Asianet Suvarna News Asianet Suvarna News

ಬಿರಿಯಾನಿ ನೀಡಿ ಮತಾಂತರ ಮಾಡ್ತಿದ್ದಾರೆ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ಶೋಷಿತ ಸಮುದಾಯಗಳನ್ನು ಟಾರ್ಗೆಟ್‌ ಮಾಡಿ ಮತಾಂತರ ಮಾಡಲಾಗುತ್ತಿದೆ. ಅದರಲ್ಲೂ ಮಾದಿಗ ಸಮುದಾಯದ ಜನ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು. 

Converting people by giving biryani Says Union Minister A Narayanaswamy gvd
Author
First Published Jun 20, 2023, 2:40 AM IST

ಚಿತ್ರದುರ್ಗ (ಜೂ.20): ಶೋಷಿತ ಸಮುದಾಯಗಳನ್ನು ಟಾರ್ಗೆಟ್‌ ಮಾಡಿ ಮತಾಂತರ ಮಾಡಲಾಗುತ್ತಿದೆ. ಅದರಲ್ಲೂ ಮಾದಿಗ ಸಮುದಾಯದ ಜನ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು. ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಆಂಧ್ರಪ್ರದೇಶದಲ್ಲಿ ಸಮುದಾಯದ ಶೇ.90ರಷ್ಟು, ತೆಲಂಗಾಣದಲ್ಲಿ ಶೇ.30ರಷ್ಟು ಮತಾಂತರ ನಡೆಯುತ್ತಿದೆ. ಚಿತ್ರದುರ್ಗದಲ್ಲಿ ಒಂದು ಬಿರಿಯಾನಿ ನೀಡಿ, ಮತಾಂತರ ಮಾಡುವುದರ ಮೂಲಕ ಬಡತನವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದರು. ಮತಾಂತರದಿಂದ ನಮ್ಮ ಐಡೆಂಟಿಟಿ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಬಲವಂತದ ಮತಾಂತರ ತಡೆಗೆ ಕಾನೂನು ರೂಪಿಸಿದ್ದೇವೆ. ಕಾಂಗ್ರೆಸ್‌ ಸರ್ಕಾರ ಇದರ ವಿರುದ್ಧ ಹೋಗುವುದಾದರೆ ಹೋಗಲಿ. ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.

ವಿದ್ಯಾರ್ಥಿಗಳಿಗೆ ಆಸಕ್ತಿ ಇರಬೇಕು, ಆಕರ್ಷಣೆಗಳಲ್ಲ: ಕಲಿಯುವ ಹಂತದಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಇರಬೇಕೇ ವಿನಹ ಆಕರ್ಷಣೆಗಳಲ್ಲ. ಭಾರತ ಶೇ.65ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಯುವ ಜನತೆಯನ್ನು ಹೊಂದಿದ್ದು, ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಬಹಳ ಅತ್ಯವಶ್ಯಕವಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು. ನಗರದ ಸರ್ಕಾರಿ ಕಲಾ ಕಾಲೇಜಿನ ಡಾ.ಬಿ.ಆರ್‌.ಅಂಬೇಡ್ಕರ್‌ ಜ್ಞಾನ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನೆಹರು ಯುವ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಯುವ ಉತ್ಸವ-ಪಂಚ್‌ ಪ್ರಣ್‌ ಮತ್ತು ಇಂಡಿಯಾ 2047 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ರಾಷ್ಟ್ರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಯುವ ಜನತೆಗೆ ಜವಾಬ್ದಾರಿ ಮನವರಿಕೆ ಮಾಡಿಕೊಡಲು ಉತ್ಸವ ಆಯೋಜಿಸಲಾಗಿದೆ ಎಂದರು.

ಬಡವರ ಅನ್ನಕ್ಕೆ ಕೇಂದ್ರ ಸರ್ಕಾರದಿಂದ ಅಡ್ಡಗಾಲು: ಸಚಿವ ತಿಮ್ಮಾಪುರ

ಪ್ರತಿಭೆ ಅನಾವರಣಕ್ಕೆ ಅವಕಾಶ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುವ ಶಕ್ತಿಯಲ್ಲಿ ಅಡಗಿರುವ ಜ್ಞಾನಕ್ಕೆ ಯಾವ ರೀತಿಯ ಸಹಕಾರ ಕೊಡಬೇಕು. ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಏನು? ಎಂಬುವುದರ ಕುರಿತು ಅರಿವು ಮೂಡಿಸುವುದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುವ ಶಕ್ತಿಗೆ ನೀಡಿರುವ ಅನೇಕ ಯೋಜನೆಗಳ ಪರಿಚಯ ಮಾಡಿಕೊಡಲಾಗುತ್ತಿದೆ. ಯುವಕರು ಶಿಕ್ಷಣ ಪಡೆಯುವ ಕಾಲಘಟ್ಟದಲ್ಲಿ ತಮ್ಮ ಪ್ರತಿಭೆಗೆ ಅನುಗುಣವಾಗಿ ಸರ್ಕಾರದ ಸೌಲಭ್ಯ ಸದುಪಯೋಗಪಡಿಸಿಕೊಂಡು ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಬೇಕು. ವಿದ್ಯಾರ್ಥಿಯು ತನ್ನ ಬದುಕಿನಲ್ಲಿ ಹಾಗೂ ತನ್ನಲ್ಲಿ ಬದಲಾವಣೆಯಾಗಬೇಕಾದರೆ ಪರಿಶ್ರಮದ ಅವಶ್ಯಕತೆ ಇದೆ. 

ಸಮುದಾಯ, ಕ್ಷೇತ್ರದ ಅಭಿವೃದ್ಧಿಗೆ ಯುವಕರ ಪ್ರತಿಭೆಗೆ ತಕ್ಕಂತೆ ಅವರು ಸ್ವಾಭಿಮಾನದ ಬದುಕು ಸಾಗಿಸಲು, ಸ್ವಾವಲಂಬಿಗಳಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಯೋಜನೆಗಳಿವೆ ಇಂತಹ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಮಾತನಾಡಿ, ವಿದ್ಯಾರ್ಥಿಗಳು ಕೀಳರಿಮೆಯನ್ನು ತೊರೆದು, ದೊಡ್ಡ ಕನಸು ಕಾಣಬೇಕು. ಪ್ರತಿಭೆ ಎನ್ನುವುದು ದೈವದತ್ತವಾದುದಲ್ಲ. ಶ್ರಮಪಟ್ಟು, ಅಭ್ಯಾಸದಿಂದ ಕರಗತ ಮಾಡಿಕೊಂಡಿರುವುದಾಗಿದೆ. ವ್ಯಕ್ತಿಯ ಚಿಂತನೆ, ಆಲೋಚನೆಗಳೇ ವ್ಯಕ್ತಿತ್ವವನ್ನೂ ರೂಪಿಸುತ್ತವೆ ಎಂದು ಹೇಳಿದರು. ನೆಹರು ಯುವ ಕೇಂದ್ರದ ಜಿಲ್ಲಾ ಯುವಜನಾಧಿಕಾರಿ ಎನ್‌.ಸುಹಾಸ್‌ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಪೂರ್ಣಗೊಂಡಿದೆ. 

ಮೇಕೆದಾಟು ಯೋಜನೆಯಿಂದ ಹಲವು ಜಿಲ್ಲೆಗೆ ನೀರು: ಡಿ.ಕೆ.ಶಿವಕುಮಾರ್‌

ಈ ಹಿನ್ನೆಲೆಯಲ್ಲಿ ಅಜಾದಿ-ಕಾ-ಅಮೃತ ಮಹೋತ್ಸವ ಎಂದು ಆಚರಿಸಲಾಗುತ್ತಿದ್ದು, 2021ರ ಮಾಚ್‌ರ್‍ 11ರಂದು ಆಜಾದಿ-ಕಾ-ಅಮೃತ ಮಹೋತ್ಸವಕ್ಕೆ ಚಾಲನೆ ನೀಡಲಾಗಿತ್ತು, ಈ ಆಚರಣೆ ಬರುವ ಆಗಸ್ಟ್‌ 15ಕ್ಕೆ ಮುಕ್ತಾಯಗೊಳ್ಳಲಿದೆ. ಇನ್ನೂ 25 ವರ್ಷಗಳ ನಂತರ ನಾವು 100ನೇ ಸ್ವಾತಂತ್ರ್ಯೋತ್ಸವ ಆಚರಿಸಲಿದ್ದೇವೆ. ಈ 25 ವರ್ಷಗಳ ಕಾಲಾವಧಿ ದೇಶದ ಅಭಿವೃದ್ಧಿಗೆ ಬಹಳ ಮುಖ್ಯ. ಇಂದಿನ ಯುವ ಜನತೆ ದೇಶ ಕಟ್ಟುವ ಕಡೆ ಗಮನ ಸೆಳೆಯುವ ನಿಟ್ಟಿನಲ್ಲಿ ಯುವ ಜನತೆಯಲ್ಲಿ ದೇಶಭಕ್ತಿ, ದೇಶಾಭಿಮಾನ ಬೆಳೆಸುವ ಸಲುವಾಗಿ, ದೇಶವನ್ನು ಇತರೆ ಅಭಿವೃದ್ಧಿ ಹೊಂದಿದ ದೇಶಗಳ ಸ್ಥಾನಕ್ಕೆ ಕೊಂಡ್ಯೊಯ್ಯಲು ಪ್ರೇರೇಪಣೆ ನೀಡಲು ದೇಶದಾದ್ಯಂತ ಯುವ ಉತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು.

Follow Us:
Download App:
  • android
  • ios