ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಸಹಕರಿಸಿ: ಶಾಸಕ ಸಿ.ಎಸ್.ನಾಡಗೌಡ
ಕ್ಷೇತ್ರದಲ್ಲಿ ಭ್ರಷ್ಟಾಚಾರ ರಹಿತ ಮತ್ತು ಜನತೆ ಮೆಚ್ಚುವ ಆಡಳಿತ ನಡೆಸಬೇಕೆಂಬುದೇ ನನ್ನ ಗುರಿ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಸ್ಪಂದಿಸಿ ಸಾರ್ವಜನಿಕರಿಗೆ ತೊಂದರೆ, ತೊಡಕಾಗದಂತೆ ಉತ್ತಮ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಸೂಚಿಸಿದರು.
ಮುದ್ದೇಬಿಹಾಳ (ಜೂ.01): ಕ್ಷೇತ್ರದಲ್ಲಿ ಭ್ರಷ್ಟಾಚಾರ ರಹಿತ ಮತ್ತು ಜನತೆ ಮೆಚ್ಚುವ ಆಡಳಿತ ನಡೆಸಬೇಕೆಂಬುದೇ ನನ್ನ ಗುರಿ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಸ್ಪಂದಿಸಿ ಸಾರ್ವಜನಿಕರಿಗೆ ತೊಂದರೆ, ತೊಡಕಾಗದಂತೆ ಉತ್ತಮ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಸೂಚಿಸಿದರು. ತಾಪಂ ಸಭಾ ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಎಲ್ಲ ಅಧಿಕಾರಿಗಳು ಈ ಹಿಂದೆ ನಡೆದಂತೆ ಮುಂದೆ ನಡೆಯಲು ಬಿಡುವುದಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿ ಇಲ್ಲವೆಂದಾದರೆ ಬೇರೆ ರೀತಿಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ಸಹ ನೀಡಿದರು.
ತಾಳಿಕೋಟಿ, ಮುದ್ದೇಬಿಹಾಳ, ನಾಲತವಾಡ, ಕಾಳಗಿ ಸೇರಿದಂತೆ ಇತರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರಿಗೆ, ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ದೊರಕುತ್ತಿಲ್ಲ. ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲ ವೈದ್ಯರು ಹಾಗೂ ಸಿಬ್ಬಂದಿ ಸಕಾಲಕ್ಕೆ ಬರುವುದಿಲ್ಲ ಎಂಬ ದೂರು ಕೇಳಿ ಬರುತ್ತಿದೆ. ಇನ್ನು ಮುಂದೆ ಹಾಗಾದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕಾ ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ ಅವರು ಮಾತನಾಡಿ, ಈಗಾಗಲೇ ಎಲ್ಲ ತಾಲೂಕುಗಳಲ್ಲಿ ಅಂಗನವಾಡಿ ಮಕ್ಕಳಿಗಾಗಿ ಪ್ರತ್ಯೇಕ ಎನ್‌ಆರ್‌ಸಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ.
ಏಕಾಏಕಿ ಕುಸಿತ ಕಂಡ ರೇಷ್ಮೆ ಗೂಡಿನ ಧಾರಣೆ: ಕಂಗಾಲಾದ ರೇಷ್ಮೆ ಬೆಳೆಗಾರರು
ಆದರೆ ನಮ್ಮಲ್ಲಿನ್ನೂ ಸ್ಥಾಪನೆಯಾಗಿಲ್ಲ. ತುರ್ತು ನಿಗಾ ಘಟಕದ ಚಿಕಿತ್ಸೆ ನೀಡಲು ಆಂಬ್ಯುಲೆನ್ಸ್ ಕೊರತೆ ಸಹ ಇದೆ. ತಜ್ಞ ವೈದ್ಯರ ಕೊರತೆಯೂ ಇದೆ. ವಸತಿ ನಿಲಯವೂ ಇಲ್ಲ ಎಂದು ಶಾಸಕರ ಗಮನ ಸೆಳೆದರು. ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆ, ಪುರಸಭೆ, ತಾಪಂ ಸೇರಿದಂತೆ ಗ್ರಾಪಂ ವ್ಯಾಪ್ತಿಯಲ್ಲಿ ಎಸ್‌ಇಪಿಟಿಎಸ್‌ಪಿ ಯೋಜನೆ ಅನುದಾನದ ಹಣ ದುರುಪಯೋಗವಾಗಿದೆ. ಇನ್ನು ಮುಂದೆ ಹಾಗೆ ಮಾಡದೇ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಪಿಡಬ್ಲ್ಯೂಡಿ ಸೆಕ್ಷೆನ್ ಅಧಿಕಾರಿ ಸಂದೀಪ ಕೂಡ್ಲೂರ ಅವರಿಗೆ ತರಾಟಗೆ ತೆಗೆದುಕೊಂಡರು.
ತಾಲೂಕಾ ಕೃಷಿ ಅಧಿಕಾರಿ ಸುರೇಶ ಭಾಕಟಿ ಕೃಷಿ ಚಟುವಟಿಕೆ ಬಗ್ಗೆ ವಿವರಿಸಿ, ಸರ್ಕಾರದಿಂದ ಸಬ್ಸಿಡಿಯಲ್ಲಿ ರೈತರಿಗೆ ಕೊಡಮಾಡುವ ವಿವಿಧ ಯಂತ್ರೋಪಕರಣಗಳನ್ನು ಅರ್ಹ ರೈತರಿಗೆ ಒದಗಿಸಲಾಗಿದೆ. ರೈತರಿಂದ ತಾಡಪಾಲಳಿಗೆ ಬಹುಬೇಡಿಕೆ ಇದ್ದು, ಸರ್ಕಾರದಿಂದ ಪೂರೈಸಿದರೆ ಸೂಕ್ತ ಎಂದು ಹೇಳಿದರು. ಗ್ರಾಮೀಣ ಪ್ರದೇಶದ ಜನರಿಗೆ ಮನೆ ಮನೆಗೆ ನಲ್ಲಿ ಮೂಲಕ ನೀರು ಒದಗಿಸಬೇಕು ಎನ್ನುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಕಳಪೆಯಿಂದಾಗಿ ಹಳ್ಳ ಹಿಡಿದು ಹೋಗಿದೆ. ಈ ನಿಟ್ಟಿನಲ್ಲಿ ಜೆಜೆಎಂ ಯೋಜನೆ ಕಾಮಗಾರಿ ಬಗ್ಗೆ ಸಮಗ್ರ ತನಿಖೆ ನಡೆಸಿ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಶಾಸಕರು ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಪ್ರಭಾರಿ ಎಇಇ ಆರ್.ಎಸ್.ರೇಗೌಡರವರಿಗೆ ಸೂಚಿಸಿದರು.
2013ರಿಂದ 18ರ ಅವಧಿಯಲ್ಲಿ ಪ್ರತಿ ಗ್ರಾಮದಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಬಹು ಹಳ್ಳಿ ಕುಡಿಯುವ ನೀರಿನ ಘಟಕಗಳು ಕೆಟ್ಟಿವೆ. ದುರಸ್ಥಿಗೊಳಿಸಲು ಯಾರೂ ಮುಂದಾಗಿಲ್ಲ. ತಕ್ಷಣ ಅವುಗಳ ದುರಸ್ಥಿಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ನೀರಾವರಿ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ತಾಪಂ ಪ್ರಭಾರಿ ಇಒ ಎಸ್.ಹಿರೇಮಠ, ತಾಳಿಕೋಟಿ ತಾಪಂ ಇಒ ಬಸವಂತ್ರಾಯಗೌಡ ಬಿರಾದಾರ, ತಾಳಿಕೋಟಿ ತಹಸೀಲ್ದಾರ್ ಕೀರ್ತಿ ಚಾಲಕ, ನಿಡಗುಂದಿ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಆಲಮಟ್ಟಿಕೃಷ್ಣಾ ಜಲಭಾಗ್ಯದ ಎಎಲ್‌ಬಿಸಿ ವಿಭಾಗದ ಇಇ ರಾಮನಗೌಡ ಹಳ್ಳೂರ ಸೇರಿದಂತೆ ಹಲವರು ಇದ್ದರು.
ಸರ್ಕಾರಿ ಶಾಲೆ ಉಳಿದರೆ ಮಾತ್ರ ಸರ್ವರಿಗೂ ಶಿಕ್ಷಣ ಸಾಧ್ಯ: ಶಾಸಕ ಕೊತ್ತೂರು ಮಂಜುನಾಥ್
ಸಾಮೂಹಿಕ ವಿವಾಹ ನೆಪದಲ್ಲಿ ವಂಚನೆ: ಸರಳ, ಸಾಮೂಹಿಕ ವಿವಾಹ ಮಾಡತ್ತೇವೆಂದು ಹೇಳುತ್ತ ಯೋಜನೆಗಳಲ್ಲಿ ಅನುದಾನದ ನೆರವು ಪಡೆದು ವಂಚಿಸುತ್ತಿರುವ ಮಾಹಿತಿ ಇದೆ. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಸರ್ಕಾರದ ಹಣ ದುಡ್ಡು ಬಳಸಿಕೊಂಡು ವಂಚಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಹಸೀಲ್ದಾರ್ ಟಿ.ರೇಖಾ ಅವರಿಗೆ ಶಾಸಕ ನಾಡಗೌಡರು ಸೂಚನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಮೀನುಗಾರಿಕೆ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.