ಗಾಂಧಿನಗರ ಕ್ಷೇತ್ರದಲ್ಲಿ ಮೆಜೆಸ್ಟಿಕ್‌ನಿಂದ ರಾಜೀವ್ ಗಾಂಧಿ ವೃತ್ತದವರೆಗಿನ ಮಾರ್ಗ ಮಧ್ಯೆ ಬಿಜೆಪಿಯವರು ಬಿಜೆಪಿಯ ಸಾಧನೆಗಳನ್ನು ವಿವರಿಸುವ ಪೋಸ್ಟರ್‌ಗಳನ್ನು ಹಾಕಿದ್ದರು. ರಾತ್ರೋ ರಾತ್ರಿ ಪೋಸ್ಟರ್‌ಗಳ ಮೇಲೆ 40 ಪರ್ಸೆಂಟ್ ಎಂದು ಬರೆಯುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ ಕಾಂಗ್ರೆಸ್ ಕಾರ್ಯಕರ್ತರು.
ಬೆಂಗಳೂರು(ಫೆ.17): ರಾಜ್ಯ ಕಾಂಗ್ರೆಸ್ ಪಕ್ಷವು ಬಿಜೆಪಿ ಸರ್ಕಾರದ ವಿರುದ್ಧದ ‘40% ಅಭಿಯಾನ’ ಮುಂದುವರೆಸಿದ್ದು, ಬಿಜೆಪಿ ಸಾಧನೆಗಳ ‘ಬಿಜೆಪಿಯೇ ಭರವಸೆ’ ಪೋಸ್ಟರ್‌ಗಳ ಮೇಲೆ 40 ಪರ್ಸೆಂಟ್ ಎಂದು ಕಾರ್ಯಕರ್ತರು ಮಸಿ ಬಳಿದಿದ್ದಾರೆ ಎಂದು ತಿಳಿದುಬಂದಿದೆ.
ಗಾಂಧಿನಗರ ಕ್ಷೇತ್ರದಲ್ಲಿ ಮೆಜೆಸ್ಟಿಕ್‌ನಿಂದ ರಾಜೀವ್ ಗಾಂಧಿ ವೃತ್ತದವರೆಗಿನ ಮಾರ್ಗ ಮಧ್ಯೆ ಬಿಜೆಪಿಯವರು ಬಿಜೆಪಿಯ ಸಾಧನೆಗಳನ್ನು ವಿವರಿಸುವ ಪೋಸ್ಟರ್‌ಗಳನ್ನು ಹಾಕಿದ್ದರು. ರಾತ್ರೋ ರಾತ್ರಿ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್‌ಗಳ ಮೇಲೆ 40 ಪರ್ಸೆಂಟ್ ಎಂದು ಬರೆಯುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಹಳ್ಳಿಗಳಿಗೆ ಹೋದರೆ ಡಬಲ್ ಎಂಜಿನ್ ವೈಫಲ್ಯ ತಿಳಿಯುತ್ತೆ: ಎಚ್‌ಡಿಕೆ
ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೋಟೋಗಳ ಮೇಲೆ ದೊಡ್ಡದಾಗಿ 40 ಪರ್ಸೆಂಟ್ ಎಂದು ಕಪ್ಪು ಬಣ್ಣದಲ್ಲಿ ಬರೆದಿದ್ದಾರೆ. ತನ್ಮೂಲಕ ಸರ್ಕಾರದ ವಿರುದ್ಧ 40 ಪರ್ಸೆಂಟ್ ಅಭಿಯಾನವನ್ನು ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
