ಲೋಕಸಭೆ ಚುನಾವಣೇಲೂ ನಮ್ಮದೇ ಹವಾ: ಸಚಿವ ತಿಮ್ಮಾಪೂರ

ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ ಹೀಗೇ ಗೆಲುವು ಸಾಧಿಸುತ್ತದೆ. ರಾಜ್ಯದಲ್ಲಿ ಅತ್ಯಧಿಕ ಕ್ಷೇತ್ರಗಳನ್ನು ನಾವು ಗೆದ್ದೇ ಗೆಲ್ಲುತ್ತೇವೆ. ಅದರಲ್ಲಿ ಪ್ರಶ್ನೆಯೇ ಇಲ್ಲ ಎಂದ ತಿಮ್ಮಾಪೂರ, ಬಿಜೆಪಿ ಜನರ ವಿಶ್ವಾಸ ಉಳಿಸಿಕೊಂಡಿಲ್ಲ. ಜನರ ಮೇಲೂ ಬಿಜೆಪಿಗರಿಗೆ ಭರವಸೆ ಇಲ್ಲ. ಇಂತಹ ಗೊಂದಲದ ಸ್ಥಿತಿಯಲ್ಲಿ ಆ ಪಕ್ಷವಿದೆ ಎಂದು ವ್ಯಂಗ್ಯವಾಡಿದ ಸಚಿವ ಆರ್‌.ಬಿ.ತಿಮ್ಮಾಪೂರ 

Congress Will Be Win the Lok Sabha Elections 2024 as well Says Minister RB Timmapur grg

ಬಾಗಲಕೋಟೆ(ಜೂ.04):  ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಗೆಲುವು ನಮ್ಮದಾಗಲಿದೆ. ಇದಕ್ಕಾಗಿ ಸದ್ಯದಲ್ಲೇ ಕಾಂಗ್ರೆಸ್‌ ಪಕ್ಷ ತಯಾರಿ ಆರಂಭಿಸಲಿದೆ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಹೇಳಿದರು. ಶನಿವಾರ ಮುಧೋಳ ತಾಲೂಕಿನ ಲಕ್ಷಾನಟ್ಟಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯ ಬಿಜೆಪಿಯಲ್ಲಿ ಸಮರ್ಥ ನಾಯಕತ್ವವಿಲ್ಲ. ಇದು ಬಿಜೆಪಿಯ ದುರ್ದೈವ. ಹಾಗಾಗಿಯೇ ರಾಜ್ಯದ ಜನತೆ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ ಹೀಗೇ ಗೆಲುವು ಸಾಧಿಸುತ್ತದೆ. ರಾಜ್ಯದಲ್ಲಿ ಅತ್ಯಧಿಕ ಕ್ಷೇತ್ರಗಳನ್ನು ನಾವು ಗೆದ್ದೇ ಗೆಲ್ಲುತ್ತೇವೆ. ಅದರಲ್ಲಿ ಪ್ರಶ್ನೆಯೇ ಇಲ್ಲ ಎಂದ ತಿಮ್ಮಾಪೂರ, ಬಿಜೆಪಿ ಜನರ ವಿಶ್ವಾಸ ಉಳಿಸಿಕೊಂಡಿಲ್ಲ. ಜನರ ಮೇಲೂ ಬಿಜೆಪಿಗರಿಗೆ ಭರವಸೆ ಇಲ್ಲ. ಇಂತಹ ಗೊಂದಲದ ಸ್ಥಿತಿಯಲ್ಲಿ ಆ ಪಕ್ಷವಿದೆ ಎಂದು ವ್ಯಂಗ್ಯವಾಡಿದರು.

ರೈತನ ಕೈ ಹಿಡಿಯುತ್ತಾ ರೋಹಿಣಿ ಮಳೆ?: ಭೂಮಿ ಹದಗೊಳಿಸಿ ಸಜ್ಜುಗೊಳಿಸಿದ ಅನ್ನದಾತ

ನಾವು ನೀಡಿದ ಭರವಸೆ ಈಡೇರಿಸುತ್ತೇವೆ ಅಂದ್ರೆ, ಅದ್ಹೇಗೆ ಈಡೇರಿಸ್ತೀರಿ? ಅಂತಿದ್ರು. ನಾವು ಘೋಷಿಸಿದ ಗ್ಯಾರಂಟಿಗಳನ್ನು ಕೊಡುವವರೆಗೂ ಇವರು ಕೊಡೋದಿಲ್ಲ ಅಂದ್ರು. ಆದರೆ, ಈಗ ಕೊಟ್ಟಮೇಲೆ ಎಲ್ಲಿಂದ ಕೊಡ್ತಾರೆ ಅಂತಿದ್ದಾರೆ. ಈ ಹಿಂದೆ 600 ಭರವಸೆ ನೀಡಿ ಮೋಸ ಮಾಡಿದವರಿಂದ ನಾವು ಏನನ್ನೂ ಕಲಿಯಬೇಕಿಲ್ಲ ಎಂದು ಬಿಜೆಪಿ ವಿರುದ್ಧ ಸಚಿವ ತಿಮ್ಮಾಪೂರ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ನೀಡಿದ ಗ್ಯಾರಂಟಿಗಳನ್ನು ಘೋಷಿಸಿ ಅನುಷ್ಠಾನಗೊಳಿಸುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರು ಜನರಿಗೆ ಮಾತು ಕೊಟ್ಟಂತೆ ನಡೆದುಕೊಂಡ ನಾಯಕ. ಇನ್ನು, ಡಿ.ಕೆ.ಶಿವಕುಮಾರ ಸಹ ರಾಜ್ಯದಲ್ಲಿ ಸಮರ್ಥವಾಗಿ ಪಕ್ಷ ಕಟ್ಟಿದ್ದಾರೆ. ನಾವು ಜನತೆಗೆ ಮಾತು ಕೊಟ್ಟಂತೆ ನಡೆದುಕೊಳ್ಳುತ್ತೇವೆ. ನಮ್ಮದು ಸಮರ್ಥ ಸರ್ಕಾರ ಇದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios