Asianet Suvarna News Asianet Suvarna News

Karnataka Assembly Elections 2023: ಡಿಕೆಶಿ, ಸಿದ್ದು ರಾಜ್ಯ ಯಾತ್ರೆಗೆ ಸಮನ್ವಯ ಸಮಿತಿ

ಬಸವರಾಜ ರಾಯರೆಡ್ಡಿ, ಜಿ.ಸಿ.ಚಂದ್ರಶೇಖರ್‌ ಅಧ್ಯಕ್ಷತೆಯ ತಂಡಗಳು ರಚನೆ, ಜನವರಿ ಬಳಿಕ ಉತ್ತರ ಕರ್ನಾಟಕದಲ್ಲಿ ಸಿದ್ದು, ದ. ಕರ್ನಾಟಕದಲ್ಲಿ ಡಿಕೆಶಿ ಪ್ರವಾಸ. 

Coordination Committee for DK Shivakumar and Siddaramaiah Karnataka Yatra grg
Author
First Published Jan 4, 2023, 2:00 AM IST

ಬೆಂಗಳೂರು(ಜ.04):  ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕ್ರಮವಾಗಿ ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಜನವರಿ ಬಳಿಕ ನಡೆಸುವ ಪ್ರತ್ಯೇಕ ರಾಜ್ಯ ಪ್ರವಾಸವನ್ನು ಯಶಸ್ವಿಗೊಳಿಸಲು ಸಮನ್ವಯ ಸಮಿತಿಗಳನ್ನು ರಚಿಸಲಾಗಿದೆ.

ಇಬ್ಬರೂ ನಾಯಕರು ಪಕ್ಷದ ಎಲ್ಲ ಹಿರಿಯ ಮುಖಂಡರೊಂದಿಗೆ ಜನವರಿ ಮಾಸದಾದ್ಯಂತ ರಾಜ್ಯಾದ್ಯಂತ ಒಟ್ಟಾಗಿ ಬಸ್‌ ಯಾತ್ರೆ ನಡೆಸಿದ ಬಳಿಕ ಉತ್ತರ ಮತ್ತು ದಕ್ಷಿಣ ಕರ್ನಾಟಕ ಭಾಗಗಳಲ್ಲಿ ಪ್ರತ್ಯೇಕ ಪ್ರವಾಸ ಕೈಗೊಳ್ಳಲಿದ್ದಾರೆ. ಆ ಪ್ರಕಾರ, ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುವ ಉತ್ತರ ಕರ್ನಾಟಕ ಭಾಗದ ಪ್ರವಾಸವನ್ನು ಯಶಸ್ವಿಗೊಳಿಸುವ ಉಸ್ತುವಾರಿ ಹೊತ್ತಿರುವ ಕೆಪಿಸಿಸಿ ಉಪಾಧ್ಯಕ್ಷ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರ ಅಧ್ಯಕ್ಷತೆಯಲ್ಲಿ 21 ಸದಸ್ಯರನ್ನೊಳಗೊಂಡ ಸಮನ್ವಯ ಸಮಿತಿ ರಚಿಸಲಾಗಿದೆ. ಅದೇ ರೀತಿ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದಲ್ಲಿ ನಡೆಯುವ ದಕ್ಷಿಣ ಕರ್ನಾಟಕ ಭಾಗದ ಪ್ರವಾಸದ ಉಸ್ತುವಾರಿ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌ ಅವರ ಅಧ್ಯಕ್ಷತೆಯಲ್ಲಿ 28 ಸದಸ್ಯರನ್ನೊಳಗೊಂಡ ಸಮನ್ವಯ ಸಮಿತಿ ರಚಿಸಲಾಗಿದೆ.

ಕಾಂಗ್ರೆಸ್‌ - ಪಾಕಿಸ್ತಾನ ಒಂದೇ: ಎನ್‌. ರವಿಕುಮಾರ್‌

ಉತ್ತರ ಕರ್ನಾಟಕ ಸಮನ್ವಯ ಸಮಿತಿ:

ಬಸವರಾಜ ರಾಯರೆಡ್ಡಿ (ಅಧ್ಯಕ್ಷ), ಮಾಜಿ ಉಪಸಭಾಪತಿ ವಿ.ಆರ್‌.ಸುದರ್ಶನ್‌, ಎಐಸಿಸಿ ಕಾರ್ಯದರ್ಶಿ ಎನ್‌.ಎಸ್‌.ಬೋಸರಾಜ್‌, ವಿಧಾನ ಪರಿಷತ್‌ನ ಹಾಲಿ ಸದಸ್ಯರಾದ ಪ್ರಕಾಶ್‌ ರಾಥೋಡ್‌, ಅರವಿಂದ ಅರಳಿ, ಚಂದ್ರಶೇಖರ ಪಾಟೀಲ್‌, ಸುನಿಲ್‌ ಗೌಡ ಪಾಟೀಲ್‌, ಭೀಮರಾವ್‌ ಪಾಟೀಲ್‌, ಶರಣಗೌಡ ಎ.ಪಾಟೀಲ್‌, ಮೋಹನ್‌ ಕೊಂಡಜ್ಜಿ, ಚನ್ನರಾಜ್‌ ಹಟ್ಟಿಹೊಳಿ, ಮಾಜಿ ಸದಸ್ಯರಾದ ಕೆ.ಎಸ್‌.ಎಲ್‌.ಸ್ವಾಮಿ, ರಾಜಾ ವೆಂಕಟಪ್ಪ ನಾಯಕ, ವಿಜಯ್‌ ಸಿಂಗ್‌, ತಿಪ್ಪಣ್ಣ ಕಮಕನೂರ್‌, ಶರಣಪ್ಪ ಮಟ್ಟೂರು, ಮಾಜಿ ಸಚಿವರಾದ ಆರ್‌.ಬಿ.ತಿಮ್ಮಾಪುರ್‌, ವೀರಕುಮಾರ್‌ ಪಾಟೀಲ್‌, ಮಾಜಿ ಸಂಸದ ಐ.ಜಿ.ಸವದಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮರಿಗೌಡ ಪಾಟೀಲ್‌, ಕಲಬುರಗಿ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಶಿವಾನಂದ ಹುನಗುಂಟಿ ಹಾಗೂ ಎಲ್ಲಾ ಮುಂಚೂಣಿ ಘಟಕ, ಸೆಲ್‌, ವಿಭಾಗಗಳ ರಾಜ್ಯ ಅಧ್ಯಕ್ಷರು.

ದಕ್ಷಿಣ ಕರ್ನಾಟಕ ಸಮನ್ವಯ ಸಮಿತಿ:

ಜಿ.ಸಿ.ಚಂದ್ರಶೇಖರ್‌ (ಅಧ್ಯಕ್ಷ), ವಿಧಾನ ಪರಿಷತ್‌ ಹಾಲಿ ಸದಸ್ಯರಾದ ಕೆ.ಗೋವಿಂದರಾಜ್‌, ಎಸ್‌.ರವಿ, ಮಂಜುನಾಥ ಭಂಡಾರಿ, ನಸೀರ್‌ ಅಹಮದ್‌, ಕೆ.ಅಬ್ದುಲ್‌ ಜಬ್ಬಾರ್‌, ಡಾ.ತಿಮ್ಮಯ್ಯ, ಮಧು ಜಿ.ಮಾದೇಗೌಡ, ಎಂ.ಎಲ್‌.ಅನಿಲ್‌ಕುಮಾರ್‌, ಆರ್‌.ರಾಜೇಂದ್ರ, ಎಂ.ಜಿ.ಗೂಳಿಗೌಡ, ಮಾಜಿ ಸದಸ್ಯರಾದ ಎಂ.ನಾರಾಯಣಸ್ವಾಮಿ, ಧರ್ಮಸೇನ, ಗಾಯತ್ರಿ ಶಾಂತೇಗೌಡ, ಆರ್‌.ವಿ.ವೆಂಕಟೇಶ್‌, ಎಂ.ಸಿ.ವೇಣುಗೋಪಾಲ್‌, ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ಕೆಪಿಸಿಸಿ ಉಪಾಧ್ಯಕ್ಷ ಪಿ.ವಿ.ಮೋಹನ್‌, ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವ, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್‌.

Follow Us:
Download App:
  • android
  • ios