Bagalkot Election Result 2023: ಬಾಗಲಕೋಟೆಯಲ್ಲಿ ಐದರಲ್ಲಿ ಕಾಂಗ್ರೆಸ್‌, ಎರಡರಲ್ಲಿ ಬಿಜೆಪಿಗೆ ಗೆಲವು

ಬಾಗಲಕೋಟೆ, ಬೀಳಗಿ, ತೇರದಾಳ, ಮುಧೋಳ, ಹುನಗುಂದದಲ್ಲಿ ಆಡಳಿತಾರೂಢ ಬಿಜೆಪಿಯ ಶಾಸಕರಲ್ಲಿ ತೇರದಾಳ ಹೊರತು ಪಡಿಸಿದರೆ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಕಂಡಿದೆ. ಅದರಲ್ಲೂ ಸರ್ಕಾರದಲ್ಲಿ ಕ್ಯಾಬಿನೆಟ್‌ ದರ್ಜೆಯ ಸಚಿವರಾಗಿದ್ದ ಗೋವಿಂದ ಕಾರಜೋಳ ಹಾಗೂ ಮುರಗೇಶ ನಿರಾಣಿ ಅವರ ಸೋಲು ಒಂದೆಡೆಯಾದರೆ ಬಾಗಲಕೋಟೆ ಹಾಗೂ ಹುನಗುಂದದ ಶಾಸಕರಾದ ವೀರಣ್ಣ ಚರಂತಿಮಠ ಹಾಗೂ ದೊಡ್ಡನಗೌಡ ಪಾಟೀಲ ಅವರು ಸೋಲು ಕಂಡಿದ್ದು, ಸಹಜವಾಗಿ ಪಕ್ಷದಲ್ಲಿನ ಆಂತರಿಕ ಕಾರಣಗಳು ಪ್ರಮುಖವಾಗಿವೆ.

Congress Won in five and BJP in two in Bagalkot in Karnataka Election 2023 grg

ಬಾಗಲಕೋಟೆ(ಮೇ.14): ಬಾಗಲಕೋಟೆ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಐದು ಸ್ಥಾನಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ ಪಕ್ಷ ಭರ್ಜರಿ ಗೆಲವು ಕಂಡಿದ್ದು, ಎರಡು ಸ್ಥಾನಗಳಲ್ಲಿ ಮಾತ್ರ ಬಿಜೆಪಿ ಗೆಲ್ಲುವ ಮೂಲಕ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರಿದಾಡಿದೆ.

ಕಳೆದ ಬಾರಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಬಿಜೆಪಿ ಪಡೆದು ಅಗ್ರಸ್ಥಾನದಲ್ಲಿತ್ತು. ಆಗ ಕಾಂಗ್ರೆಸ್‌ ಪಕ್ಷ ಬಾದಾಮಿ ಹಾಗೂ ಜಮಖಂಡಿಯಲ್ಲಿ ಮಾತ್ರ ಗೆಲವು ಕಂಡಿತ್ತು. ಆದರೆ, ಈ ಚುನಾವಣೆಯಲ್ಲಿ ಫಲಿತಾಂಶ ತಿರುಗು ಮುರುಗು ಆಗಿದ್ದು, ಐದರಲ್ಲಿ ಕಾಂಗ್ರೆಸ್‌ ಎರಡರಲ್ಲಿ ಬಿಜೆಪಿ ಗೆಲವು ಕಂಡಿದೆ. ಬಾದಾಮಿ ಮತಕ್ಷೇತ್ರದಲ್ಲಿ ಮಾತ್ರ ಜೆಡಿಎಸ್‌ ಭರವಸೆ ಮೂಡಿಸಿತ್ತು. ಆದರೆ ತ್ರಿಕೋನ ಸ್ಪರ್ಧೆಯ ಕಾರಣದಿಂದ ಅಲ್ಲಿಯೂ ಜೆಡಿಎಸ್‌ ಸೋಲು ಕಂಡಿದ್ದರಿಂದ ಜಿಲ್ಲೆಯಲ್ಲಿ ಶೂನ್ಯ ಸಾಧನೆ ಜೆಡಿಎಸ್‌ದ್ದಾಗಿದೆ.

BADAMI ELECTION RESULT 2023: ಚಿಮ್ಮನಕಟ್ಟಿ ಋುಣ ತೀರಿಸಿದ ಸಿದ್ದರಾಮಯ್ಯ

ಅತಿಯಾದ ವಿಶ್ವಾಸ ಬಿಜೆಪಿಗೆ ಮುಳ್ಳಾಯಿತು:

ಬಾಗಲಕೋಟೆ, ಬೀಳಗಿ, ತೇರದಾಳ, ಮುಧೋಳ, ಹುನಗುಂದದಲ್ಲಿ ಆಡಳಿತಾರೂಢ ಬಿಜೆಪಿಯ ಶಾಸಕರಲ್ಲಿ ತೇರದಾಳ ಹೊರತು ಪಡಿಸಿದರೆ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಕಂಡಿದೆ. ಅದರಲ್ಲೂ ಸರ್ಕಾರದಲ್ಲಿ ಕ್ಯಾಬಿನೆಟ್‌ ದರ್ಜೆಯ ಸಚಿವರಾಗಿದ್ದ ಗೋವಿಂದ ಕಾರಜೋಳ ಹಾಗೂ ಮುರಗೇಶ ನಿರಾಣಿ ಅವರ ಸೋಲು ಒಂದೆಡೆಯಾದರೆ ಬಾಗಲಕೋಟೆ ಹಾಗೂ ಹುನಗುಂದದ ಶಾಸಕರಾದ ವೀರಣ್ಣ ಚರಂತಿಮಠ ಹಾಗೂ ದೊಡ್ಡನಗೌಡ ಪಾಟೀಲ ಅವರು ಸೋಲು ಕಂಡಿದ್ದು, ಸಹಜವಾಗಿ ಪಕ್ಷದಲ್ಲಿನ ಆಂತರಿಕ ಕಾರಣಗಳು ಪ್ರಮುಖವಾಗಿವೆ.

ಇಬ್ಬರ ಸಚಿವರ ಸೋಲು:

ಆಡಳಿತ ವಿರೋ​ಧಿ ಅಲೆ, ಸ್ಥಳೀಯವಾಗಿ ಕಾರ್ಯಕರ್ತರ ಕಡಗಣನೆ, ಒಳಮೀಸಲಾತಿ ಸೇರಿದಂತೆ ಮೇಲ್ವರ್ಗದ ಮೀಸಲಾತಿಯಲ್ಲಿನ ಗೊಂದಲ, ಅ​ಧಿಕಾರಯುತ ರಾಜಕಾರಣದಲ್ಲಿ ಸ್ಥಳೀಯ ಸಮಸ್ಯೆಗಳಿಗೆ ಸಿಗದ ಪ್ರಾಮುಖ್ಯತೆಯ ಕಾರಣಕ್ಕೆ ಸಚಿವರಾದ ಗೋವಿಂದ ಕಾರಜೋಳ ಹಾಗೂ ಮುರಗೇಶ ನಿರಾಣಿ ಸೋಲಬೇಕಾಯಿತು ಎಂದು ಹೇಳಲಾಗುತ್ತಿದೆ.

Mudhol Election Result 2023: ಮುಧೋಳದಲ್ಲಿ ಗೋವಿಂದ ಕಾರಜೋಳಗೆ ಸೋಲು

ಉನ್ನತ ಸ್ಥಾನದಲ್ಲಿ ಇದ್ದ ಇಬ್ಬರು ಸಚಿವರು ತಮ್ಮ ಕ್ಷೇತ್ರಗಳಲ್ಲಿ ಪರಾಭವಗೊಳ್ಳಲು ಬಹುಮುಖ್ಯವಾಗಿದ್ದು ಜಾತಿ ಸಮೀಕರಣದ ಲೆಕ್ಕಾಚಾರ ಸಿಗದೇ ಹೋಗಿದ್ದು ಒಂದಾದರೆ ಅತಿಯಾದ ಆತ್ಮ ವಿಶ್ವಾಸದಲ್ಲಿ ಇದ್ದವರಿಗೆ ತಾವು ಮಾಡಿದ ಅಭಿವೃದ್ಧಿ ಕಾರ್ಯಗಳು ಕೈ ಹಿಡಿಯಲಿವೆ ಎಂಬ ವಿಶ್ವಾಸ ಅತಿಯಾಗಿತ್ತು. ಇದಲ್ಲದೇ ಹಿಂಬಾಲಕರು ಸಹ ಗೆಲವು ನಮ್ಮದೇ ಎಂಬ ನಂಬಿಕೆಯನ್ನು ಹುಟ್ಟಿಸಿದ್ದರಿಂದ ಗ್ರಾಮ ಮಟ್ಟದಲ್ಲಿ ನಡೆದಿರುವ ಆಂತರಿಕ ಬೆಳವಣಿಗೆಗಳನ್ನು ಗುರ್ತಿಸದೇ ಹೋಗಿದ್ದರಿಂದ ಸೋಲಿಗೆ ಶರಣಾಗಬೇಕಾಯಿತು. ತೇರದಾಳ ಜಮಖಂಡಿಯಲ್ಲಿ ಬಿಜೆಪಿ ಗೆಲ್ಲುವ ಮೂಲಕ ತನ್ನ ಕಾರ್ಯಕರ್ತರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆಯಾದರು ಸಹ ಸ್ಥಳೀಯವಾಗಿ ಹಲವು ವಿರೋಧದ ನಡುವೆಯೂ ಗೆಲುವು ಕಂಡಿದ್ದು ಪಕ್ಷಕ್ಕೆ ಸಂತಸ ನೀಡಿದೆ.

ಕಾಂಗ್ರೆಸ್ಸಿಗೆ ಶಕ್ತಿ ನೀಡಿದ ಚುನಾವಣೆ:

ಕಳೆದ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಸೋತು ಕಂಗಾಲಾಗಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಈ ಚುನಾವಣೆ ಸಂಜೀವಿನಿ ಎಂಬಂತೆ ಐದು ಕ್ಷೇತ್ರಗಳಲ್ಲಿ ಮತ್ತೆ ಗೆಲ್ಲುವ ಮೂಲಕ ಶಕ್ತಿ ತಂದುಕೊಂಡಿದೆ. ವಿಶೇಷವಾಗಿ ಕಾರ್ಯಕರ್ತರ ಒಗ್ಗಟ್ಟು, ಅಲ್ಪಸಂಖ್ಯಾತ ಮತಗಳ ಕ್ರೋಢಿಕರಣ, ಹಿಂದುಳಿದ ವರ್ಗಗಳು ಕಾಂಗ್ರೆಸ್ಸಿಗೆ ಕೈಹಿಡಿದಿದ್ದು ಬಲ ತಂದರೆ, ಲಿಂಗಾಯತ ಮತಗಳು ಸಹ ಅಲ್ಪಪ್ರಮಾಣದಲ್ಲಿ ಬಂದಿದ್ದರಿಂದ ಐದು ಕ್ಷೇತ್ರಗಳಲ್ಲಿ ಗೆಲವು ಕಾಣಲು ಸಾಧ್ಯವಾಗಿದೆ.

Latest Videos
Follow Us:
Download App:
  • android
  • ios