ಬೆಂಗಳೂರು (ಮೇ 11): ಕರ್ನಾಟಕದಲ್ಲಿ ಮೇ 24ರವರೆಗೆ ಲಾಕ್​ಡೌನ್ ಘೋಷಣೆ ಮಾಡಿದ್ದು, ಲಾಕ್​ಡೌನ್​ನಿಂದ ಅನೇಕರು ದುಡಿಯಲು ಅವಕಾಶವಿಲ್ಲದೆ, ಒಂದೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 

ಈ ಹಿನ್ನೆಲೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ ಇಂದಿರಾ ಕ್ಯಾಂಟೀನ್​ನಲ್ಲಿ ನಿರ್ಗತಿಕರು, ಕಾರ್ಮಿಕರು, ಬಡವರಿಗೆ ಉಚಿತ ಊಟ-ತಿಂಡಿ ನೀಡಿ ಎಂದು ಆದೇಶಿಸಿದೆ. ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಈ ಸೌಲಭ್ಯ ಸಿಗಲಿದೆ.

ರಾಜಕೀಯ ಬೇಡ: ಸಿಎಂ ಯಡಿಯೂರಪ್ಪಗೆ ಸಿದ್ದರಾಮಯ್ಯ ಪತ್ರ

ಬೆಂಗಳೂರನ್ನು ಕಡೆಗಣಿಸಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಬೆಂಗಳೂರಿನಲ್ಲೇ ಅತಿ ಹೆಚ್ಚು ಇಂದಿರಾ ಕ್ಯಾಂಟೀನ್ ಗಳಿವೆ. ಬೇರೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾತ್ರ ಉಚಿತ ಆಹಾರ ನೀಡಲು ಸಿಎಂ ಆದೇಶಿಸಿದ್ದಾರೆ. ಬೆಂಗಳೂರಿನಲ್ಲೇ ಅತಿ ಹೆಚ್ಚು ಕೂಲಿ ಕಾರ್ಮಿಕರು ಇರೋದು. ಬೆಂಗಳೂರಿನಲ್ಲಿರುವ ಕ್ಯಾಂಟೀನ್ ಗಳಲ್ಲೂ ಉಚಿತ ಆಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಜಮೀರ್ ಅಹಮದ್ ಅವರ ಕ್ಷೇತ್ರ ವೈದ್ಯಕೀಯ ಕಾರ್ಯಕರ್ತರಿಗೆ ಫುಡ್ ಕಿಟ್ ಹಾಗೂ 5 ಸಾವಿರ ಗೌರವ ಧನ ನೀಡ್ತಾ ಇದಾರೆ. ಈ ಕೆಲಸ ಸ್ವಾಗತಾರ್ಹ ಎಂದಿರುವ ಸಿದ್ದು,  ಜಮೀರ್ ಅಹಮ್ಮದ್ ತೇಜಸ್ವಿ ಸೂರ್ಯ ವಿರುದ್ದ ಮಾತನಾಡಿಬಾರದು ಅಂತ ಸಿಎಂ ಹೇಳಿಕೆ ಕೊಟ್ಟಿದ್ದಾರೆ. ಅವನ ವಿರುದ್ದ .ಮಾತನಾಡದಿದ್ದರೆ ಏನು ಸೂರ್ಯನ ಕಿರಣ ಪ್ರಕಾಶಮಾನವಾಗುತ್ತಾ..? ತಪ್ಪು ಯಾರೇ ಮಾಡಿದರು ಮಾತನಾಡಲೇಬೇಕು ಎಂದರು.