ್ಟಣ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಅಭ್ಯರ್ಥಿ ಹೆಸರು ಮೊದಲ ಪಟ್ಟಿಯಲ್ಲಿ ಇಲ್ಲ. ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ತರುವ ಚರ್ಚೆ ಬೆನ್ನಲ್ಲೇ ಚನ್ನಪಟ್ಟಣ ಕೈ ಅಭ್ಯರ್ಥಿ ಬಗ್ಗೆ ಕುತೂಹಲ ಮೂಡಿಸಿದೆ. ಹಾಗೆ, ಚಿಕ್ಕನಾಯಕನಹಳ್ಳಿ ಇಂದ ಕಿರಣ್ ಕುಮಾರ್‌ಗೆ ಟಿಕೆಟ್ ಘೋಷಿಸಲಾಗಿದ್ದು, ಕಾಂಗ್ರೆಸ್, ಜೆಡಿಎಸ್ ನಿಂದ ವಲಸೆ ಹೋದವರ ಬಹುತೇಕ ಕ್ಷೇತ್ರಕ್ಕೆ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿ ಘೋಷಣೆ ಇಲ್ಲ. ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಕೆ.ಆರ್ ಪೇಟೆ, ಅಥಣಿ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿಲ್ಲ.
ಕಾಂಗ್ರೆಸ್ ಸಂಪೂರ್ಣ ಪಟ್ಟಿ
ಚಿಕ್ಕೋಡಿ - ಗಣೇಶ್ ಹುಕ್ಕೇರಿ
ಕಾಗವಾಡ - ಭೀಮಗಗೌಡ ಕಾಗೆ
ಕುಡಚಿ - ಮಹೇಂದ್ರ ಕೆ
ಹುಕ್ಕೇರಿ - ಎ.ಬಿ.ಪಾಟೀಲ್
ಯಮಕನಮಡಿ - ಸತೀಶ್ ಜಾರಕಿಹೊಳಿ
ಬೆಳಗಾವಿ ಗ್ರಾಮೀಣ - ಲಕ್ಷ್ಮಿ ಹೆಬ್ಬಾಳ್ಕರ್
ದೇವನಹಳ್ಳಿ - ಕೆ.ಎಚ್.ಮುನಿಯಪ್ಪ
ಖಾನಾಪು - ಅಂಜಲಿ ನಿಂಬಾಳ್ಕರ್
ಬೈಲಹೊಂಗಲ - ಮಹಾಂತೇಶ್ ಕೌಜಲಗಿ
ರಾಮದುರ್ಗ - ಅಶೋಕ್ ಪಟ್ಟಣ್
ಜಮಖಂಡಿ - ಆನಂದ್ ನ್ಯಾಮಗೌಡ
ಹುನಗುಂದ - ವಿಜಯಾನಂದ ಕಾಶಪ್ಪನವರ್
ಮುದ್ದೇಬಿಹಾಳ - ಅಪ್ಪಾಜಿ ನಾಡಗೌಡ
ಬಸವನ ಬಾಗೇವಾಡಿ - ಶಿವಾನಂದ ಪಾಟೀಲ್
ಬಬಲೇಶ್ವರ್ - ಎಂ.ಬಿ.ಪಾಟೀಲ್
ಇಂಡಿ - ಯಶವಂತರಾಯ ಗೌಡ ಪಾಟೀಲ್
ಜೇವರ್ಗಿ - ಅಜಯ್ ಸಿಂಗ್
ಸುರಪುರ - ರಾಜಾವೆಂಕಟಪ್ಪ ನಾಯಕ
ಶಹಪುರ_ಶರಣಬಸಪ್ಪ ಗೌಡ
ಚಿತ್ತಾಪುರ - ಪ್ರಿಯಾಂಕ್ ಖರ್ಗೆ
ಸೇಡಂ - ಶರಣಪ್ರಕಾಶ್ ಪಾಟೀಲ್
ಚಿಂಚೋಳಿ - ಸುಭಾಷ್ ರಾಠೋಡ್
ಕಲಬುರಗಿ ಉತ್ತರ - ಕನಿಜ ಫಾತಿಮಾ
ಆಳಂದ - ಬಿ.ಎಆರ್.ಪಾಟೀಲ್
ಹುಮ್ನಾಬಾದ್ - ರಾಜಶೇಖರ್ ಪಾಟೀಲ್
ಬೀದರ್ ದಕ್ಷಿಣ - ಅಶೋಕ್ ಖೇಣಿ
ಬೀದರ್ - ರಹೀಂ ಖಾನ್
ಬಾಲ್ಕಿ - ಈಶ್ವರ್ ಖಂಡ್ರೆ
ರಾಯಚೂರು ಗ್ರಾಮೀಣ - ಬಸನಗೌಡ ದದ್ದಲ್
ಮಸ್ಕಿ - ಬಸನಗೌಡ ತುರ್ವಿಹಾಳ
ಕುಷ್ಟಗಿ - ಅಮರೇಗೌಡ ಬಯ್ಯಾಪುರ
ಕನಕಗಿರಿ - ಶಿವರಾಜ್ ತಂಗಡಗಿ
ಯಲಬುರ್ಗಾ - ಬಸವರಾಜ ರಾಯರೆಡ್ಡಿ
ಕೊಪ್ಪಳ - ರಾಘವೇಂದ್ರ ಹಿಟ್ನಾಳ್
ಗದಗ - ಎಚ್.ಕೆ.ಪಾಟೀಲ್
ರೋಣ - ಜಿ.ಎಸ್.ಪಾಟೀಲ್
ಹುಬ್ಬಳ್ಳಿ-ಧಾರವಾಡ (ಪೂರ್ವ) - ಪ್ರಸಾದ್ ಅಬ್ಬಯ್ಯ
ಹಳಿಯಾಳ- ಆರ್.ವಿ.ದೇಶಪಾಂಡೆ
ಕಾರವಾರ - ಸತೀಶ್ ಸೈಲ್
ಭಟ್ಕಳ - ಮಂಕಾಳ ವೈದ್ಯ
ಹಾನಗಲ್ - ಶ್ರೀನಿವಾಸ್ ಮಾನೆ
ಹಾವೇರಿ - ರುದ್ರಪ್ಪ ಲಮಾಣಿ
ಬ್ಯಾಡಗಿ - ಬಸವರಾಜ ಶಿವಣ್ಣನವರ್
ಹಿರೆಕೇರೂರು - ಯು.ಬಿ.ಬಣಕಾರ್
ರಾಣೆಬೆನ್ನೂರು - ಪ್ರಕಾಶ್ ಕೋಳಿವಾಡ
ಹೂವಿನ ಹಡಗಲಿ - ಪರಮೇಶ್ವರ್ ನಾಯ್ಕ್
ಹಗರಿಬೊಮ್ಮನಹಳ್ಳಿ - ಭೀಮಾನಾಯ್ಕ್
ವಿಜಯನಗರ - ಎಚ್.ಆರ್.ಗವಿಯಪ್ಪ
ಕಂಪ್ಲಿ - ಗಣೇಶ್
ಬಳ್ಳಾರಿ ಗ್ರಾಮೀಣ - ನಾಗೇಂದ್ರ
ಸಂಡೂರು - ತುಕಾರಾಂ
ಚಳ್ಳಕೆರೆ - ರಘುಮೂರ್ತಿ
ಹಿರಿಯೂರು - ಡಿ.ಸುಧಾಕರ್
ಹೊಸದುರ್ಗ - ಗೋವಿಂದಪ್ಪ
ದಾವಣಗೆರೆ ಉತ್ತರ- ಎಸ್.ಎಸ್ ಮಲ್ಲಿಕಾರ್ಜುನ್
ದಾವಣಗೆರೆ ದಕ್ಷಿಣ - ಶಾಮನೂರು ಶಿವಶಂಕರಪ್ಪ
ಮಾಯಕೊಂಡ - ಕೆ.ಎಸ್.ಬಸವರಾಜ್
ಭದ್ರಾವತಿ - ಸಂಗಮೇಶ್ವರ್
ಸೊರಬ - ಮಧು ಬಂಗಾರಪ್ಪ
ಸಾಗರ - ಬೇಳೂರು ಗೋಪಾಲಕೃಷ್ಣ
ಬೈಂದೂರು - ಗೋಪಾಲ್ ಪೂಜಾರಿ
ಕುಂದಾಪುರ - ದಿನೇಶ್ ಹೆಗಡೆ
ಕಾಪು - ವಿನಯ್ ಕುಮಾರ್ ಸೊರಕೆ
ಶೃಂಗೇರಿ - ಟಿಡಿ ರಾಜೇಗೌಡ
ಚಿಕ್ಕನಾಯಕನಹಳ್ಳಿ - ಕಿರಣ್ ಕುಮಾರ್
ತಿಪಟೂರು - ಷಡಕ್ಷರಿ
ತುರುವೆಕೆರೆ - ಬೆಮೆಲ್ ಕಾಂತರಾಜ್
ಕುಣಿಗಲ್ - ರಂಗನಾಥ್
ಕೊರಟಗೆರೆ - ಪರಮೇಶ್ವರ್
ಶಿರಾ - ಟಿಬಿ ಜಯಚಂದ್ರ
ಪಾವಗಡ - ಎಚ್ವಿ ವೆಂಕಟೇಶ್
ಮಧುಗಿರಿ - ಕೆಎನ್ ರಾಜಣ್ಣ
ಗೌರಿಬಿದನೂರು ಶಿವಶಂಕರ ರೆಡ್ಡಿ
ಬಾಗೇಪಲ್ಲಿ - ಎಸ್.ಎನ್.ಸುಬ್ಬಾರೆಡ್ಡಿ
ಚಿಂತಾಮಣಿ - ಎಂಸಿ ಸುಧಾಕರ್
ಶ್ರೀನಿವಾಸಪುರ - ರಮೇಶ್ ಕುಮಾರ್
ಕೆಜಿಎಫ್ - ರೂಪಾ ಶಶೀಧರ್
ಬಂಗಾರಪೇಟೆ - ನಾರಾಯಣಸ್ವಾಮಿ
ಮಾಲೂರು - ನಂಜೇಗೌಡ
ಬ್ಯಾಟರಾಯನಪುರ - ಕೃಷ್ಣಭೈರೇಗೌಡ
ಆರ್.ಆರ್.ನಗರ - ಕುಸುಮಾ
ಮಲ್ಲೇಶ್ವರಂ - ಅನೂಪ್ ಅಯ್ಯಂಗಾರ್
ಹೆಬ್ಬಾಳ - ಭೈರತಿ ಸುರೇಶ್
ಸರ್ವಜ್ಞನಗರ - ಕೆಜೆ ಜಾರ್ಜ್
ಶಿವಾಜಿನಗರ - ರಿಜ್ವಾನ್ ಅರ್ಷದ್
ಶಾಂತಿನಗರ - ಎನ್.ಎಹ್ಯಾರಿಸ್
ಗಾಂಧಿನಗರ - ದಿನೇಶ್ ಗುಂಡೂರಾವ್
ರಾಜಾಜಿನಗರ - ಪುಟ್ಟಣ್ಣ
ಗೋವಿಂದರಾಜನಗರ - ಪ್ರಿಯಾಕೃಷ್ಣ
ವಿಜಯನಗರ - ಎಂ.ಕೃಷ್ಣಪ್ಪ
ಚಾಮರಾಜಪೇಟೆ - ಜಮೀರ್ ಅಹ್ಮದ್ ಖಾನ್
ಬಸವನಗುಡಿ - ಯುಬಿ ವೆಂಕಟೇಶ್
ಬಿಟಿಎಂ ಲೇಔಟ್ - ರಾಮಲಿಂಗಾರೆಡ್ಡಿ
ಜಯನಗರ - ಸೌಮ್ಯಾ ರೆಡ್ಡಿ
ಮಹದೇವಪುರ - ನಾಗೇಶ್
ಆನೇಕಲ್ - ಶಿವಣ್ಣ
ಹೊಸಕೋಟೆ - ಶರತ್ ಬಚ್ಚೇಗೌಡ
ದೇವನಹಳ್ಳಿ - ಕೆ.ಎಚ್.ಮುನಿಯಪ್ಪ
ದೊಡ್ಡಬಳ್ಳಾಪುರ - ವೆಂಕಟರಾಮಯ್ಯ
ನೆಲಮಂಗಲ - ಶ್ರೀನಿವಾಸ್ ಎನ್
ಮಾಗಡಿ - ಬಾಲಕೃಷ್ಣ
ರಾಮನಗರ - ಇಕ್ಬಾಲ್ ಹುಸೇನ್
ಕನಕಪುರ - ಡಿಕೆ ಶಿವಕುಮಾರ್
ಮಳವಳ್ಳಿ - ನರೇಂದ್ರ ಸ್ವಾಮಿ
ಶ್ರೀರಂಗಪಟ್ಟಣ - ರಮೇಶ್ ಬಂಡಿಸಿದ್ದೇಗೌಡ
ನಾಗಮಂಗಲ - ಚಲುವರಾಯಸ್ವಾಮಿ
ಹೊಳೆನರಸೀಪುರ - ಶ್ರೇಯಸ್ ಪಟೇಲ್
ಸಕಲೇಶಪುರ - ಮುರಳಿ ಮೋಹನ್
ಬೆಳ್ತಂಗಡಿ - ರಕ್ಷಿತ್ ಶಿವರಾಮ್
ಮೂಡಬಿದ್ರೆ - ಮಿಥುನ್ ರೈ
ಮಂಗಳೂರು - ಯುಟಿ ಖಾದರ್
ಬಂಟ್ವಾಳ - ರಮಾನಾಥ್ ರೈ
ಸುಳ್ಯ - ಕೃಷ್ಣಪ್ಪ ಜಿ
ವಿರಾಜಪೇಟೆ - ಪೊನ್ನಣ್ಣ
ಪಿರಿಯಾಪಟ್ಟಣ - ಕೆ.ವೆಂಕಟೇಶ್
ಕೆ.ಆರ್.ನಗರ - ಡಿ.ರವಿಶಂಕರ್
ಹುಣಸೂರು - ಎಚ್.ಪಿ.ಮಂಜುನಾಥ್
ಎಚ್.ಡಿ.ಕೋಟೆ - ಅನಿಲ್ ಚಿಕ್ಕಮಾದು
ನಂಜನಗೂರು -ದರ್ಶನ್ ಧ್ರುವನಾರಾಯಣ
ನರಸಿಂಹರಾಜ - ತನ್ವೀರ್ ಸೇಠ್
ವರುಣಾ - ಸಿದ್ದರಾಮಯ್ಯ
ಟಿ.ನರಸಿಪುರ - ಎಚ್.ಸಿ.ಮಹದೇವಪ್ಪ
ಹನೂರು - ನರೇಂದ್ರ
ಚಾಮರಾಜನಗರ - ಪುಟ್ಟರಂಗಶೆಟ್ಟಿ
ಗುಂಡ್ಲುಪೇಟೆ - ಗಣೇಶ್ ಪ್ರಸಾದ್