Asianet Suvarna News Asianet Suvarna News

ಚನ್ನಪಟ್ಟಣ ಉಪಚುನಾವಣೆ: ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದು ಮತ್ತೆ ಎನ್‌ಡಿಎ ಮತ್ತೆ ಸೇರುವೆ, ಯೋಗೇಶ್ವ‌ರ್

ಉಪಚುನಾವಣೆಗೆ ನಾನು ಸಹ ಒಬ್ಬ ಪ್ರಬಲ ಆಕಾಂಕ್ಷಿ. ಎಚ್.ಡಿ.ಕುಮಾರಸ್ವಾಮಿ ಮತ್ತು ನಾನು ರಾಜಕೀಯವಾಗಿ ಪರಸ್ಪರ ವಿರೋಧಿಯಾಗಿದ್ದೆವು. ಬಿಜೆಪಿ-ಜೆಡಿಎಸ್ ಮೈತ್ರಿ ಬಳಿಕ ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಸಚಿವರಾದರು. ಅವರಿಗೆ ಸಮೀ ಪದ ಪ್ರತಿಸ್ಪರ್ಧಿ ನಾನೇ. ಹೀಗಾಗಿ ಅವರಿಂದ ತೆರವಾದ ಮೇಲೆ ನನಗೆ ಬಿಟ್ಟುಕೊಡಬೇಕು ಎಂಬುದು ನನ್ನ ವಾದ ಎಂದ ಮಾಜಿ ಸಚಿವ ಸಿ.ಪಿ.ಯೋಗೇಶ್ವ‌ರ್ 

Contested as an independent in channapatna and won and rejoined the NDA says cp yogeshwar grg
Author
First Published Aug 13, 2024, 9:11 AM IST | Last Updated Aug 13, 2024, 9:56 AM IST

ಬೆಂಗಳೂರು(ಆ.13):  ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಎನ್‌ಡಿಎ ಒಮ್ಮತದ ಅಭ್ಯರ್ಥಿ ನಾನೇ ಆಗುವ ವಿಶ್ವಾಸ ಇದೆ. ಒಂದು ವೇಳೆ ಆಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದು ಮತ್ತೆ ಎನ್ ಡಿಎ ಸೇರುವೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಸಿ.ಪಿ.ಯೋಗೇಶ್ವ‌ರ್ ಅವರು ಹೇಳಿದ್ದಾರೆ. ಸೋಮವಾರ ಪಕ್ಷದ ವರಿಷ್ಠರ ಭೇಟಿಗಾಗಿ ದೆಹಲಿಗೆ ತೆರಳುವ ಮೊದಲು ಅವರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಉಪಚುನಾವಣೆಗೆ ನಾನು ಸಹ ಒಬ್ಬ ಪ್ರಬಲ ಆಕಾಂಕ್ಷಿ. ಎಚ್.ಡಿ.ಕುಮಾರಸ್ವಾಮಿ ಮತ್ತು ನಾನು ರಾಜಕೀಯವಾಗಿ ಪರಸ್ಪರ ವಿರೋಧಿಯಾಗಿದ್ದೆವು. ಬಿಜೆಪಿ-ಜೆಡಿಎಸ್ ಮೈತ್ರಿ ಬಳಿಕ ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಸಚಿವರಾದರು. ಅವರಿಗೆ ಸಮೀ ಪದ ಪ್ರತಿಸ್ಪರ್ಧಿ ನಾನೇ. ಹೀಗಾಗಿ ಅವರಿಂದ ತೆರವಾದ ಮೇಲೆ ನನಗೆ ಬಿಟ್ಟುಕೊಡಬೇಕು ಎಂಬುದು ನನ್ನ ವಾದ ಎಂದರು.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಸಿಗದಿದ್ದರೆ ಸಿ.ಪಿ.ಯೋಗೇಶ್ವರ್‌ ಬಂಡಾಯ?

ಕುಮಾರಸ್ವಾಮಿ ಮತ್ತು ನಮ್ಮ ಪಕ್ಷದ ವರಿಷ್ಠರು ಏನು ತೀರ್ಮಾನ ಮಾಡಲಿದ್ದಾರೆ ನೋಡೋಣ. ಉಪಚುನಾವಣೆ ಸಮೀಪಿಸು ತ್ತಿದೆ. ಚುನಾವಣೆ ಯಾವುದೇಸಂದರ್ಭದಲ್ಲಿ ಘೋಷಣೆಯಾಗಬಹುದು. ಕಾಂಗ್ರೆಸ್ ಸಹ ತುಂಬಾ ಚಟುವಟಿಕೆಯಿಂದ ಇದೆ. ಡಿ.ಕೆ. ಶಿವಕುಮಾರ್ ಅವರು ಆ.15ರಂದು ಚನ್ನಪಟ್ಟಣಕ್ಕೆ ಬಂದು ರಾಷ್ಟ್ರಧ್ವಜ ಅನಾವರಣ ಮಾಡುವುದಾಗಿ ಹೇಳಿದ್ದಾರೆ. ಈ ಮೂಲಕ ಅವರು ಸ್ಪರ್ಧಿಸುವ ಬಗ್ಗೆ ಸಂದೇಶ ಕಳುಹಿ ಸಿದ್ದಾರೆ. ಇದನ್ನು ನೋಡಿದಾಗ ನಾವು ಸುಮ್ಮನೆ ಇರುವುದು ಸರಿನಾ? ಕುಮಾರ ಸ್ವಾಮಿಸುಮ್ಮನೆ ಇದ್ದಾರೆ. ನಮ್ಮ ಪಕ್ಷದವರೂ ಸುಮ್ಮನಿದ್ದಾರೆ. ಆದರೆ, ಯಾವುದೇ ಕಾರ ಣಕ್ಕೂ ಕಾಂಗ್ರೆಸ್‌ನವರಿಗೆ ಈ ಕ್ಷೇತ್ರ ದಕ್ಕಬಾರದು ಎನ್ನುವುದು ನನ್ನ ಹೋರಾಟ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ-ಜೆಡಿಎಸ್‌ ಮೈತ್ರಿ ಖತಂ ಎಂದ ಯೋಗೇಶ್ವರ್ : ಡಿ.ಕೆ. ಶಿವಕುಮಾರ್‌ ಹೇಳಿದ್ದಿಷ್ಟು

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯೋಗೇ ಶ್ವರ್, ಕುಮಾರಸ್ವಾಮಿಅವರಿಗೆಮುಂಗೋಪ ಇರಬಹುದು. ಅವರು ಒಪ್ಪುತ್ತಾರೆ ಎನ್ನುವ ನಂಬಿಕೆ ಇದೆ. ನಮ್ಮ ವರಿಷ್ಠರು ವಿಶ್ವಾಸ ಇಟ್ಟು ಕೇಂದ್ರ ಸಚಿವರನ್ನಾಗಿ ಮಾಡಿದ್ದಾರೆ. ವಿಧಾನ ಸಭೆ ಸೋಲನುಭವಿಸಿದ ಬಳಿಕ ಮೈತ್ರಿಗೆ ಚಾಲನೆ ನೀಡಿದ್ದೇ ನಾನು. ಅದು ಫಲನೀಡಿ ತು. ಹಾಸನದ ಜೆಡಿಎಸ್‌ನಲ್ಲಿ ಏನಾಗಿದೆ. ಪಕ್ಷದವರು ಸಹಕರಿಸದೇ ಇದ್ದುದಕ್ಕೆ ಏನಾ ಯಿತು ಎಂದು ನೋಡಿದ್ದೀರಿ. ಇಲ್ಲಿ ನಾನು ಸಹಕರಿಸದಿದ್ದರೆ ಏನಾಗುತ್ತಿತ್ತು? ರಾಜಕೀ ಯದಲ್ಲಿ ದೋಷಾರೋಪಣೆ ಇರುತ್ತದೆ. ಅದನ್ನು ಬಿಟ್ಟು ಮೈತ್ರಿ ಮಾಡಲಾಗಿದೆ ಎಂದರು.

ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ನನ್ನ ಕ್ಷೇತ್ರದ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಯಾವುದೇ ಚಿಹ್ನೆಯ ಅಡಿ ನಿಂತರೂ ಗೆಲ್ಲಿಸು ತ್ತಾರೆ. ಕ್ಷೇತ್ರದ ಸಮಾನ ಮನಸ್ಕ ವೇದಿಕೆ ಯಿಂದಲೂ ಸ್ಪರ್ಧೆಗೆ ಒತ್ತಾಯ ಇದೆ. ಮಾತೃಪಕ್ಷಗಳು ಅವಕಾಶ ನೀಡದಿದ್ದಾಗ, ಜನರು ಕೈಹಿಡಿದಿದ್ದಾರೆ. ಹೀಗಾಗಿ ಚುನಾ ವಣೆಗೆ ಸ್ಪರ್ಧೆ ಮಾಡಬೇಕು ತೀರ್ಮಾನ ಕೈಗೊಂಡಿದೆ. ದೆಹಲಿಗೆ ತೆರಳುತ್ತಿದ್ದೇನೆ. ಈಗಾಗಲೇ ರಾಷ್ಟ್ರ ನಾಯಕರ ಜತೆ ಮಾತ ನಾಡಿದ್ದೇನೆ. ಕುಮಾರಸ್ವಾಮಿ ಒಪ್ಪಿಕೊಂಡಿಲ್ಲ ಎಂದರೆ ಮುಂದೆ ನೋಡೋಣ ಎಂದು ಮಾರ್ಮಿಕವಾಗಿ ಹೇಳಿದರು.

Latest Videos
Follow Us:
Download App:
  • android
  • ios