Asianet Suvarna News Asianet Suvarna News

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳಿಗೆ ಸಹಕಾರ ಇರಲಿ: ಸಚಿವ ಸಂತೋಷ ಲಾಡ್‌

ರಾಜ್ಯದ ಜನರ ಹಿತಕ್ಕೋಸ್ಕರ ಕಾಂಗ್ರೆಸ್‌ ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಿಸಿದ್ದು, ಸಮಾಧಾನದಿಂದ ಅವುಗಳಿಗೆ ಸಹಕಾರ ನೀಡಿದರೆ ಸಮರ್ಪಕವಾಗಿ ಯೋಜನೆಗಳು ಜನರಿಗೆ ತಲುಪುತ್ತವೆ. ಅದನ್ನು ಬಿಟ್ಟು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಗ್ಯಾರಂಟಿ ಯೋಜನೆಗಳಿಂದ ತುರ್ತುಪರಿಸ್ಥಿತಿ ಬರಲಿದೆ ಎಂದು ಹೇಳುವುದು ಸೂಕ್ತವಲ್ಲ: ಸಂತೋಷ ಲಾಡ್‌ 

Cooperation for Congress Guarantee Schemes Says Minister Santosh Lad grg
Author
First Published Jun 7, 2023, 4:15 AM IST

ಧಾರವಾಡ(ಜೂ.07): ಘೋಷಣೆ ಮಾಡಿ ಹದಿನೈದು ದಿನಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್‌ ಜಾರಿಗೆ ತಂದಿದೆ. ನಮಗೆ ಕೇಳಿದ ರೀತಿಯಲ್ಲಿ ಬಿಜೆಪಿ ಯೋಜನೆಗಳ ಬಗ್ಗೆಯೂ ಅವರಿಗೆ ಪ್ರಶ್ನೆ ಮಾಡಲಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಮಾಧ್ಯಮಗಳಿಗೆ ಸವಾಲು ಹಾಕಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಜನರ ಹಿತಕ್ಕೋಸ್ಕರ ಕಾಂಗ್ರೆಸ್‌ ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಿಸಿದ್ದು, ಸಮಾಧಾನದಿಂದ ಅವುಗಳಿಗೆ ಸಹಕಾರ ನೀಡಿದರೆ ಸಮರ್ಪಕವಾಗಿ ಯೋಜನೆಗಳು ಜನರಿಗೆ ತಲುಪುತ್ತವೆ. ಅದನ್ನು ಬಿಟ್ಟು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಗ್ಯಾರಂಟಿ ಯೋಜನೆಗಳಿಂದ ತುರ್ತುಪರಿಸ್ಥಿತಿ ಬರಲಿದೆ ಎಂದು ಹೇಳುವುದು ಸೂಕ್ತವಲ್ಲ.

ಧಾರವಾಡ: ಸರಿಯಾದ ಮಾಹಿತಿ ನೀಡಿದ ಅಧಿಕಾರಿಗಳಿಗೆ ಸಚಿವ ಲಾಡ್‌ ಫುಲ್‌ಕ್ಲಾಸ್‌..!

ಈ ಮೊದಲು ಯೋಜನೆ ಕೊಡಲಾಗುವುದಿಲ್ಲ ಎಂದರು. ಈಗ ಘೋಷಣೆಯಂತೆ ಯೋಜನೆ ಜಾರಿ ಮಾಡಿದಾಗ ತುರ್ತು ಪರಿಸ್ಥಿತಿ ಎನ್ನುತ್ತಿದ್ದಾರೆ. ಪ್ರಧಾನಿಗಳು ಒಂಭತ್ತು ವರ್ಷಗಳ ಹಿಂದೆ ಘೋಷಿಸಿದ ಎಷ್ಟುಯೋಜನೆಗಳು ಜಾರಿಯಾಗಿವೆ ಎಂದು ಬಿಜೆಪಿ ಮುಖಂಡರಿಗೆ ತಾವು ಪ್ರಶ್ನೆ ಮಾಡಿ. ಕೇಂದ್ರದ ಲೋಪದೋಷಗಳ ಬಗ್ಗೆಯೂ ರಾಜ್ಯದಲ್ಲಿ ಚರ್ಚೆಯಾಗಲಿ ಎಂದರು.

ಜಿಲ್ಲಾ ಉಸ್ತುವಾರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯಾವ ಜಿಲ್ಲೆಯ ಉಸ್ತುವಾರಿ ನೀಡಿದರೂ ಮಾಡುತ್ತೇನೆ ಎಂದರು. ವಿನಯ ಕುಲಕರ್ಣಿ ಸಚಿವ ಸ್ಥಾನ ಸಿಗದ ವಿಚಾರವಾಗಿ ಈ ಬಗ್ಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಸಂಪುಟದಿಂದ ಕೈಬಿಟ್ಟಿದ್ದು ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುತ್ತೆ: ಪಕ್ಷದ ವಿರುದ್ಧವೇ ವಿನಯ್‌ ಕುಲಕರ್ಣಿ ಬಾಂಬ್‌

ಓಡಿಸ್ಸಾ ರೈಲು ದುರಂತ ವಿಚಾರವಾಗಿ ಮಾತನಾಡಿದ ಅವರು, ಅದೃಷ್ಟವಶಾತ್‌ ಈ ದುರಂತದಲ್ಲಿ ಕರ್ನಾಟಕದ ಯಾವ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ. 160 ಜನ ಓಡಿಸ್ಸಾದಲ್ಲಿದ್ದರು. ಅಲ್ಲಿ ಸಿಲುಕಿದವರನ್ನು ಕರ್ನಾಟಕಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ. ಆದರೆ, ಇನ್ನು ಕೆಲ ಜನರ ಮೃತ ದೇಹ ಪತ್ತೆಯಾಗುತ್ತಿಲ್ಲ. ಬೇರೆ ಬೇರೆ ರಾಜ್ಯದ ಜನರ ಮೃತ ದೇಹಗಳು ಪತ್ತೆಯಾಗುತ್ತಿಲ್ಲ ಎಂದ ಅವರು, ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಏತಕ್ಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ಮೆಲ್ನೋಟಕ್ಕೆ ಆಡಳಿತ ವ್ಯವಸ್ಥೆ ವಿಫಲವಾಗಿದೆ. ತಾಂತ್ರಿಕ ತೊಂದರೆಯಿಂದ ಈ ರೀತಿಯಾಗಿದೆ ಎಂದು ಹೇಳುತ್ತಿದ್ದಾರೆ ಎಂದರು.

ಲಾಡ್‌ ಪ್ರವಾಸ

ಕಾರ್ಮಿಕ ಸಚಿವರಾದ ನಂತರ ಸಂತೋಷ ಲಾಡ್‌ ಅವರು ಮಂಗಳವಾರ ಮೊದಲ ಬಾರಿಗೆ ಧಾರವಾಡದ ಮುರುಘಾಮಠಕ್ಕೆ ಆಗಮಿಸಿ ಮೃತ್ಯುಂಜಯ-ಮಹಾಂತ ಅಪ್ಪಗಳ ಆರ್ಶೀವಾದ ಪಡೆದರು. ನಂತರ ಧಾರವಾಡ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡ ದೀಪಕ ಚಿಂಚೋರೆ ಅವರನ್ನು ಭೇಟಿ ಮಾಡಿ ಉಪಾಹಾರ ಸೇವಿಸಿದರು. ಅಲ್ಲಿಂದ ಶಾಸಕ ವಿನಯ ಕುಲಕರ್ಣಿ ಮನೆಗೆ ಭೇಟಿ ನೀಡಿ ಶಿವಲೀಲಾ ಕುಲಕರ್ಣಿ ಹಾಗೂ ಅವರ ಮಕ್ಕಳೊಂದಿಗೆ ಚರ್ಚಿಸಿದರು. ತದ ನಂತರ ನವಲಗುಂದ ಶಾಸಕ ಎನ್‌.ಎಚ್‌. ಕೋನರಡ್ಡಿ ಅವರ ಮನೆಗೂ ಭೇಟಿ ನೀಡಿದರು. ಮಧ್ಯಾಹ್ನ ಅಳ್ನಾವರ ತಾಪಂ ಭವನದಲ್ಲಿ ಸಂಜೆ ಧಾರವಾಡದ ತಾಪಂ ಭವನದಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಕೊನೆಗೆ ರೀಗಲ್‌ ವೃತ್ತದಲ್ಲಿರುವ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿ ಪಕ್ಷದ ಮುಖಂಡರೊಂದಿಗೆ ಚರ್ಚಿಸಿದರು.

Follow Us:
Download App:
  • android
  • ios