ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಖಚಿತ: ಜನಾರ್ದನ ರೆಡ್ಡಿ

ಇಲ್ಲಿನ ವಿಧಾನಸಭಾ ಕ್ಷೇತ್ರದಿಂದ ಕಲ್ಯಾಣ ಪ್ರಗತಿ ಪಕ್ಷದಿಂದ ಸ್ಪರ್ಧಿಸುವುದು ಖಚಿತ. ಇಟ್ಟಹೆಜ್ಜೆ ವಾಪಸ್‌ ತೆಗೆಯುವುದಿಲ್ಲ ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು. 

Contest from Gangavati Constituency is Sure Says Janardhan Reddy gvd

ಗಂಗಾವತಿ (ಮಾ.05): ಇಲ್ಲಿನ ವಿಧಾನಸಭಾ ಕ್ಷೇತ್ರದಿಂದ ಕಲ್ಯಾಣ ಪ್ರಗತಿ ಪಕ್ಷದಿಂದ ಸ್ಪರ್ಧಿಸುವುದು ಖಚಿತ. ಇಟ್ಟ ಹೆಜ್ಜೆ ವಾಪಸ್‌ ತೆಗೆಯುವುದಿಲ್ಲ ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿರುವ ಯಾವ ಪಕ್ಷದವರು ಬಂದು ಗಂಗಾವತಿ ಕ್ಷೇತ್ರದಲ್ಲಿ ಸ್ಪರ್ಧಿಸಲಿ, ಯಾವ ನಾಯಕರು ಸ್ಪರ್ಧಿಸಿದರೂ ಹೆದರುವವನು ನಾನಲ್ಲ. ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರುವ ಲಕ್ಷಣಗಳಿವೆ. ಬರುವ ಪಕ್ಷಕ್ಕೆ ಕೈಜೋಡಿಸಿ ಸರ್ಕಾರ ರಚಿಸುವುದಾಗಿ ವಿಶ್ವಾಸ ವ್ಯಕ್ತ ಪಡಿಸಿದರು.

ಗಣೇಶ ದಾಖಲಾತಿ ನೀಡಲಿ: ಗಣಿ ಹಗರಣದ ಬಗ್ಗೆ ಇತ್ತೀಚೆಗೆ ಪ್ರಸ್ತಾಪಿಸಿರುವ ಉದ್ಯಮಿ ಟಪಾಲ್‌ ಗಣೇಶ ತಮ್ಮ ವಿರುದ್ಧ ಇರುವ ದಾಖಲೆಗಳನ್ನು ನೀಡಲಿ ಎಂದು ಜನಾರ್ದನ ರೆಡ್ಡಿ ಸವಾಲು ಹಾಕಿದರು. ಅಂತೆ ಕಂತೆ ಸುದ್ದಿ ಹೇಳುವುದರಲ್ಲಿ ಅರ್ಥ ಇಲ್ಲ. ದಾಖಲೆಗಳನ್ನು ನೀಡಲಿ. ತಾವು ಪರಿಶೀಲನೆ ಮಾಡಿ ಉತ್ತರ ನೀಡುತ್ತೇನೆ. ಟಪಾಲ್‌ ಗಣೇಶ ಅವರ ಬಗ್ಗೆ ಜನರೇ ಉತ್ತರ ನೀಡುತ್ತಾರೆ ಎಂದರು. ಪಕ್ಷದ ಜಿಲ್ಲಾಧ್ಯಕ್ಷ ಮನೋಹರಗೌಡ, ಯಮನೂರು ಚೌಡ್ಕಿ, ವೀರೇಶ ಸೂಳೇಕಲ, ಸಂಗಮೇಶ ಬಾದವಾಡಗಿ, ವೀರೇಶ ಬಲಕುಂದಿ, ಅಮರಜ್ಯೋತಿ ನರಸಪ್ಪ, ಶಿವು ಆದೋನಿ, ಡಿ.ಕೆ. ಆಗೋಲಿ, ನಾಗರಾಜ್‌ ಬಿ., ಚಂದ್ರಪ್ಪ ಜಿಲಾನಿ ಪಾಷಾ ಸೈಯದ್‌ ಅಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಹುಮತದೊಡನೆ ಬಿಜೆಪಿ ಮತ್ತೆ ಅಧಿಕಾರಕ್ಕೆ: ಕೆ.ಎಸ್‌.ಈಶ್ವರಪ್ಪ

ಅಡ್ಡಗೋಡೆ ಮೇಲೆ ದೀಪ ಇಟ್ಟ ರೆಡ್ಡಿ: ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರನ ಲಂಚ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅಡ್ಡಗೋಡೆ ಮೇಲೆ ದೀಪ ಇಟ್ಟು ಪ್ರತಿಕ್ರಿಯಿಸಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚೆನ್ನಗಿರಿ ಕ್ಷೇತ್ರದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಪ್ರಶಾಂತ ಲಂಚ ಪ್ರಕರಣ ಸುದ್ದಿಯಲ್ಲಿದೆ. ಬಳ್ಳಾರಿಯಿಂದ ನಾನು ಹೊರಗೆ ಬರಲು ಯಾರು ಕೃತ್ಯ ಎಸಗಿದರು ಎನ್ನುವುದನ್ನು ಹೇಳುವ ಅಗತ್ಯವಿಲ್ಲ ಎಂದರು. ಈ ವ್ಯವಸ್ಥೆ ಹೇಗಿದೆ ಎಂದರೆ ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರು ಕಾಲು ಇಟ್ಟು ಬಂದಾಗ ಮಾತ್ರ ರಾಜಕೀಯದಲ್ಲಿ ಮುಂದುವರಿಯಲು ಸಾಧ್ಯ ಎಂದು ಪ್ರತಿಕ್ರಿಯಿಸಿದರು.

ಗ್ರಾಮಗಳಲ್ಲಿ ಪ್ರಚಾರ ಆರಂಭಿಸಿದ ರೆಡ್ಡಿ: ಪ್ರತಿಯೊಬ್ಬ ವ್ಯಕ್ತಿಗೂ ‘ಬಸವೇಶ್ವರ ಆರೋಗ್ಯ ಯೋಜನೆ’ಯಡಿ .1ರಿಂದ 10 ಲಕ್ಷ ವಿಮೆ ನೀಡುವುದಾಗಿ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ‘ಕಲ್ಯಾಣ ಪ್ರಗತಿ ಪಕ್ಷ’ದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದಾಸನಾಳ ಗ್ರಾಮದ ಕಾಶಿ ಶಿವಲಿಂಗೇಶ್ವರ ದೇವಸ್ಥಾನ ಬಳಿ ‘ಗಾಲಿ ಜನಾರ್ದನ ರೆಡ್ಡಿ ನಡೆ ಗ್ರಾಮೀಣಾಭಿವೃದ್ಧಿ ಕಡೆ’ ಎನ್ನುವ ಪ್ರಚಾರ ಕಾರ್ಯ ಆರಂಭಿಸಿದರು.

ವಾರ್ಡ್‌ ನಂ. 2ರ ಆಂಜನೇಯ ದೇಗುಲ ಮತ್ತು ನಾಯಕರ ಓಣಿಯ ದುರ್ಗಮ್ಮ ದೇವಿ ದರ್ಶನ ಮಾಡಿದರು. ಈ ಸಂದರ್ಭದಲ್ಲಿ ಉಡಮಕಲ, ಗಡ್ಡಿ, ಬಂಡ್ರಾಳ್‌, ಚಿಕ್ಕಬೆಣಕಲ, ಲಿಂಗದಹಳ್ಳಿ, ಎಚ್‌ಆರ್‌ಜಿ ಕ್ಯಾಂಪ್‌, ಹೇಮಗುಡ್ಡ ಗ್ರಾಮಗಳಲ್ಲಿ ಪ್ರಚಾರ ಮತ್ತು ಸೇರ್ಪಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮಗಳ ಅಭಿವೃದ್ಧಿಯೇ ನಮ್ಮ ಮೂಲಮಂತ್ರ. ರೈತರಿಗೆ ಧೈರ್ಯ ತುಂಬಲು ವಾರ್ಷಿಕ .15 ಸಾವಿರ ನಗದನ್ನು ನೀಡಲಾಗುವುದು. ಗ್ರಾಮಗಳಲ್ಲಿ ರೈತ ಕೇಂದ್ರ ತೆರೆದು ಬೀಜ, ಗೊಬ್ಬರ, ಕೃಷಿಗೆ ಬಳಸುವ ಸಲಕರಣೆಗಳನ್ನು ಪೂರೈಸುವುದು.

ರಾಜಕಾರಣ ಮಾಡುವುದು ಮೋಜಿಗಾಗಲ್ಲ: ಸಚಿವ ಜೆ.ಸಿ.ಮಾಧುಸ್ವಾಮಿ

ವಿದ್ಯಾಭ್ಯಾಸ ಮುಗಿಸಿದ ಯುವಕರಿಗೆ ಉದ್ಯೋಗ ಸಿಗುವವರೆಗೂ ಪ್ರತಿ ತಿಂಗಳಿಗೆ .2500 ನಿರುದ್ಯೋಗ ಭತ್ಯೆ, ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಒಟ್ಟು 4 ಸಮಾನಾಂತರ ಜಲಾಶಯ ನಿರ್ಮಾಣ, ಕನಕಗಿರಿ ಬಳಿಯ ನವಲಿಯಲ್ಲಿ 32 ಟಿಎಂಸಿ ಸಾಮರ್ಥ್ಯ ಜಲಾಶಯ ನಿರ್ಮಾಣ, ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯಗಳು, ಸಕಲ ಧರ್ಮದ ದೇಗುಲಗಳ ಅಭಿವೃದ್ಧಿ, ಸರ್ಕಾರದ ಹಲವು ಇಲಾಖೆಗಳಿಂದ ಸಿಗುವ ಸೌಲಭ್ಯಗಳಾದ ವೃದ್ಧಾಪ್ಯ, ವಿಧವೆ, ಅಂಗವಿಕಲ ವೇತನಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.

Latest Videos
Follow Us:
Download App:
  • android
  • ios