ಬೆಂಗಳೂರು (ನ.01):  ಆರ್.ಆರ್ ಉಪಚುನಾವಣೆಯಲ್ಲಿ ವಾತಾವರಣ ಕಾಂಗ್ರೆಸ್ ಪರವಾಗಿದೆ. ಮುನಿರತ್ನ ವಿರುದ್ಧ ಕಾಂಗ್ರೆಸ್, ಜೆಡಿಎಸ್ ಬಿಜೆಪಿ ಕಾರ್ಯಕರ್ತರೆಲ್ಲರು ಸಿಡಿದೆದ್ದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. 

ಬೆಂಗಳೂರಿನಲ್ಲಿಂದ ಮಾತನಾಡಿದ ಡಿಕೆ ಶಿವಕುಮಾರ್  ಬಿಜೆಪಿ ಕಾರ್ಯಕರ್ತರ ಮೇಲೆ ಮುನಿರತ್ನ ಹಾಕಿಸಿರುವ ಪ್ರಕರಣಗಳನ್ನ ಇನ್ನೂ ವಾಪಸ್ ತೆಗೆದುಕೊಳ್ಳಲಾಗಿಲ್ಲ. ಬಿಜೆಪಿ ಸರ್ಕಾರ ಬಂದು ಒಂದು ವರ್ಷ ಆಗಿದೆ. ಮುನಿರತ್ನ ಅವರ ವಿರುದ್ಧ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಎಂದು ಹೇಳಿದರು. 

ಆರ್‌ ಆರ್‌ ನಗರ ಚುನಾವಣೆ ಆರೋಪ : ಇಬ್ಬರ ಬಿಟ್ಟು ಮೂರನೆಯವರಿಗೆ ಆಗುತ್ತಾ ಲಾಭ..? .

ಇನ್ನು ಚುನಾವಣೆಗೆ  ತೇಜಸ್ವಿನಿ ರಮೇಶ್, ರಮ್ಯ ಅವರನ್ನು ಚುನಾವಣೆಗಳಲ್ಲಿ ನಾನು ನಿಲ್ಲಿಸಿರಲಿಲ್ಲ. ಪಕ್ಷ ನಿರ್ಧರಿಸಿತ್ತು.  ನಾನು ಕಾರ್ಯಕರ್ತನಾಗಿ ಕೆಲಸ ಮಾಡಿದ್ದೆ.
ಈ ಬಾರಿ ಕುಸುಮಾ ಅವರಿಗೂ ಕೂಡ ಸೋನಿಯಾ ಗಾಂಧಿ ಅವರು ಟಿಕೆಟ್ ಕೊಟ್ಟಿದ್ದಾರೆ.  ನಾನು ಪಕ್ಷ ಕಾರ್ಯಕರ್ತನ ರೀತಿಯಲ್ಲೇ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿದ್ಯಾವಂತೆ. ಈ ನಿಟ್ಟಿನಲ್ಲಿ  ಕುಸುಮಾಗೆ ಕಾಂಗ್ರೆಸ್ ಚಿಹ್ನೆ ಕೊಟ್ಟಿದೆ. ಜನರು‌ ಕೂಡ ಕುಸುಮಾ ಪರ ನಿಂತಿದ್ದಾರೆ‌. ಆರ್.ಆರ್ ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಾತಿ ಮಾಡಿಲ್ಲ. ಕಾಂಗ್ರೆಸ್ ಯಾವತ್ತು ನೀತಿಯನ್ನ ಪಾಲಿಸುತ್ತೆ. ಕಾಂಗ್ರೆಸ್ ಎಲ್ಲ ವರ್ಗಗಳ ಪರವಾಗಿದೆ ಎಂದು ಡಿಕೆಶಿ ಹೇಳಿದರು. 

ಯಡಿಯೂರಪ್ಪ ಅವರೇ ಈ ಹಿಂದೆ ಜಾತಿ ಪಾಲಿಟಿಕ್ಸ್ ಮಾಡಿದ್ರು.  ಯಡಿಯೂರಪ್ಪ ಗೆಲ್ಲದಿದ್ರೆ  ಲಿಂಗಾಯತರಿಗೆ ತೊಂದರೆ ಆಗುತ್ತೆ ಎಂದು ಡಿಕೆಶಿ ಹೇಳಿದ್ದರು. ನಾವು ಆ ರೀತಿ ಜಾತಿ ರಾಜಕಾರಣ ಮಾಡಲಿಲ್ಲ. ಆರ್.ಆರ್‌ ನಗರದಲ್ಲಿ ಎಲ್ಲ ವರ್ಗದ ಮತಗಳನ್ನ ನಾವು ಕೇಳಿದ್ದೇವೆ. ಗಾರ್ಮಿಂಟ್ಸ್ ವರ್ಕರ್ಸ್, ಕಾರ್ಮಿಕರಲ್ಲಿ ಮನವಿ ಮಾಡಿದ್ದೇವೆ ಎಂದು ಡಿಕೆ ಶಿವಕುಮಾರ್ ಆರ್‌ ಆರ್‌ ನಗರದಲ್ಲಿ ಗೆಲುವಿನ ಭರವಸೆ ವ್ಯಕ್ತಪಡಿಸಿದರು.