ಮನೆಗೆ ಹೋದ್ರೆ ಪೊಲೀಸ್ ಕರೀತಾರೆ, ಪ್ರಶ್ನೆ ಮಾಡಿದ್ರೆ ಹೊಡೀತಾರೆ: ಸಿಪಿವೈ ವಿರುದ್ದ ಅಸಮಾಧಾನ ಹೊರಹಾಕಿದ ಪುತ್ರಿ ನಿಶಾ!
ಸಿಪಿವೈ ಅವರ ಮೊದಲ ಪತ್ನಿಯ ಪುತ್ರಿ ನಿಶಾ ಯೋಗೇಶ್ವರ್ ತಂದೆಯ ವಿರುದ್ದವೇ, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ತಂದೆಗೆ ನಾನೇ ಬೇಡವಾಗಿದ್ದೇನೆ ಎಂದು ಕಣ್ಣೀರು ಹಾಕುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ವರದಿ: ಜಗದೀಶ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ
ರಾಮನಗರ (ಮೇ.22): ಮಾಜಿ ಸಚಿವ ಸಿ.ಪಿ.ಯೋಗೆಶ್ವರ್ ಅವರ ಕುಟುಂಬದ ಕಲಹ ಇದೀಗ ಬೀದಿ ರಂಪಾಟವಾಗಿದೆ. ಸಿಪಿವೈ ಅವರ ಮೊದಲ ಪತ್ನಿಯ ಪುತ್ರಿ ನಿಶಾ ಯೋಗೇಶ್ವರ್ ತಂದೆಯ ವಿರುದ್ದವೇ, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ತಂದೆಗೆ ನಾನೇ ಬೇಡವಾಗಿದ್ದೇನೆ ಎಂದು ಕಣ್ಣೀರು ಹಾಕುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಪುತ್ರಿಗೆ ಮೋಸ ಮಾಡಿದ್ರಾ ಸಿಪಿವೈ ಹಾಗೂ ಮಲತಾಯಿ: ಹೌದು, ಮಾಜಿ ಸಚಿವ ಸಿಪಿ ಯೋಗೆಶ್ವರ್ ಹಾಗೂ ಪುತ್ರಿ ನಿಶಾ ಯೋಗೆಶ್ವರ್ ನಡುವಿನ ಮುಸುಕಿನ ಗುದ್ದಾಟ, ಕುಟುಂಬದ ಕಲಹ ಇದೇ ಮೊದಲೇನಲ್ಲ, ಕಳೆದು ಹಲವು ವರ್ಷಗಳಿಂದ ಕುಟುಂಬದಲ್ಲಿ ಈ ರೀತಿ ಬಿರುಕು ಮೂಡಿದೆ. ಹೌದು, ಯೋಗೆಶ್ವರ್ ಗೆ ಇಬ್ಬರು ಪತ್ನಿಯರಿದ್ದು, ಮೂವರು ಮಕ್ಕಳಿದ್ದಾರೆ. ಮೊದಲ ಪತ್ನಿಗೆ ಓರ್ವ ಮಗಳು, ಹಾಗೂ ಮಗನಿದ್ದು, ಎರಡನೇ ಪತ್ನಿಗೆ ಓರ್ವ ಮಗನಿದ್ದಾನೆ. ಕಳೆದ ಹಲವು ವರ್ಷಗಳಿಂದ ಮೊದಲ ಪತ್ನಿಯ ಪುತ್ರಿ ನಿಶಾ ಹಾಗೂ ಸಿಪಿವೈ ನಡುವೆ ಕೋಲ್ಡ್ ವಾರ್ ನಡೆಯುತ್ತಲೇ ಇದೆ.
ಇತ್ತೀಚಿಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರಲು ನಿಶಾ ಮುಂದಾಗಿದ್ದರು. ಆದ್ರೆ ಇಂದು ಇದ್ದಕ್ಕಿದ್ದಂತೆ, ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದು, ನಮ್ಮ ತಂದೆಗೆ ನಾವು ಬೇಡವಾಗಿದ್ದೇವೆ. ನಾನು ಹತ್ತು ವರ್ಷದವಳಿದ್ದಾಗಲೇ ನಮ್ಮನ್ನು ನಮ್ಮ ತಂದೆ ಮರೆತು ಬಿಟ್ಟಿದ್ದಾರೆ. ನಮ್ಮನ್ನು ರಾಜಕೀಯವಾಗಿ ಬೆಳೆಸಲಿಲ್ಲ, ಹಲವು ಚುನಾವಣೆಯಲ್ಲಿ ನಮ್ಮ ತಂದೆಯ ಪರವಾಗಿ ಪ್ರಚಾರ ಮಾಡಿದ್ದೇವೆ. ಕಳೆದ ಚುನಾವಣೆ ಸಂದರ್ಭದಲ್ಲಿ ಮೋದಿಯವರನ್ನು ಪರಿಚಯ ಮಾಡಿಸಿ ಅಂದ್ರೂ ನಮಗೆ ಗೌರವ ಕೊಡಲಿಲ್ಲ ಎಂದು ವಿಡಿಯೋದಲ್ಲಿ ಕಣ್ಣೀರು ಇಟ್ಟು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲೆಗೆ ಮತ್ತೆ ಭೂಕುಸಿತ, ಪ್ರವಾಹದ ಆತಂಕ: ಹವಾಮಾನ ಇಲಾಖೆ ಮುನ್ಸೂಚನೆ!
ಅಂದಹಾಗೆ ಸಿಪಿವೈ ಕಳೆದ ಹಲವು ವರ್ಷಗಳಿಂದ ನಿಶಾ ಯೊಗೇಶ್ವರ್ ಕುಟುಂಬದಿಂದ ದೂರ ಉಳಿದಿದ್ದಾರಂತೆ. ಇದೀಗ ಯೋಗೆಶ್ವರ್ ಹೆಸರು ಬಳಸಿಕೊಳ್ಳದಂತೆ ಸಿಪಿವೈ ಬೆಂಬಲಿಗರು ಕಮೆಂಟ್ ಮಾಡಿ ನಿಶಾಗೆ ಧಮ್ಕಿ ಹಾಕ್ತಾರಂತೆ, ತನ್ನ ಚಿಕ್ಕಮ್ಮ ಕೂಡ ನಮಗೆ ಆದರ್ಶ ತಾಯಿ ಆಗಲಿಲ್ಲ, ನಮ್ಮನ್ನು ಕಂಡರೆ ಕಾಲು ಕಸ ಮಾಡುತಿದ್ದರು, ಮೊದಲ ಪತ್ನಿಯ ಮಕ್ಕಳು ಎಂದು ನಮ್ಮನ್ನು ದೂರ ಮಾಡಿದ್ದಾರೆ. ತಂದೆ ನೋಡಲು ಮನೆಯ ಬಳಿ ಹೋದರೆ ನಮಗೆ ಹೊಡೆದು ಪೋಲಿಸರನ್ನು ಕರೆಸಿ ಬಾಯಿಗೆ ಬಂದ ಹಾಗೆ ಬೈಯಿಸುತ್ತಾರೆ. ನಮಗೆ ಸಾಕಷ್ಟು ನೋವು ನೀಡಿದ್ದಾರೆ. ನಮ್ಮವರೇ ಪರಕೀಯರಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ, ಇಷ್ಟು ದಿನಗಳ ಕಾಲ ಕುಟುಂಬದ ಚೌಕಟ್ಟಿನಲ್ಲಿದ್ದ ಸಿಪಿವೈ ಕುಟುಂಬದ ಕಲಹ ಇದೀಗ ಬೀದಿಗೆ ಬಂದಿದೆ. ಇನ್ನೂ ನಿಶಾ ಕಾಂಗ್ರೆಸ್ ಸೇರಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಸ್ವರೂಪ ಪಡೆದುಕೊಳ್ಳಲಿದೆ.