Asianet Suvarna News Asianet Suvarna News

ಜೆಡಿಎಸ್ ಶಾಸಕರ ನಿರ್ಲಕ್ಷ್ಯದಿಂದ ಕಾಂಗ್ರೆಸ್‌ಗೆ ಜಯ: ಬಲ್ಲಾಹುಣ್ಸಿ ರಾಮಣ್ಣ

ಬಿಜೆಪಿ ಪುರಸಭೆ ಸದಸ್ಯರು ಸ್ಥಳೀಯ ಜೆಡಿಎಸ್ ಶಾಸಕರ ಜತೆ ಗುರುತಿಸಿಕೊಂಡಿದ್ದ ಪರಿಣಾಮ ಪುರಸಭೆ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಮತಗಳೊಂದಿಗೆ ಗೆಲುವು ಸಾಧಿಸಲು ಸಾಧ್ಯವಾಗಿದೆ: ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಲ್ಲಾಹುಣ್ಸಿ ರಾಮಣ್ಣ 

Congress wins due to neglect of JDS MLAs at Hagaribommanahalli in Vijayanagara grg
Author
First Published Sep 26, 2024, 11:36 AM IST | Last Updated Sep 26, 2024, 11:36 AM IST

ಹಗರಿಬೊಮ್ಮನಹಳ್ಳಿ(ಸೆ.26):  ಕ್ಷೇತ್ರದ ಜೆಡಿಎಸ್ ಶಾಸಕ ನೇಮರಾಜ ನಾಯ್ಕ ಅವರ ವೈಫಲ್ಯದಿಂದಾಗಿ ಕಾಂಗ್ರೆಸ್‌ನ ಪುರಸಭೆ ಸದಸ್ಯರ ಬಲ ೧೨ರಿಂದ೧೪ಕ್ಕೆ ಏರಿಕೆಯಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಲ್ಲಾಹುಣ್ಸಿ ರಾಮಣ್ಣ ತಿಳಿಸಿದರು.

ಪಟ್ಟಣದ ಪುರಸಭೆ ಅಧ್ಯಕ್ಷರ ಆಯ್ಕೆ ಕುರಿತಂತೆ ಪ್ರತಿಕ್ರಿಯಿಸಿ, ಬಿಜೆಪಿ ಪುರಸಭೆ ಸದಸ್ಯರು ಸ್ಥಳೀಯ ಜೆಡಿಎಸ್ ಶಾಸಕರ ಜತೆ ಗುರುತಿಸಿಕೊಂಡಿದ್ದ ಪರಿಣಾಮ ಪುರಸಭೆ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಮತಗಳೊಂದಿಗೆ ಗೆಲುವು ಸಾಧಿಸಲು ಸಾಧ್ಯವಾಗಿದೆ. ಮುಂಬರುವ ಜಿಪಂ, ಮತ್ತು ತಾಪಂ ಚುನಾವಣೆಗಳಲ್ಲಿ ಜೆಡಿಎಸ್ ಶಾಸಕರಿಂದ ಗೆಲುವು ತಂದುಕೊಡಲು ಸಾಧ್ಯವಿಲ್ಲ ಎಂಬುದನ್ನು ಕೊಟ್ಟೂರು, ಮರಿಯಮ್ಮನಹಳ್ಳಿ ಮತ್ತು ಹಬೊಹಳ್ಳಿ ಪುರಸಭೆ ಚುನಾವಣೆ ಸಾಬೀತುಪಡಿಸಿವೆ.

ಪಿತೃಪಕ್ಷದಲ್ಲಿ ಮಾಡಿದ ಎಡವಟ್ಟಿನಿಂದ ಸಿಎಂಗೆ ಕಂಟಕ ಎದುರಾಯ್ತೇ?

ಬಿಜೆಪಿಯಿಂದ ಆಯ್ಕೆಯಾದ ೧೧ ಸದಸ್ಯರು ಕೇವಲ ತಾಂತ್ರಿಕವಾಗಿ ಬಿಜೆಪಿಯೊಂದಿಗಿದ್ದರು. ಈ ಪೈಕಿ ಮೂವರು ಸದಸ್ಯರು ಮಾತ್ರ ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯೊಂದಿಗೆ ಗುರುತಿಸಿಕೊಂಡಿದ್ದರು. ಉಳಿದ ಸದಸ್ಯರು ಜೆಡಿಎಸ್ ಶಾಸಕರೊಂದಿಗೆ ಗುರುತಿಸಿಕೊಂಡಿದ್ದರು. ಶಾಸಕರ ತಂತ್ರಕ್ಕೆ ಪ್ರತಿತಂತ್ರವಾಗಿ ಕಾಂಗ್ರೆಸ್‌ನವರು ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿದ್ದ ಇಬ್ಬರು ಸದಸ್ಯರನ್ನು ಸೆಳೆಯುವಲ್ಲಿ ಯಶಸ್ವಿಯಾದ ಪರಿಣಾಮ ಕಾಂಗ್ರೆಸ್ ಸಂಖ್ಯಾಬಲ ೧೪ಕ್ಕೆ ಏರಿಕೆಯಾಯಿತು. ಎಂದರು.

Latest Videos
Follow Us:
Download App:
  • android
  • ios