Asianet Suvarna News Asianet Suvarna News

BJP Janaspandana ಶಕ್ತಿ ಪ್ರದರ್ಶನಕ್ಕೆ ಕ್ಷಣಗಣನೆ

ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆ ಜೊತೆಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ 1 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಪಕ್ಕದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಸೆ.10ರಂದು ಆಯೋಜಿಸಿರುವ ಜನ ಸ್ಪಂದನ ಸಮಾವೇಶಕ್ಕೆ ಜಿಲ್ಲೆಯಿಂದ ಬರೋಬ್ಬರಿ 370 ಕೆಎಸ್‌ಆರ್‌ಟಿಸಿ ಬಸ್‌ಗಳು ತೆರಳಲಿವೆ.

Countdown to BJP Jan Spandana Shakti Show at doddaballapur today rav
Author
First Published Sep 10, 2022, 10:01 AM IST

ಚಿಕ್ಕಬಳ್ಳಾಪುರ (ಸೆ.10) : ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆ ಜೊತೆಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ 1 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಪಕ್ಕದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಸೆ.10ರಂದು ಆಯೋಜಿಸಿರುವ ಜನ ಸ್ಪಂದನ ಸಮಾವೇಶಕ್ಕೆ ಜಿಲ್ಲೆಯಿಂದ ಬರೋಬ್ಬರಿ 370 ಕೆಎಸ್‌ಆರ್‌ಟಿಸಿ ಬಸ್‌ಗಳು ತೆರಳಲಿವೆ.\ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಮುಂದಾಳತ್ವ ವಹಿಸಿ ಸಂಘಟಿಸುತ್ತಿರುವ ಈ ಜನ ಸ್ಪಂದನಾ ಸಮಾವೇಶ ಸಹಜವಾಗಿಯೆ ಜಿಲ್ಲೆಯ ರಾಜಕೀಯವಾಗಿ ಸಾಕಷ್ಟುಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

BJP Janaspandana: ಪಿತೃಪಕ್ಷ ಕಾರಣ 1 ದಿನ ಮೊದಲೇ ಜನಸ್ಪಂದನ: ಸುಧಾಕರ್‌

ಚಿಕ್ಕಬಳ್ಳಾಪುರ(Chikkaballapur) ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮುಂದಿನ ಚುನಾವಣೆಯಲ್ಲಿ ಕಮಲ ಅರಳಿಸುವ ಉದ್ದೇಶದಿಂದ ಬಿಜೆಪಿ(BJP) ದೊಡ್ಡಬಳ್ಳಾಪುರ(Doddaballapur)ದಲ್ಲಿ ಜನ ಸ್ಪಂದನಾ(Janaspandana) ಸಮಾವೇಶ ನಡೆಸಿದ್ದು ಸುಧಾಕರ್‌ ಪ್ರತಿನಿಧಿಸುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಭಾರೀ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಕರೆದುಕೊಂಡು ಹೋಗಲು ಬಸ್‌ಗಳನ್ನು ಬುಕ್‌ ಮಾಡಲಾಗಿದೆ. ಈ ಹಿನ್ನೆಯಲ್ಲಿ ಶನಿವಾರ ಜಿಲ್ಲೆಯಲ್ಲಿ ಪ್ರಯಾಣಿಕರಿಗೆ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಅದರಲ್ಲೂ ಗ್ರಾಮಾಂತರ ಪ್ರದೇಶದ ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಹೆಚ್ಚಿನ ತೊಂದರೆ ಆಗುವ ಸಾಧ್ಯತೆ ಇದೆ.

ಬಿಜೆಪಿ ಶಕ್ತಿ ಪ್ರದರ್ಶನ:

2023ರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಪಕ್ಷದ ಬಲ ವಿಸ್ತರಣೆಗಾಗಿ ಜನ ಸ್ಪಂದನಾ ಸಮಾವೇಶ ಆಯೋಜಿಸಿದೆ. ಈ ಮೊದಲು ಜನೋತ್ಸವ ಹೆಸರಲ್ಲಿ ಸಮಾವೇಶ ಆಯೋಜನೆಗೆ ಮುಂದಾಗಿದ್ದ ಬಿಜೆಪಿ ನಿಗದಿಯಾಗಿದ್ದ ಜನೋತ್ಸವ ಕಾರ್ಯಕ್ರಮ ಎರಡು ಬಾರಿ ಮುಂದೂಡಿದ ಕಾರಣಕ್ಕೆ ದಿಢೀರ್‌ನೆ ಜನೋತ್ಸವ ಬದಲಾಗಿ ಜನ ಸ್ಪಂದನಾ ಸಮಾವೇಶ ಆಯೋಜಿಸಿದೆ. ತೀವ್ರ ಮಳೆಯ ಕಾರಣದಿಂದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜನ ಸಂಕಷ್ಟದಲ್ಲಿದ್ದು ರೈತರು ಕೂಡ ಮಾಡಿದ ಬಿತ್ತನೆ ಮೊಳಕೆ ಒಡೆಯದೇ ಸಂಕಷ್ಟದಲ್ಲಿದ್ದು, ಜನ ಸ್ಪಂದನಾ ಸಮಾವೇಶಕ್ಕೆ ಮೂರು ಜಿಲ್ಲೆಗಳ ಜನತೆ ಯಾವ ರೀತಿ ಸ್ಪಂದಿಸುತ್ತಾರೆಂಬುದನ್ನು ಕಾದು ನೋಡಬೇಕಿದೆ. BJP Janaspandana: ಕತ್ತಿ ನಿಧನ ಹಿನ್ನೆಲೆ: ಬಿಜೆಪಿ ಜನಸ್ಪಂದನ ಶನಿವಾರಕ್ಕೆ..!

ಬಿಜೆಪಿ ಜನ ಸ್ಪಂದನಾ ಸಮಾವೇಶಕ್ಕೆ ಜಿಲ್ಲೆಯ ಉಪ ವಿಭಾಗದಿಂದ ದೊಡ್ಡಬಳ್ಳಾಪುರ ಸೇರಿ 370 ಬಸ್‌ಗಳನ್ನು ಬುಕ್ಕಿಂಗ್‌ ಮಾಡಲಾಗಿದೆ. ಪ್ರಯಾಣಿಕರಿಗೆ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿಗೆ ತೊಂದರೆ ಆಗಲಿದೆ. ಸಾರ್ವಜನಿಕರು ಸಹಕರಿಸಬೇಕು.

-ಹಿಮರ್ವಧನ್‌ ನಾಯ್ದು, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್ಸಾರ್ಟಿಸಿ

Follow Us:
Download App:
  • android
  • ios