ಬೆಂಗಳೂರು, (ಏ.30): ಕರ್ನಾಟಕದಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದ್ದು, ಸೂಕ್ತ ಸಮಯಕ್ಕೆ ಬೆಡ್, ಆಕ್ಸಿಜನ್​, ಅಂಬ್ಯುಲೆನ್ಸ್ ಸಿಗದೇ ಕೊರೋನಾ ಸೊಂಕಿತರು ಪರದಾಡುತ್ತಿದ್ದಾರೆ.

ಅದರಲ್ಲೂ ಬೆಂಗಳೂರಂತೂ ಕೊರೋನಾ ಹಾಟ್​ಸ್ಪಾಟ್​ ಆಗಿದ್ದು, ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಸಹಾಯಕ್ಕೆ ರಾಜ್ಯ ಕಾಂಗ್ರೆಸ್ ಮುಂದಾಗಿದೆ.

ಕರುನಾಡಿಗೆ ಬಿಗ್ ಶಾಕ್: ಒಂದೇ ದಿನ ಬರೋಬ್ಬರಿ 48 ಸಾವಿರ ಕೊರೋನಾ ಕೇಸ್

ಹೌದು... ಯುವ ಕಾಂಗ್ರೆಸ್ ಘಟಕ ಅಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿದೆ. ಕಾಂಗ್ರೆಸ್​ ಕೇರ್ಸ್​ ಹೆಸರಿನಲ್ಲಿ  ಆರಂಭಿಸಿದ್ದು, ಸಹಾಯವಾಣಿ ಮತ್ತಿತರ ನೆರವುಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ವಿವರಿಸಿದ್ದಾರೆ.

ವಿಡಿಯೋ ಕಾಲ್​ ಮೂಲಕ ವಿವರಣೆ ನೀಡಲಾಗಿದೆ. ಈ ವೇಳೆ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ಹಾಗೂ ರಾಮಲಿಂಗಾರೆಡ್ಡಿ ಅವರು ಶಿವಕುಮಾರ್​ ಜತೆಗಿದ್ದರು.