ಕಾಂಗ್ರೆಸ್‌ನಿಂದ ಮಾತ್ರ ಸಂವಿಧಾನ ರಕ್ಷಣೆ: ಶಾಸಕ ಎಚ್.ಕೆ.ಪಾಟೀಲ್
ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಸದಾಶಯ ಪಾಲಿಸುವುದರ ಜತೆಗೆ ಶೋಷಿತ ಜನಾಂಗದ ರಕ್ಷಣೆ ಸಮ ಸಮಾಜ ನಿರ್ಮಾಣ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯವಿದ್ದು, ಬರಲಿರುವ ದಿನಗಳಲ್ಲಿ ಈ ಆಶಯಕ್ಕೆ ಧಕ್ಕೆ ತರುವ ಪ್ರಯತ್ನ ನಡೆದಿದ್ದು, ಜಾಗ್ರತರಾಗಿ ಸಂವಿಧಾನ ರಕ್ಷಣೆಗೆ ಮುಂದಾಗಬೇಕು ಎಂದು ಶಾಸಕ ಎಚ್.ಕೆ. ಪಾಟೀಲ್ ಹೇಳಿದರು.
ಗದಗ (ಏ.15): ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಸದಾಶಯ ಪಾಲಿಸುವುದರ ಜತೆಗೆ ಶೋಷಿತ ಜನಾಂಗದ ರಕ್ಷಣೆ ಸಮ ಸಮಾಜ ನಿರ್ಮಾಣ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯವಿದ್ದು, ಬರಲಿರುವ ದಿನಗಳಲ್ಲಿ ಈ ಆಶಯಕ್ಕೆ ಧಕ್ಕೆ ತರುವ ಪ್ರಯತ್ನ ನಡೆದಿದ್ದು, ಜಾಗ್ರತರಾಗಿ ಸಂವಿಧಾನ ರಕ್ಷಣೆಗೆ ಮುಂದಾಗಬೇಕು ಎಂದು ಶಾಸಕ ಎಚ್.ಕೆ. ಪಾಟೀಲ್ ಹೇಳಿದರು. ಡಾ. ಅಂಬೇಡ್ಕರ್ ಜಯಂತಿ ಅಂಗವಾಗಿ ಕಾಂಗ್ರೆಸ್ ಕಾರ್ಯಾಲಯದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಅಂಬೇಡ್ಕರ ಅವರು ಎಲ್ಲ ವರ್ಗಗಳು ಒಪ್ಪಿತ ಸಮ ಸಮಾಜ ನಿರ್ಮಾಣದ ಆಶಯದೊಂದಿಗೆ ಪ್ರಜಾಪ್ರಭುತ್ವ ಭದ್ರಗೊಳಿಸುವ ಸಂವಿಧಾನ ರೂಪಿಸಿ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಶೋಷಿತ ವರ್ಗಗಳು ಸೇರಿ ದುರ್ಬಲರನ್ನು ಸಬಲರನ್ನಾಗಿ ಮಾಡಿ ಶಾಂತಿ ಸೌಹಾರ್ದಯುತ ಸಮಾಜ ನಿರ್ಮಾಣ ಮಾಡುವ ಸಂವಿಧಾನಕ್ಕೆ ಧಕ್ಕೆ ಬಂದಿದೆ. ರಾತ್ರೋರಾತ್ರಿ ಮೀಸಲಾತಿ ಬದಲಾಯಿಸುತ್ತಾರೆ. ಬಡವರಿಗೆ ಉಚಿತವಾಗಿ ನೀಡುವುದನ್ನು ವಿರೋಧಿಸುತ್ತಾರೆ. ಇದಕ್ಕೆ ಸರಕಾರದ ಬಳಿ ಹಣವಿಲ್ಲ ಎನ್ನುತ್ತಾರೆ. ಆದರೆ, ಶ್ರೀಮಂತರು ತೆಗೆದುಕೊಂಡ 10 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡುತ್ತಾರೆ. ಬಿಜೆಪಿ ಸರಕಾರ ಬಡವರ ಹಾಗೂ ಸಂವಿಧಾನ ವಿರೋಧಿಯಾಗಿದೆ ಎಂದರು.
ನಾನು ಮಾಡಿದ ಅಭಿವೃದ್ಧಿ ಮುಂದಿಟ್ಟು ಮತ ಕೇಳುವೆ: ಶಾಸಕ ವೀರಣ್ಣ ಚರಂತಿಮಠ
ನಾವು ಅಧಿಕಾರಕ್ಕೆ ಬಂದಿರುವುದೆ ಸಂವಿಧಾನ ಬದಲಿಸಲು ಎನ್ನುತ್ತಾರೆ, ಮೀಸಲಾತಿ ಕಿತ್ತುಕೊಳ್ಳುತ್ತಾರೆ. ಇದಕ್ಕೆ ಸುಪ್ರೀಂ ಕೋರ್ಚ್ ಬಿಜೆಪಿ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಶೋಷಿತ ಜನಾಂಗ ಜಾಗೃತರಾಗಿ ಕೆಟ್ಟಹೃದಯದ ದುಷ್ಟಶಕ್ತಿಗಳ ವಿರುದ್ಧ ಸಮಾಜವನ್ನು ಜಾಗ್ರತಗೊಳಿಸಿ ಬರಲಿರುವ ಚುನಾವಣೆಗಳಲ್ಲಿ ಅವರನ್ನು ಸೋಲಿಸಿ ತಕ್ಕ ಪಾಠವನ್ನು ಕಲಿಸಬೇಕು ಎಂದರು. ಗದಗ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟಜಾತಿ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಕಡೇಮನಿ ಮಾತನಾಡಿ, ಮೀಸಲಾತಿ ರದ್ದು ಮಾಡುವ ಹುನ್ನಾರ ನಡೆದಿದ್ದು, ಶೋಷಿತ ವರ್ಗಗಳು ಎಚ್ಚರಗೊಳ್ಳಬೇಕು. ಎಲ್ಲ ಕಡೆ ಖಾಸಗೀಕರಣ ನಡೆದಿದೆ.
ಯಾರೂ ಪಕ್ಷ ಬಿಡಬಾರದು, ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು: ಬಾಲಚಂದ್ರ ಜಾರಕಿಹೊಳಿ
ಇದು ಮೀಸಲಾತಿ ರದ್ದತಿಯ ಆರಂಭ, ಒಂದು ವೇಲೆ ಮೀಸಲಾತಿ ರದ್ದಾದರೆ ದಲಿತರು ಮತ್ತೆ ಗುಲಾಮಗಿರಿಗೆ ಒಳಗಾಗುತ್ತಾರೆ. ಮತ್ತೆ ಮನುಸ್ಮೃತಿ ವರ್ಗ ನಮ್ಮನ್ನು ಶೋಷಿಸುತ್ತದೆ. ಜಾಗ್ರತರಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಸಂವಿಧಾನ ರಕ್ಷಿಸಿ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.